MLA

ಅನರ್ಹರನ್ನ ಗೆಲ್ಲಿಸೋದು, ಸೋಲಿಸೋದು ಜನರ ಕೈಯಲ್ಲಿದೆ: ಅಮರೇಗೌಡ ಬಯ್ಯಾಪುರ
ರಾಜ್ಯದಲ್ಲಿ ಡಿಸೆಂಬರ್ 5 ರಂದು ನಡೆಯುತ್ತಿರುವ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಅನರ್ಹರನ್ನು ಗೆಲ್ಲಿಸುವುದು ಅಥವಾ ಸೋಲಿಸುವುದು ಜನತೆಗೆ ಬಿಟ್ಟ ವಿಚಾರ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದ್ದಾರೆ

ತರಾತುರಿ ನಿರ್ಧಾರ ಬೇಡ, 2020ರವರೆಗೂ ಕಾದುನೋಡಿ: ಬೇಸತ್ತ ಜೆಡಿಎಸ್ ಶಾಸಕರಿಗೆ ದೇವೇಗೌಡ
ತರಾತುರಿಯಲ್ಲಿ ನಿರ್ಧಾರ ತೆಗೆದುಕೊಳ್ಳಬೇಡಿ. 2020ರವರೆಗೂ ಕಾದುನೋಡಿ ಎಂದು ಕುಟುಂಬ ರಾಜಕೀಯದಿಂದಾಗಿ ಬೇಸತ್ತು ಪಕ್ಷ ತೊರೆಯಲು ನಿರ್ಧರಿಸಿರುವ ಜೆಡಿಎಸ್ ಶಾಸಕರಿಗೆ ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ ಅವರು ಹೇಳಿದ್ದಾರೆ...

ಜೆಡಿಎಸ್'ನಲ್ಲಿ ಭಿನ್ನಮತ ಸ್ಫೋಟ: ಕಾಂಗ್ರೆಸ್, ಬಿಜೆಪಿಯತ್ತ ಮುಖ ಮಾಡಿದ ಶಾಸಕರು
ಉಪ ಚುನಾವಣೆ ಹತ್ತಿರ ಬರುತ್ತಿದ್ದು, ಈ ನಡುವಲ್ಲೇ ಜೆಡಿಎಸ್ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಪಕ್ಷದ ಕುಟುಂಬ ರಾಜಕೀಯಕ್ಕೆ ಬೇಸತ್ತಿರುವ ಜೆಡಿಎಸ್ ಶಾಸಕರು ಇದೀಗ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳಲು ನಿರ್ಧರಿಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

ಖರ್ಚಾಗದ ಶಾಸಕರ ಪ್ರದೇಶಾಭಿವೃದ್ಧಿ ನಿಧಿ 893.99 ಕೋಟಿ ರೂ: ನೆರೆ ಪರಿಹಾರಕ್ಕೆ ಬಳಸಿಕೊಳ್ಳಲು ಸಿಎಂ ಮನವಿ
ರಾಜ್ಯವನ್ನು ಇನ್ನಿಲ್ಲದಂತೆ ಕಾಡಿದ ಪ್ರವಾಹ, ಭಾರೀ ಮಳೆ ಮತ್ತು ಬರ ನಿರ್ವಹಣೆಯಲ್ಲಿ ಹಿಂದಿನ ಮೈತ್ರಿ ಸರ್ಕಾರ ಹಾಗೂ ಹಾಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಸಕರು ದಿವ್ಯ ನಿರ್ಲಕ್ಷ್ಯ ತೋರಿದ್ದು, ಪರಿಣಾಮ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಖರ್ಚಾಗದೇ 893.99 ಕೋಟಿ ರೂ ಉಳಿದಿದೆ.

ಸಚಿವ ಸ್ಥಾನ ಸಿಗದಂತೆ ನಮ್ಮವರಿಂದಲೇ ಕುತಂತ್ರ:ಅವರಿಗೆ ಒಳ್ಳೆಯದಾಗಲಿ; ರಾಜುಗೌಡ
ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೆ, ನನಗೆ ಸಚಿವ ಸ್ಥಾನ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ಪ್ರಯತ್ನಿಸಿದ್ದರು. ಆದರೆ, ನಮ್ಮ ಪಕ್ಷದವರೇ ನನಗೆ ಸಚಿವ ಸ್ಥಾನ ಸಿಗದಂತೆ ಆಟವಾಡಿದ್ದಾರೆ ಎಂದು ಯಾದಗಿರಿ ಜಿಲ್ಲೆಯ ಸುರಪುರ ಕ್ಷೇತ್ರದ ಶಾಸಕ ರಾಜು ಗೌಡ ಆರೋಪಿಸಿದ್ದಾರೆ.

ಪೊಲೀಸ್ ಅಧಿಕಾರಿಗಳ ವರ್ಗಾವಣೆ ಪ್ರಶ್ನಿಸಿ ಅರ್ಜಿ; 23 ಶಾಸಕರಿಗೆ ಹೈಕೋರ್ಟ್ ನೊಟೀಸ್ ಜಾರಿ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ 23 ಶಾಸಕರಿಗೆ ಹೈಕೋರ್ಟ್ ನೊಟೀಸ್ ಜಾರಿ ಮಾಡಿದೆ.

ಮಂಗಳವಾರ ಯಾರಿಗೆ ಮಂಗಳ? ಅಂತಿಮ ಪಟ್ಟಿಯಲ್ಲಿ ತಮ್ಮ ಹೆಸರಿಗಾಗಿ ಕಾಯುತ್ತಿರುವ ಶಾಸಕರು!
ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆ ಮಂಗಳವಾರ ನಡೆಯಲಿದ್ದು, ಯಾರ್ಯಾರು ಯಡಿಯೂರಪ್ಪ ಸಂಪುಟಕ್ಕೆ ಸೇರಲಿದ್ದಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ...

ಮೈತ್ರಿ ಸರ್ಕಾರ ಬಿದ್ದು ಹೋಯ್ತು, ಜೆಡಿಎಸ್ ನಲ್ಲಿ ಶುರುವಾಗಿದೆ ಶಾಸಕರ ಪಕ್ಷಾಂತರ ಭೀತಿ!
ಹಿಂದಿನ ಮೈತ್ರಿ ಸರ್ಕಾರದಲ್ಲಿ ಹೆಚ್ ಡಿ ಕುಮಾರಸ್ವಾಮಿ ವಿಶ್ವಾಸಮತ ಕಳೆದುಕೊಂಡು ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಹಳೆಯ ಕಥೆ, ಮೈತ್ರಿಕೂಟದಲ್ಲಿದ್ದ ಹಲವು ಶಾಸಕರು ನೀಡಿದ್ದ ಬೆಂಬಲ ಹಿಂಪಡೆದು ಸರ್ಕಾರ ಬಿದ್ದುಹೋಯಿತು. ಆದರೆ ಭಿನ್ನಾಭಿಪ್ರಾಯ ಅಲ್ಲಿಗೇ ಶಮನವಾಗಿಲ್ಲ.

ಹಿಂದೂಪರ ಕಾರ್ಯಕರ್ತರ ವಿರುದ್ಧದ ಪ್ರಕರಣಗಳ ಕೈಬಿಡಿ: ಸಿಎಂಗೆ ಬಿಜೆಪಿ ಶಾಸಕರ ಮನವಿ
ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರ ಟಿಪ್ಪು ಜಯಂತಿ ಆಚರಣೆಗೆ ಕಡಿವಾಣ ಹಾಕಿದ ಬೆನ್ನಲ್ಲೇ ಇದೀಗ ಹಿಂದೂ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಕೈಬಿಡುವಂತೆ ಆಗ್ರಹಗಳು ಕೇಳಿಬರತೊಡಗಿವೆ...

