ರಾಜಕೀಯ

ಸಚಿವ ಸ್ಥಾನ ಸಿಗದಂತೆ ನಮ್ಮವರಿಂದಲೇ ಕುತಂತ್ರ:ಅವರಿಗೆ ಒಳ್ಳೆಯದಾಗಲಿ; ರಾಜುಗೌಡ

ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೆ, ನನಗೆ ಸಚಿವ ಸ್ಥಾನ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ಪ್ರಯತ್ನಿಸಿದ್ದರು. ಆದರೆ, ನಮ್ಮ ಪಕ್ಷದವರೇ ನನಗೆ ಸಚಿವ ಸ್ಥಾನ ಸಿಗದಂತೆ ಆಟವಾಡಿದ್ದಾರೆ ಎಂದು ಯಾದಗಿರಿ ಜಿಲ್ಲೆಯ ಸುರಪುರ ಕ್ಷೇತ್ರದ ಶಾಸಕ ರಾಜು ಗೌಡ ಆರೋಪಿಸಿದ್ದಾರೆ.

ಸಚಿವ ಸ್ಥಾನ ಸಿಗದಂತೆ ನಮ್ಮವರಿಂದಲೇ ಕುತಂತ್ರ:ಅವರಿಗೆ ಒಳ್ಳೆಯದಾಗಲಿ; ರಾಜುಗೌಡ
ರಾಜುಗೌಡ
Published On :

ಬೆಂಗಳೂರು: ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೆ, ನನಗೆ ಸಚಿವ ಸ್ಥಾನ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ಪ್ರಯತ್ನಿಸಿದ್ದರು. ಆದರೆ, ನಮ್ಮ ಪಕ್ಷದವರೇ ನನಗೆ ಸಚಿವ ಸ್ಥಾನ ಸಿಗದಂತೆ ಆಟವಾಡಿದ್ದಾರೆ ಎಂದು ಯಾದಗಿರಿ ಜಿಲ್ಲೆಯ ಸುರಪುರ ಕ್ಷೇತ್ರದ ಶಾಸಕ ರಾಜು ಗೌಡ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈದರಾಬಾದ್ ಕರ್ನಾಟಕ ಭಾಗದಲ್ಲಿ 16 ಜನ ಶಾಸಕರು ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ. ಈ ಪೈಕಿ ಕನಿಷ್ಠ ಮೂವರಿಗಾದರೂ ಸಚಿವ ಸ್ಥಾನ ನೀಡಬೇಕಾಗಿತ್ತು. ಆದರೆ, ನಮ್ಮ ಯಾದಗಿರಿ ಜಿಲ್ಲೆಗಾಗಲಿ ಅಥವಾ ರಾಯಚೂರು ಜಿಲ್ಲೆಗಾಗಲಿ ಒಂದೇ ಒಂದು ಸಚಿವ ಸ್ಥಾನವನ್ನೂ ನೀಡಲಿಲ್ಲ. ನನಗೆ ಸಚಿವ ಸ್ಥಾನ ನೀಡಲು ಯಡಿಯೂರಪ್ಪ ಸಹ ಮನಸ್ಸು ಮಾಡಿದ್ದರು. ಆದರೆ, ಕೊನೆಗಳಿಗೆಯಲ್ಲಿ ಸ್ಥಾನ ಕೈತಪ್ಪಿದೆ. ನಮ್ಮವರೇ ನನಗೆ ಸ್ಥಾನ ಸಿಗದಂತೆ ಮಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ನಮ್ಮ ಸಮುದಾಯಕ್ಕೆ ಶೇಕಡಾ7.5ರಷ್ಟು ಮಿಸಲಾತಿ ನೀಡಿ ಎಂದು ಕೇಳಿಕೊಂಡಿದ್ದೇನೆ. ನನ್ನ ಸಚಿವ ಸ್ಥಾನ ತಪ್ಪಿಸಿದವರಿಗೂ ಒಳ್ಳೆಯದಾಗಲಿ, ಸಚಿವರು ಯಾರಾದರೂ ಒಳ್ಳೆಯದೇ, ಯಡಿಯೂರಪ್ಪ ಅವರು ನಮ್ಮ ಜೊತೆಗಿದ್ದಾರೆ ಸಾಕು ಎಂದು ಹೇಳಿರುವ ಅವರು, ಈ ಹಿಂದೆ ಸಚಿವನಾಗಿ ಕೆಲಸ ಮಾಡಿದ ಅನುಭವ ಇದೆ. ಹೀಗಾಗಿ ಪಕ್ಷದಿಂದಲೂ ಸಂಘದಿಂದಲೂ ನನಗೆ ಸಚಿವ ಸ್ಥಾನದ ಭರವಸೆ ಸಿಕ್ಕಿತ್ತು. ಆದರೆ, ಕೊನೆ ಕ್ಷಣದಲ್ಲಿ ನಾನು ನೋ ಬಾಲ್​ಗೆ ರನೌಟ್ ಆಗಿದ್ದೇನೆ. 

ರನೌಟ್ ಆಗಿದ್ದಕ್ಕೆ ಕೊರಗಿದೆ. ನಾನೊಬ್ಬ ಕ್ರೀಡಾಪಟು ಹೀಗಾಗಿ ಸೋಲು ಗೆಲುವು ನನಗೆ ಹೊಸತಲ್ಲ. ಆದರೆ, ಹೈದರಾಬಾದ್ ಕರ್ನಾಟಕ ಭಾಗಕ್ಕೆ ಕನಿಷ್ಠ 3 ರಿಂದ 4 ಸಚಿವ ಸ್ಥಾನ ನೀಡಲಿ, ಈ ಭಾಗದ ಅಭಿವೃದ್ಧಿಯ ಕಡೆಗೆ ಸರ್ಕಾರ ಗಮನ ಹರಿಸಲಿ ಎಂಬುದಷ್ಟೆ ನನ್ನ ಕೋರಿಕೆ ಎಂದು ಅವರು ಪಕ್ಷದ ಮುಖಂಡರ ಎದುರು ಮನವಿಯನ್ನು ಇಟ್ಟಿದ್ದಾರೆ ಎಂದು ಅವರು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.