MTB Nagaraj

ಖಾತೆ ಹಂಚಿಕೆ ಬೆನ್ನಲ್ಲೇ ಭುಗಿಲೆದ್ದ ಅಸಮಾಧಾನ: ರೆಬೆಲ್ ಆದ ಆನಂದ್ ಸಿಂಗ್, ಎಂಟಿಬಿ ನಾಗರಾಜ್
ಸಿಎಂ ಬಸವರಾಜ ಬೊಮ್ಮಾಯಿ ಮಂತ್ರಿಮಂಡಲದಲ್ಲಿ 29 ಸಚಿವರಿಗೆ ಖಾತೆ ಹಂಚಿಕೆ ಮಾಡಿಯಾದ ಬೆನ್ನಲ್ಲೇ ಹಲವರ ಅಸಮಾಧಾನ ಸ್ಫೋಟಗೊಂಡಿದೆ. ತಮ್ಮಿಷ್ಟದ ಖಾತೆ ಸಿಕ್ಕಿಲ್ಲ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ತಮಗೆ ಸಚಿವ ಸ್ಥಾನ ನೀಡಲಿಲ್ಲವೇಕೆ ಎಂದು ಮುಖ್ಯಮಂತ್ರಿಗಳ ಮನೆಬಾಗಿಲು ತಟ್ಟುತ್ತಿದ್ದಾರೆ.

ಯಡಿಯೂರಪ್ಪ ನಾಯಕತ್ವ ಒಪ್ಪಿ ಬಿಜೆಪಿಗೆ ಬಂದಿದ್ದೇವು, ಅವರ ರಾಜೀನಾಮೆ ನಿರೀಕ್ಷಿಸರಲಿಲ್ಲ: ಎಂಟಿಬಿ ನಾಗರಾಜ್
ಬಿಎಸ್ ಯಡಿಯೂರಪ್ಪನವರ ನಾಯಕತ್ವ ಒಪ್ಪಿಕೊಂಡು ನಾವು ಬಿಜೆಪಿಗೆ ಬಂದಿದ್ದೇವು. ಆದರೆ ಯಡಿಯೂರಪ್ಪನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನಿರೀಕ್ಷಿಸಿರಲಿಲ್ಲ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರು ಮಂಗಳವಾರ ಹೇಳಿದ್ದಾರೆ.

ಯಡಿಯೂರಪ್ಪನವರು ಬಿಟ್ಟುಕೊಟ್ಟರೆ ನನಗೂ ಮುಖ್ಯಮಂತ್ರಿಯಾಗಬೇಕೆಂಬ ಆಸೆಯಿದೆ: ಎಂಟಿಬಿ ನಾಗರಾಜ್
ರಾಜ್ಯದ ಮುಖ್ಯಮಂತ್ರಿಯಾಗುವ ಆಸೆ ಯಾರಿಗೆ ಇರುವುದಿಲ್ಲ ಹೇಳಿ, ನನಗೂ ಮುಖ್ಯಮಂತ್ರಿಯಾಗುವ ಆಸೆ ಇದೆ ಎಂದು ಪೌರಾಡಳಿತ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಹೊಸ ಬಾಂಬ್ ಸಿಡಿಸಿದ್ದಾರೆ.

ಸಚಿವ ಎಂಟಿಬಿ ನಾಗರಾಜ್ ಗೆ ಬೆಂಗಳೂರು ಗ್ರಾಮಾಂತರ ಉಸ್ತುವಾರಿ: ಬೆಂಗಳೂರು ನಗರ ಮೇಲೆ ಆರ್.ಅಶೋಕ್ ಕಣ್ಣು!
ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಅವರನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಉಸ್ತುವಾರಿ ಸಚಿವರನ್ನಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇಮಕ ಮಾಡಿದ್ದಾರೆ. ಈ ಹಿಂದೆ ಆರ್ ಅಶೋಕ್ ಅವರ ಕೈಯಲ್ಲಿ ಗ್ರಾಮಾಂತರ ಜಿಲ್ಲೆಯ ಉಸ್ತುವಾರಿಯಿತ್ತು.

ಶರತ್ ಬಚ್ಚೇಗೌಡ ಕುಟುಂಬ ಬಡವರ 229 ಎಕರೆ ಕೃಷಿ ಜಮೀನು ಕಬಳಿಸಿಕೊಂಡಿದೆ: ಸಚಿವ ಎಂಟಿಬಿ ನಾಗರಾಜ್ ಗಂಭೀರ ಆರೋಪ
ಹೊಸಕೋಟೆಯಲ್ಲಿ ಸಚಿವ ಎಂಟಿಬಿ ನಾಗರಾಜ್ ಮತ್ತು ಶಾಸಕ ಶರತ್ ಬಚ್ಚೇಗೌಡ ನಡುವಿನ ಜಗಳ ತಾರಕಕ್ಕೇರಿದೆ. ಬಡವರ ಕೃಷಿ ಜಮೀನು ಮತ್ತು ಸ್ಮಶಾನದ ಜಮೀನುಗಳನ್ನು ಶರತ್ ಬಚ್ಚೇಗೌಡರ ತಂದೆ ಕಬಳಿಸಿದ್ದಾರೆ ಎಂದು ಸಚಿವ ಎಂಟಿಬಿ ನಾಗರಾಜ್ ಆರೋಪಿಸಿದ್ದಾರೆ.

'ತ್ಯಾಗ ಮಾಡಿರುವವರಿಗೆ ಮೊದಲ ಆದ್ಯತೆ ನೀಡಿ: ಆಮೇಲೆ ಪಕ್ಷದಲ್ಲಿ ಯಾರಿಗಾದರೂ ಮಂತ್ರಿ ಸ್ಥಾನ ನೀಡಿ'
ನಮ್ಮನ್ನು ನೋಡಿದಾಗಲೆಲ್ಲ ಕೂಡಲೇ ಮಂತ್ರಿ ಮಾಡುವುದಾಗಿ ಸಿಎಂ ಹೇಳುತ್ತಾರೆ, ಆದರೆ ಇನ್ನೂ ಕೂಡ ನಮ್ಮನ್ನು ಮಂತ್ರಿ ಮಾಡಲು ನಿರ್ಧಾರ ಮಾಡಿಲ್ಲ ಎಂದು ಎಂಟಿಬಿ ನಾಗರಾಜ್ ಅಸಮಾಧಾನ ಹೊರ ಹಾಕಿದ್ದಾರೆ.

ಶೀಘ್ರದಲ್ಲೇ ರಾಜ್ಯ ಸಂಪುಟ ವಿಸ್ತರಣೆ: ಎಂಟಿಬಿ ನಾಗರಾಜ್
ಮುಂದಿನ 15 ದಿನಗಳಲ್ಲಿ ರಾಜ್ಯ ಸಂಪುಟ ವಿಸ್ತರಣೆಯಾಗಲಿದೆ ಎಂದು ಎಂಎಲ್'ಸಿ ಎಂಟಿಬಿ ನಾಗರಾಜ್ ಅವರು ಶನಿವಾರ ಹೇಳಿದ್ದಾರೆ.

'ಸಚಿವ ಸ್ಥಾನ ನೂರಕ್ಕೆ ನೂರರಷ್ಟು ಖಾತರಿ, ಒಂದು ಭಾಗ ಮುಗಿದಿದೆ, 2ನೇ ಭಾಗ ಶೀಘ್ರವೇ ತಿಳಿಯಲಿದೆ'
ನಾವು ಅನರ್ಹರಿಂದ ಇದೀಗ ಅರ್ಹರಾಗಿದ್ದೇವೆ, ಪರಿಷತ್ ಸದಸ್ಯರಾಗಿದ್ದೇವೆ. ಸಚಿವ ಸ್ಥಾನ ನಮಗೆ ನೂರಕ್ಕೆ ನೂರರಷ್ಟು ಸಿಗುತ್ತದೆ ಎಂದು ಆರ್.ಶಂಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪರಿಷತ್ ಚುನಾವಣೆ: ಎಂಟಿಬಿ ನಾಗರಾಜ್ 1224 ಕೋಟಿ, ಬಿ.ಕೆ.ಹರಿಪ್ರಸಾದ್ 14 ಕೋಟಿ ಒಡೆಯ
ವಿಧಾನ ಪರಿಷತ್ ಚುನಾವಣೆಗೆ ಗುರುವಾರ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳ ಪೈಕಿ ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರು ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದು, 1224 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.

