ಆಗಸ್ಟ್ 2ರಂದು 'ಕುರುಕ್ಷೇತ್ರ' ಬಿಡುಗಡೆ, ಅಭಿಮಾನಿಗಳ ಕಾತರ
ಬಹು ತಾರಾಗಣವಿರುವ ಕಾಂಗ್ರೆಸ್ ಶಾಸಕ ಮುನಿರತ್ನ ನಿರ್ಮಾಣದ ‘ಕುರುಕ್ಷೇತ್ರ’ ಬಿಡುಗಡೆಗೆ ಎರಡೇ ವಾರ ಬಾಕಿಯಿರುವಾಗಲೇ ಚಾಲೆಂಜಿಂಗ್ ಸ್ಟಾರ್....

Published On :
ಬೆಂಗಳೂರು: ಬಹು ತಾರಾಗಣವಿರುವ ಕಾಂಗ್ರೆಸ್ ಶಾಸಕ ಮುನಿರತ್ನ ನಿರ್ಮಾಣದ ‘ಕುರುಕ್ಷೇತ್ರ’ ಬಿಡುಗಡೆಗೆ ಎರಡೇ ವಾರ ಬಾಕಿಯಿರುವಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ಅತ್ಯಾಕರ್ಷಕ ಪೋಸ್ಟರ್ ಮೂಲಕ ನಮನ ಸಲ್ಲಿಸುತ್ತಿದ್ದಾರೆ.
ದುರ್ಯೋಧನನಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಭೀಷ್ಮನಾಗಿ ರೆಬೆಲ್ ಸ್ಟಾರ್ ಅಂಬರೀಶ್, ಕೃಷ್ಣನಾಗಿ ಕ್ರೇಜಿಸ್ಟಾರ್ ರವಿಚಂದ್ರನ್, ಅರ್ಜುನನಾಗಿ ಅರ್ಜುನ್ ಸರ್ಜಾ, ನಿಖಿಲ್ ಕುಮಾರ್ ಅಭಿಮನ್ಯುವಾಗಿ ಪೌರಾಣಿಕ ಪಾತ್ರಗಳಲ್ಲಿ ಮಿಂಚಿರುವ 'ಕುರುಕ್ಷೇತ್ರ' ಚಿತ್ರ ಆಗಸ್ಟ್ 2ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
‘ಕುರುಕ್ಷೇತ್ರ’ ಚಿತ್ರವನ್ನು ವೀಕ್ಷಿಸಲು ತಾವೂ ಸಹ ಕುತೂಹಲದಿಂದ ಕಾದಿರುವುದಾಗಿ ಹಿರಿಯ ನಟಿ, ಸಂಸದೆ ಸುಮಲತಾ ಅಂಬರೀಶ್ ಟ್ವೀಟ್ ಮಾಡಿದ್ದಾರೆ.
ಚಿತ್ರದಲ್ಲಿ ದುರ್ಯೋಧನ(ದರ್ಶನ್) ಹಾಗೂ ಭಾನುಮತಿ (ಮೇಘನಾ ರಾಜ್) ಪ್ರಣಯ ಗೀತೆಯೊಂದರಲ್ಲಿ ಕಾಣಿಸಿಕೊಂಡಿದ್ದಾರಂತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


