Modi government

ಮೋದಿ ಸರ್ಕಾರ ದೇಶದ ವಿದ್ಯಾರ್ಥಿಗಳು, ಯುವಜನತೆ, ಪತ್ರಕರ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ: ಪ್ರಿಯಾಂಕಾ ಗಾಂಧಿ
ದೇಶದ ಜನರ ಸಮಸ್ಯೆಗಳನ್ನು ಆಲಿಸುವಲ್ಲಿ ಮೋದಿ ಸರ್ಕಾರ ಹೇಡಿತನ ಮಾಡುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ವಿದ್ಯಾರ್ಥಿಗಳು ಮತ್ತು ಪತ್ರಕರ್ತರ ಮೇಲೆ ದಬ್ಬಾಳಿಕೆ ತೋರುತ್ತಿದೆ ಎಂದು ಆರೋಪಿಸಿದ್ದಾರೆ.

ಭಾರತೀಯ ಸೇನೆಯ ಕೈ ಸೇರಿದ ಅಮೆರಿಕದ ವಿಧ್ವಸಂಕ ಎಸ್ಐಜಿ-716 ಅಸ್ಸಾಲ್ಟ್ ರೈಫಲ್ಸ್!
ಭಾರತೀಯ ಸೇನೆಯ ಬಹುದಿನಗಳ ಬೇಡಿಕೆ ಕೊನೆಗೂ ಈಡೇರಿದ್ದು, ಅಮೆರಿಕದ ವಿಧ್ವಸಂಕ ಎಸ್ಐಜಿ-716 ಅಸ್ಸಾಲ್ಟ್ ರೈಫಲ್ಸ್ ಸೈನಿಕರ ಕೈ ಸೇರಿದೆ.

ಮೋದಿ ಸರ್ಕಾರ ಒಡೆದು ಆಳುವ ನೀತಿ ಅನುಸರಿಸುತ್ತಿದೆ: ಬಿಜೆಪಿ ವಿರುದ್ಧ ಸೋನಿಯಾ ವಾಗ್ದಾಳಿ
ಪೌರತ್ವ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ನರೇಂದ್ರ ಮೋದಿ ಸರ್ಕಾರ ಭಾರತೀಯರನ್ನು...

ಪೌರತ್ವ ಮಸೂದೆ ಧರ್ಮದ ಆಧಾರದಲ್ಲಿ ದೇಶ ಒಡೆಯುವ ಬಿಜೆಪಿಯ ಗುಪ್ತ ಅಜೆಂಡಾ- ಸಿದ್ದರಾಮಯ್ಯ ಟೀಕೆ
ಹೆಚ್ಚುತ್ತಿರುವ ನಿರುದ್ಯೋಗ, ಮುಚ್ಚುತ್ತಿರುವ ಕೈಗಾರಿಕೆಗಳು, ಏರುತ್ತಿರುವ ಸಾಮಗ್ರಿಗಳ ಬೆಲೆ, ಕುಸಿಯುತ್ತಿರುವ ಜಿಡಿಪಿ, ದಿವಾಳಿಯಾಗುತ್ತಿರುವ ಬ್ಯಾಂಕುಗಳ ಸ್ಥಿತಿಯಿಂದ ಜನಮನ ಬೇರೆಡೆ ಸೆಳೆಯಲು ಬಿಜೆಪಿ ಪೌರತ್ವ ಮಸೂದೆಯ ಅಸ್ತ್ರ ಬಳಸಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

'ಇದು ದೊಡ್ಡ ಹಗರಣ, ಮೋದಿ ಸರ್ಕಾರ ದೇಶವನ್ನು ಲೂಟಿ ಮಾಡುತ್ತಿದೆ': ಲೋಕಸಭೆಯಲ್ಲಿ ಪ್ರತಿಪಕ್ಷಗಳಿಂದ ತೀವ್ರ ಪ್ರತಿಭಟನೆ
ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್(ಬಿಪಿಸಿಎಲ್) ಸೇರಿದಂತೆ ಕೆಲವು ಸಾರ್ವಜನಿಕ ವಲಯ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವುದನ್ನು ಮತ್ತು ಚುನಾವಣಾ ಬಾಂಡ್ ಗಳನ್ನು ಬಿಡುಗಡೆ ಮಾಡಿರುವುದನ್ನು ವಿರೋಧಿಸಿ ಪ್ರತಿಪಕ್ಷ ಕಾಂಗ್ರೆಸ್ ಲೋಕಸಭೆಯಲ್ಲಿ ತೀವ್ರ ಕೋಲಾಹಲ ನಡೆಸಿದ ಘಟನೆ ನಡೆಯಿತು. ಸರ್ಕಾರದ ಈ ನಡೆ ದೊಡ್ಡ ಹಗರಣ ಎಂದು ಟೀಕಿಸಿದೆ.

ನವ ಭಾರತದಲ್ಲಿ ಲಂಚ, ಅಕ್ರಮ ಹಣಗಳು ಚುನಾವಣಾ ಬಾಂಡ್ ಗಳಾಗಿವೆ: ರಾಹುಲ್ ಗಾಂಧಿ
ಚುನಾವಣಾ ಬಾಂಡ್ ಗಳನ್ನು ಜಾರಿಗೆ ತರಲು ಸರ್ಕಾರ ಆರ್ ಬಿಐಯ ನಿಯಮವನ್ನು ಮೀರಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನವ ಭಾರತದಲ್ಲಿ ಲಂಚ ಮತ್ತು ಅಕ್ರಮ ಕಮಿಷನ್ ಗಳು ಚುನಾವಣಾ ಬಾಂಡ್ ಗಳಾಗಿವೆ ಎಂದು ಆರೋಪಿಸಿದ್ದಾರೆ.

ಭಾರತದ ಆರ್ಥಿಕತೆ ಮೂಲ ಸದೃಢವಾಗಿದೆ: ಕೇಂದ್ರ ಸರ್ಕಾರ
ಭಾರತದ ಆರ್ಥಿಕ ದರ ನಕಾರಾತ್ಮಕವಾಗಿದೆ ಎಂದು ವರದಿ ನೀಡಿರುವ ಮೂಡಿ ಹೂಡಿಕೆ ಸೇವೆಯ ವರದಿಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರ ಆರ್ಥಿಕತೆಯ ಮೂಲಭೂತ ಅಂಶಗಳು ಸಾಕಷ್ಟು ದೃಢವಾಗಿದ್ದು, ಇತ್ತೀಚೆಗೆ ಕೈಗೊಂಡ ಸುಧಾರಣಾ ಕ್ರಮಗಳಿಂದ ಹೂಡಿಕೆಗಳನ್ನು ಉತ್ತೇಜಿಸಲಾಗುತ್ತಿದೆ ಎಂದಿದೆ.

ಕೇಂದ್ರದ ಮೋದಿ ಸರ್ಕಾರ ನನ್ನ ಫೋನ್ ಕದ್ದಾಲಿಕೆ ಮಾಡಿದೆ: ಮಮತಾ ಬ್ಯಾನರ್ಜಿ ಆರೋಪ
ಕೇಂದ್ರ ಸರ್ಕಾರ ತಮ್ಮ ಟೆಲಿಫೋನ್ ನ್ನು ಕದ್ದಾಲಿಕೆ ಮಾಡಿದ್ದು ಇದಕ್ಕೆ ತಮ್ಮಲ್ಲಿ ಸಾಕ್ಷಿಗಳಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಜಾಗ್ರತೆ ವಹಿಸಲಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೊಸ ಆರೋಪ ಮಾಡಿದ್ದಾರೆ.

ಕಳಸಾ ಬಂಡೂರಿ ಯೋಜನೆಗೆ ಪರಿಸರ ಒಪ್ಪಿಗೆ; ಮೋದಿ ಸರ್ಕಾರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಧನ್ಯವಾದ
ಮಹದಾಯಿ ನದಿಯಿಂದ ಬರ ಪೀಡಿತ ಉತ್ತರ ಕರ್ನಾಟಕದ ಮೂರು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಕಳಸಾ ಬಂಡೂರಿ ಯೋಜನೆಗೆ ಪರಿಸರ ಸಚಿವಾಲಯದಿಂದ ಒಪ್ಪಿಗೆ ಮಂಜೂರು ಮಾಡಿರುವ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಧನ್ಯವಾದ ಸಲ್ಲಿಸಿದ್ದಾರೆ.

