ವಾಣಿಜ್ಯ

ಭಾರತದ ಆರ್ಥಿಕತೆ ಮೂಲ ಸದೃಢವಾಗಿದೆ: ಕೇಂದ್ರ ಸರ್ಕಾರ 

ಭಾರತದ ಆರ್ಥಿಕ ದರ ನಕಾರಾತ್ಮಕವಾಗಿದೆ ಎಂದು ವರದಿ ನೀಡಿರುವ ಮೂಡಿ ಹೂಡಿಕೆ ಸೇವೆಯ ವರದಿಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರ ಆರ್ಥಿಕತೆಯ ಮೂಲಭೂತ ಅಂಶಗಳು ಸಾಕಷ್ಟು ದೃಢವಾಗಿದ್ದು, ಇತ್ತೀಚೆಗೆ ಕೈಗೊಂಡ ಸುಧಾರಣಾ ಕ್ರಮಗಳಿಂದ ಹೂಡಿಕೆಗಳನ್ನು ಉತ್ತೇಜಿಸಲಾಗುತ್ತಿದೆ ಎಂದಿದೆ.

ಭಾರತದ ಆರ್ಥಿಕತೆ ಮೂಲ ಸದೃಢವಾಗಿದೆ: ಕೇಂದ್ರ ಸರ್ಕಾರ 
Published On :

ನವದೆಹಲಿ: ಭಾರತದ ಆರ್ಥಿಕ ದರ ನಕಾರಾತ್ಮಕವಾಗಿದೆ ಎಂದು ವರದಿ ನೀಡಿರುವ ಮೂಡಿ ಹೂಡಿಕೆ ಸೇವೆಯ ವರದಿಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರ ಆರ್ಥಿಕತೆಯ ಮೂಲಭೂತ ಅಂಶಗಳು ಸಾಕಷ್ಟು ದೃಢವಾಗಿದ್ದು, ಇತ್ತೀಚೆಗೆ ಕೈಗೊಂಡ ಸುಧಾರಣಾ ಕ್ರಮಗಳಿಂದ ಹೂಡಿಕೆಗಳನ್ನು ಉತ್ತೇಜಿಸಲಾಗುತ್ತಿದೆ ಎಂದಿದೆ.


ಮೂಡಿಯ ಹೇಳಿಕೆ ಹೊರಬರುತ್ತಿದ್ದಂತೆ ಪ್ರತಿಕ್ರಿಯೆ ಕೊಟ್ಟಿರುವ ಹಣಕಾಸು ಸಚಿವಾಲಯ, ಭಾರತ ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಒಂದಾಗಿದೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ ನೀಡಿದ್ದ ವರದಿಯಂತೆ ಭಾರತದ ಆರ್ಥಿಕ ಬೆಳವಣಿಗೆ ಈ ವರ್ಷ ಶೇಕಡಾ 6.1ರಷ್ಟಿದ್ದು ಮುಂದಿನ ವರ್ಷ ಅದು ಶೇಕಡಾ 7ಕ್ಕೆ ಏರಿಕೆಯಾಗಬಹುದು ಎಂದು ಅಂದಾಜಿಸಿದೆ ಎಂದು ಹೇಳಿದೆ.


ಭಾರತದ ಸಂಭಾವ್ಯ ಬೆಳವಣಿಗೆಯ ದರವು ಬದಲಾಗದೆ ಇರುವುದರಿಂದ, ಐಎಂಎಫ್ ಮತ್ತು ಇತರ ಬಹುಪಕ್ಷೀಯ ಸಂಸ್ಥೆಗಳ ಮೌಲ್ಯಮಾಪನವು ಭಾರತದ ಬಗ್ಗೆ ಸಕಾರಾತ್ಮಕ ದೃಷ್ಟಿಕೋನವನ್ನು ಒತ್ತಿ ಹೇಳುತ್ತದೆ, ಭಾರತ ಸರ್ಕಾರ ಒಟ್ಟಾರೆಯಾಗಿ ಆರ್ಥಿಕತೆಯನ್ನು ಬಲಪಡಿಸಲು ಹಲವು ಸುಧಾರಣಾ ಕ್ರಮಗಳನ್ನು ಹಣಕಾಸು ವಲಯದಲ್ಲಿ ಕೈಗೊಂಡಿದೆ ಎಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.