migrants

ಬಾಗಲಕೋಟೆ: ಮತಕ್ಕಾಗಿ ವಲಸಿಗರಿಗೆ ಗಾಳ; ದೂರದೂರಿಂದ ಗ್ರಾಮಗಳಿಗೆ ಕರೆತಂದ ಅಭ್ಯರ್ಥಿಗಳು
ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆ, ಬಾದಾಮಿ, ಹುನಾಗುಂದ ಮತ್ತು ಗುಳೇದಗುಡ್ಡದ ಬಸ್ ನಿಲ್ದಾಣಗಳು ಸಾವಿರಾರು ವಲಸಿಗರಿಂದ ತುಂಬಿದ್ದವು.

ವಲಸಿಗರಿಗೆ ವಿತರಿಸಲು ಅಕ್ಕಿ ನೀಡುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ
ಬಿಪಿಎಲ್ ಕಾರ್ಡು ರಹಿತ ಹಾಗೂ ಎಪಿಎಲ್ ಕಾರ್ಡ್ ಹೊಂದಿರುವವರಿಗೆ, ಮುಖ್ಯವಾಗಿ ವಲಸಿಗರಿಗೆ ನವೆಂಬರ್ ವರೆಗೆ ಅಕ್ಕಿ ಮತ್ತು ಧಾನ್ಯಗಳನ್ನು ವಿತರಿಸಬೇಕೆಂದು ರಾಜ್ಯ ಬಿಜೆಪಿ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.

ಹೊರರಾಜ್ಯಗಳಿಂದ ರಾಜ್ಯಕ್ಕೆ ಎಷ್ಟು ಮಂದಿ ಹಿಂತಿರುಗಿದ್ದಾರೆ?: ಸರ್ಕಾರದ ಬಳಿಯೇ ಮಾಹಿತಿ ಇಲ್ಲ!
ಲಾಕ್'ಡೌನ್ ಸಡಿಲಗೊಂಡ ಬಳಿಕ ಸಾಕಷ್ಟು ವಲಸೆ ಕಾರ್ಮಿಕರು ಹಾಗೂ ಇತರೆ ಜನರು ಹೊರ ರಾಜ್ಯಗಳಿಂದ ರಾಜ್ಯಕ್ಕೆ ಹಿಂತಿರುಗಿದ್ದಾರೆಂದು ಹೇಳುತ್ತಿರುವ ಸರ್ಕಾರಕ್ಕೆ ಎಷ್ಟು ಮಂದಿ ಹಿಂತಿರುಗಿದ್ದಾರೆಂಬ ನಿರ್ದಿಷ್ಟ ಮಾಹಿತಿಯೇ ತಿಳಿದಿಲ್ಲ ಎಂಬುದು ಇದೀಗ ಬೆಳಕಿಗೆ ಬಂದಿದೆ.

ವಲಸಿಗರ ಕುರಿತು ವಾಸ್ತವಿಕ ವರದಿ ಸಲ್ಲಿಸಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ಬೆಂಗಳೂರು ನಗರದಲ್ಲಿಯೇ ಉಳಿಯಲು ನಿರ್ಧಾರಕೈಗೊಂಡಿರುವ ವಲಸೆ ಕಾರ್ಮಿಕರ ಕುರಿತು ವಾಸ್ತವಿಕ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಗುರುವಾರ ಸೂಚನೆ ನೀಡಿದೆ.

ಲಾಕ್'ಡೌನ್ ಸಂಕಷ್ಟದ ವೇಳೆ ವಲಸಿಗರಿಗೆ ಸಹಾಯಹಸ್ತ: ರಾಜ್ಯ ಬಿಜೆಪಿ ಸೇವೆಗೆ ಪ್ರಧಾನಿ ಮೋದಿ ಶ್ಲಾಘನೆ
ಕೊರೋನಾ ವೈರಸ್ ಲಾಕ್'ಡೌನ್ ಸಂದರ್ಭದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಹಾಗೂ ಸರ್ಕಾರ ಒಟ್ಟಾಗಿ ಉತ್ತಮ ಕಾರ್ಯ ನಿರ್ವಹಣೆ ಮಾಡಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶ್ಲಾಘಿಸಿದ್ದಾರೆ.

ಬೆಂಗಳೂರು: ತಪ್ಪು ಶ್ರಮಿಕ್ ರೈಲು ಹತ್ತಿದ ಮಧ್ಯಪ್ರದೇಶದ ವಲಸೆ ಕಾರ್ಮಿಕರು ತಲುಪಿದ್ದು ಉತ್ತರಪ್ರದೇಶ!
ರಾಜಧಾನಿ ಬೆಂಗಳೂರಿನಿಂದ ಮಧ್ಯಪ್ರದೇಶಕ್ಕೆ ತೆರಳುತ್ತಿದ್ದ 29 ವಲಸಿಗರ ಗುಂಪು ತಪ್ಪಾಗಿ ವಿಶೇಷ ಶ್ರಮಿಕ ರೈಲು ಹತ್ತಿದ್ದರಿಂದ ಶುಕ್ರವಾರ ಬೆಳಗ್ಗೆ ಉತ್ತರ ಪ್ರದೇಶಕ್ಕೆ ತಲುಪಿದ್ದಾರೆ

ತಮಿಳುನಾಡಿನಿಂದ ಬಂದು ಬೆಂಗಳೂರು ಮಾರ್ಗವಾಗಿ ಛತ್ತೀಸ್ ಗಢ ತಲುಪಿದ 26 ವಲಸೆ ಕಾರ್ಮಿಕರು
ಐದು ಮಕ್ಕಳು ಸೇರಿದಂತೆ ಛತ್ತೀಸ್ ಗಢದ 26 ವಲಸೆ ಕಾರ್ಮಿಕರು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಯಪುರಕ್ಕೆ ತಲುಪಿದ್ದಾರೆ. ತಮಿಳುನಾಡಿನಲ್ಲಿ ಕೆಲಸ ಮಾಡುತ್ತಿದ್ದ ಯುವಕರನ್ನು ಬೆಂಗಳೂರಿಗೆ ಕರೆತರಲು ಬಸ್ ವ್ಯವಸ್ಥೆ ಮಾಡಲಾಗಿತ್ತು.

ರಾಜ್ಯಗಳಿಂದ ಮನವಿ ಸ್ವೀಕರಿಸಿದ 24 ಗಂಟೆಯಲ್ಲಿ ವಲಸಿಗರಿಗಾಗಿ ರೈಲು ಒದಗಿಸಲು ಸಿದ್ಧ: ರೈಲ್ವೆ ಸಚಿವಾಲಯ
ಮೇ 1 ರಿಂದ 4,347 ಶ್ರಮಿಕ್ ವಿಶೇಷ ರೈಲುಗಳ ಮೂಲಕ ಸುಮಾರು 60 ಲಕ್ಷ ಜನರನ್ನು ತಮ್ಮ ಸ್ವಂತ ರಾಜ್ಯಗಳಿಗೆ ಸಾಗಿಸಿರುವ ಭಾರತೀಯ ರೈಲ್ವೆ, ರಾಜ್ಯಗಳಿಂದ ಬೇಡಿಕೆ ಸ್ವೀಕರಿಸಿದ 24 ಗಂಟೆಗಳ ಒಳಗೆ ಈ ರೈಲುಗಳನ್ನು ಒದಗಿಸುವುದನ್ನು ಮುಂದುವರಿಸುವುದಾಗಿ ತಿಳಿಸಿದೆ.

ಅಧಿಕಾರಿಗಳಂತೆ ಬಂದು ಶ್ರಮಿಕ ರೈಲಿನಲ್ಲಿ ವಲಸಿಗರಿಂದ ಹಣ ಕಿತ್ತ ದುಷ್ಕರ್ಮಿಗಳು!
ಶ್ರಮಿಕ ರೈಲಿನಲ್ಲಿ ತಮ್ಮ ತಮ್ಮ ತವರಿಗೆ ತೆರಳುತ್ತಿದ್ದ ವಲಸೆ ಕಾರ್ಮಿಕರ ಬಳಿ ಅಧಿಕಾರಿಗಳಂತೆ ಬಂದಿರುವ ದುಷ್ಕರ್ಮಿಗಳು ಅವರಿಂದ ಹಣ ಕಿತ್ತು ಪರಾರಿಯಾಗಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.

