Modi

ಮೋದಿ ಸಂಪುಟಕ್ಕೆ ಮೇಜರ್ ಸರ್ಜರಿ: ಮುಂಗಾರು ಅಧಿವೇಶನಕ್ಕೂ ಮುನ್ನ ಹಲವು ಸಚಿವರ ಖಾತೆ ಬದಲಾವಣೆ, BJP ಸಂಘಟನೆಯಲ್ಲೂ ಭಾರೀ ಬದಲಾವಣೆ..?
ಮೂಲಗಳ ಪ್ರಕಾರ, ಕೇಂದ್ರ ಸಚಿವ ಸಂಪುಟ ಪುನಾರಚನೆ ಹಾಗೂ ಬಿಜೆಪಿಯ ಹೊಸ ಸಂಘಟನಾ ತಂಡದ ಘೋಷಣೆ ಎರಡನ್ನೂ ಒಂದೇ ಅವಧಿಯಲ್ಲಿ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಪ್ರಧಾನಿ ಮೋದಿ ಬಳಿಕ ರಾಷ್ಟ್ರಪತಿಗಳ ಭೇಟಿಯಾದ ಅಮಿತ್ ಶಾ; ಹೆಚ್ಚಿದ ಕುತೂಹಲ, ಕೇಂದ್ರ ಸಚಿವ ಸಂಪುಟದಲ್ಲಿ ಮೇಜರ್ ಸರ್ಜರಿ?
ಎರಡು ದಿನಗಳ ಹಿಂದಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸದ ಬಳಿಕ ಸಂಪ್ರದಾಯದಂತೆ ರಾಷ್ಟ್ರಪತಿಯನ್ನು ಭೇಟಿಯಾಗಿ ಮಾಹಿತಿ ನೀಡಿದ್ದರು. ಆದರೆ, ಅಮಿತ್ ಶಾ ಅವರ ಭೇಟಿ ಸಚಿವ ಸಂಪುಟ ಪುನಾರಚನೆಗೆ ಸಂಬಂಧಿಸಿದ ಚರ್ಚೆಗಳಿಗೆ ಮತ್ತಷ್ಟು ಬಲ ನೀಡಿದೆ.

ಭಾರೀ ಭೂಕಂಪಕ್ಕೆ ವೆನೆಜುವೆಲಾ ತತ್ತರ: ಮೃತರ ಕುಟುಂಬಗಳಿಗೆ ಪ್ರಧಾನಿ ಮೋದಿ ಸಂತಾಪ, ಮಾನವೀಯ ನೆರವಿಗೆ ಭಾರತ ಸಜ್ಜು..!
ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿರುವ ಪ್ರಧಾನಿ, ಈ ಕಠಿಣ ಸಮಯದಲ್ಲಿ ಭಾರತವು ವೆನೆಜುವೆಲಾ ಜನರೊಂದಿಗೆ ಒಟ್ಟಾಗಿ ನಿಂತಿದ್ದು, ಸಾಧ್ಯವಾದ ಎಲ್ಲ ನೆರವು ನೀಡಲು ಸಿದ್ಧವಿದೆ.

ತುರ್ತು ಪರಿಸ್ಥಿತಿ ಸಂವಿಧಾನದ ಮೇಲಿನ ನೇರ ದಾಳಿ: 1975ರ ಕರಾಳ ಅಧ್ಯಾಯ ಸ್ಮರಿಸಿದ ಪ್ರಧಾನಿ ಮೋದಿ..!
ತುರ್ತು ಪರಿಸ್ಥಿತಿ ಭಾರತದ ಇತಿಹಾಸದ ಅತ್ಯಂತ ಕರಾಳ ಅಧ್ಯಾಯಗಳಲ್ಲಿ ಒಂದಾಗಿದೆ. ಆ ಸಂದರ್ಭದಲ್ಲಿ ಸಂವಿಧಾನದ ಮೌಲ್ಯಗಳನ್ನು ಉಳಿಸಲು ಹೋರಾಡಿದ ಎಲ್ಲರಿಗೂ ನಾನು ಗೌರವ ಸಲ್ಲಿಸುತ್ತೇನೆ.

International Yoga Day 2026: ವಯಸ್ಸನ್ನು ಮೀರಿಸುವ ಆರೋಗ್ಯದ ಮಂತ್ರ ಯೋಗ; 50ಕ್ಕಿಂತ 70ರ ವಯಸ್ಸಿನಲ್ಲಿ ಹೆಚ್ಚು ಆರೋಗ್ಯವಂತರಾಗೋಣ: ಪ್ರಧಾನಿ ಮೋದಿ
ಯೋಗವು ಕೇವಲ ನಮ್ಮ ಜೀವನಶೈಲಿಯ ಭಾಗವಲ್ಲ; ವಿಶ್ವದ ಉತ್ತಮ ಭವಿಷ್ಯಕ್ಕಾಗಿ ಅಗತ್ಯವಾದ ಸಾಧನವಾಗಿದೆ. ಯೋಗವನ್ನು ಕೇವಲ ಒಂದು ದಿನದ ಆಚರಣೆಗೆ ಸೀಮಿತಗೊಳಿಸದೆ, ಜೀವನಶೈಲಿಯ ಭಾಗವಾಗಿಸಿಕೊಳ್ಳಿ.

ಲೆಬನಾನ್ ವಿಚಾರದಲ್ಲಿ ಕೇಂದ್ರ ಸರ್ಕಾರ ಮೌನ: 'ಮೋದಿ ಭಕ್ತಿ ಇಸ್ರೇಲ್‌ಗೆ, ನಷ್ಟ ಭಾರತಕ್ಕೆ'; ಕಾಂಗ್ರೆಸ್ ವಾಗ್ದಾಳಿ
ಅಮೆರಿಕಾ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದವನ್ನು ಜಗತ್ತಿನ ಹೆಚ್ಚಿನ ದೇಶಗಳು ಎಚ್ಚರಿಕೆಯಿಂದ ಒಪ್ಪಿಕೊಂಡಿದ್ದರೂ, ಅದರ ಯಶಸ್ಸಿಗೆ ಪ್ರಮುಖ ಅಡೆತಡೆ ಇಸ್ರೇಲ್‌ನಿಂದಲೇ ಎದುರಾಗುತ್ತಿದೆ.

ಮೋದಿ Great leader, ಯುದ್ಧಗಳಿಂದ ದೂರ ಉಳಿಯುವ ಬುದ್ಧಿವಂತ, ಇಂತಹ ನಾಯಕ Hollywoodನಲ್ಲೂ ಸಿಗಲ್ಲ: ಡೊನಾಲ್ಡ್ ಟ್ರಂಪ್
ನಾವು ಈಗ ಭಾರತದೊಂದಿಗೆ ನ್ಯಾಯಯುತ ವ್ಯಾಪಾರ ನಡೆಸುತ್ತಿದ್ದೇವೆ. ಹಿಂದೆ ಅವರು ನಮ್ಮನ್ನು ಸಾಕಷ್ಟು ಲಾಭಕ್ಕೆ ಬಳಸಿಕೊಳ್ಳುತ್ತಿದ್ದರು. ಅದಕ್ಕೆ ನಾನು ಭಾರತವನ್ನು ದೂಷಿಸುವುದಿಲ್ಲ. ಅದಕ್ಕೆ ಅವಕಾಶ ಕೊಟ್ಟ ನಮ್ಮ ರಾಜಕಾರಣಿಗಳೇ ಕಾರಣ.

ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ 1 ಕೋಟಿ ರೂ ಪರಿಹಾರ ನೀಡಿ; ಪ್ರಧಾನಿ ಮೋದಿಗೆ Cockroach Janta Party ಪತ್ರ
ದೇಶದ ಭವಿಷ್ಯವಾದ ಯುವ ವಿದ್ಯಾರ್ಥಿಗಳ ಜೀವ ಮತ್ತು ಮಾನಸಿಕ ಆರೋಗ್ಯಕ್ಕೆ ಗಂಭೀರ ಅಪಾಯ ಎದುರಾಗಿದೆ. ಈ ಬಗ್ಗೆ ನಿಮ್ಮ ಗಮನ ಸೆಳೆಯಲು ಭಾರವಾದ ಮನಸ್ಸಿನಿಂದ ಈ ಪತ್ರ ಬರೆಯುತ್ತಿದ್ದೇನೆ.

PaK ಮಧ್ಯಸ್ಥಿಕೆಯಲ್ಲಿ US-Iran ಒಪ್ಪಂದ: ಮೋದಿ ವಿದೇಶಾಂಗ ನೀತಿಗೆ ಹಿನ್ನಡೆ; ಕಾಂಗ್ರೆಸ್ ವಾಗ್ದಾಳಿ
ಅಮೆರಿಕಾ-ಇರಾನ್ ಒಪ್ಪಂದಕ್ಕೆ ‘ಇಸ್ಲಾಮಾಬಾದ್ MoU’ ಎಂದು ಹೆಸರು ಬಂದಿರುವುದು ಪಾಕಿಸ್ತಾನದ ಹೊಸ ಪ್ರಾದೇಶಿಕ ಸ್ಥಾನಮಾನ ಮತ್ತು ಜಾಗತಿಕ ಪ್ರಭಾವವನ್ನು ತೋರಿಸುತ್ತದೆ.

