medicine

ಮೆದುಳಿನ ರಹಸ್ಯಗಳನ್ನು ಭೇದಿಸಲು ನೆರವಾಗುವ ತಂತ್ರಕ್ಕಾಗಿ ಮೂವರಿಗೆ ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿ
ಆಪ್ಟೊಜೆನೆಟಿಕ್ಸ್ ಎಂದು ಕರೆಯಲ್ಪಡುವ ಈ ವಿಧಾನ "ಬೆಳಕಿನ-ಸೂಕ್ಷ್ಮ ಸ್ವಿಚ್" ಆಗಿ ಕಾರ್ಯನಿರ್ವಹಿಸುತ್ತದೆ, ಇದು ವಿಜ್ಞಾನಿಗಳು ಮೆದುಳಿನಲ್ಲಿ "ಯಾವ ಕೋಶಗಳು ಯಾವ ಕಾರ್ಯಕ್ಕೆ ಕಾರಣವಾಗಿವೆ ಎಂಬುದನ್ನು ಮ್ಯಾಪ್ ಮಾಡಲು" ಅನುವು ಮಾಡಿಕೊಡುತ್ತದೆ
ಯುಎಸ್‌ನಲ್ಲಿ ₹85,000 ಬೆಲೆಯ ಮಾತ್ರೆ ಭಾರತದಲ್ಲಿ ಕೇವಲ ₹35; 'ನಮ್ಮನ್ನು ದೋಚಲಾಗುತ್ತಿದೆ' ಎಂದ ಅಮೆರಿಕದ ಮಹಿಳೆ!
ಆರೋಗ್ಯ ಸೇವೆ ಮತ್ತು ಔಷಧಿಗಳ ದುಬಾರಿ ವೆಚ್ಚದ ಬಗ್ಗೆ ಕಳವಳ ವ್ಯಕ್ತಪಡಿಸಿದ ಏಕೈಕ ಅಮೆರಿಕನ್ ಪ್ರಜೆ ಲಿಜ್ ಅಲ್ಲ. ಕಳೆದ ತಿಂಗಳು, ವಿಕ್ಟೋರಿಯಾ ಎಂಬ ಮತ್ತೊಬ್ಬರು ಅಮೆರಿಕದ ಆರೋಗ್ಯ ಸೇವಾ ವ್ಯವಸ್ಥೆಯನ್ನು 'ವಂಚನೆ' ಎಂದು ಕರೆದಿದ್ದರು.

ಕಲಬುರಗಿ: ಕುಡಿತದ ಚಟ ಬಿಡಿಸಲು ನೀಡಿದ ನಾಟಿ ಔಷಧ ಸೇವಿಸಿ ಮೂವರು ಸಾವು; ಓರ್ವನ ಸ್ಥಿತಿ ಗಂಭೀರ
ಇಮಡಾಪುರ ಗ್ರಾಮದಲ್ಲಿ ಫಕೀರಪ್ಪ ಅಲಿಯಾಸ್ ಸಾಯಪ್ಪ ಅವರು ಕುಡಿತದ ಚಟ ಬಿಡಿಸಲು ಔಷಧ ನೀಡುತ್ತಿದ್ದರು. ನಾಲ್ವರು ಔಷಧ ಪಡೆದಿದ್ದರು ಎನ್ನಲಾಗಿದೆ.

microRNA ಅನ್ವೇಷಣೆಗೆ ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿ
ವಿಕ್ಟರ್ ಅಂಬ್ರೋಸ್ ಮತ್ತು ಗ್ಯಾರಿ ರುವ್ಕುನ್ ಮೈಕ್ರೋ ಆರ್ ಎನ್ಎ ಹಾಗೂ ಪೋಸ್ಟ್-ಟ್ರಾನ್ಸ್ಕ್ರಿಪ್ಷನಲ್ ಜೀನ್ ನಿಯಂತ್ರಣದಲ್ಲಿ ಅದರ ಪಾತ್ರ ಅನ್ವೇಷಣೆ ಮಾಡಿದ್ದಕ್ಕಾಗಿ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಅಗತ್ಯ ಔಷಧಗಳ ಬೆಲೆಯಲ್ಲಿ ಶೇ 12.12 ರಷ್ಟು ಹೆಚ್ಚಳ: ಜನೌಷಧಿ ಕೇಂದ್ರಗಳ ಬಳಕೆ ಮಾಡುವಂತೆ ತಜ್ಞರ ಸಲಹೆ
ಅಗತ್ಯ ಔಷಧಗಳ ಬೆಲೆಯನ್ನು ಶೇ 12.12 ರಷ್ಟು ಏರಿಕೆ ಮಾಡಲು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ ಸೋಮವಾರ ಅನುಮೋದನೆ ನೀಡಿದ್ದು, ಬೆಲೆ ಏರಿಕೆ ಹಿನ್ನೆಲೆಯಲ್ಲಿ ಜನೌಷಧಿ ಕೇಂದ್ರಗಳಲ್ಲಿ ಔಷಧಿಗಳ ಖರೀದಿ ಮಾಡುವಂತೆ ತಜ್ಞರು ಸಲಹೆ ನೀಡಿದ್ದಾರೆ.

ಔಷಧ ಸೇವನೆಗಿಂತ ಜೀವನಶೈಲಿ ಬದಲಾವಣೆ ಪರಿಣಾಮಕಾರಿ (ಕುಶಲವೇ ಕ್ಷೇಮವೇ)
ಸಾಮಾನ್ಯವಾಗಿ ಒಂದು ವರ್ಷಕ್ಕೆ ಜನರು ವೈದ್ಯರ ಫೀಸು ಕಟ್ಟುತ್ತಾ ಔಷಧಿಗಳನ್ನು ನುಂಗಲು ಕೊಡುವಷ್ಟು ಗಮನ ತಮ್ಮ ಜೀವನದಲ್ಲಿ ಸಣ್ಣ ಪುಟ್ಟ ಬದಲಾವಣೆಗಳನ್ನು ತಂದುಕೊಂಡು ಆರೋಗ್ಯಕರವಾಗಿ ಇರಲು ಕೊಡದೆ ಇರುವುದೇ ದೊಡ್ಡ ಸಮಸ್ಯೆಯಾಗಿದೆ.

ಆಪರೇಷನ್ ಥಿಯೇಟರ್ ನಲ್ಲಿ ಪಾಚಿ, ಬಿರುಕುಬಿಟ್ಟ ಗೋಡೆಗಳು; ಔಷಧಿ, ಸಿಬ್ಬಂದಿ ಕೊರತೆ: ಲೋಕಾಯುಕ್ತ ಭೇಟಿ ವೇಳೆ ಬಿಬಿಎಂಪಿ ಆಸ್ಪತ್ರೆಗಳ ನರಕ ದರ್ಶನ!
ಬಾಬು ಜಗ್ ಜೀವನ್ ರಾಮ್ ನಗರದ ಜನರಲ್ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ಫಂಗಸ್ ಬೆಳೆದು ದುರ್ವಾಸನೆ ಬರುತ್ತಿದ್ದು, ತಾವರೆಕೆರೆಯ ಪ್ರಿಯದರ್ಶಿನಿ ಹೆರಿಗೆ ಗೃಹದಲ್ಲಿ ಸಿಬ್ಬಂದಿ ಹಾಗೂ ವೈದ್ಯರ ಕೊರತೆ, ಬನಶಂಕರಿ ರೆಫರಲ್ ಆಸ್ಪತ್ರೆಯಲ್ಲಿ ಔಷಧ ಪೂರೈಕೆ ಕೊರತೆಯಿಂದ ಆಪರೇಷನ್ ಥಿಯೇಟರ್, ಲ್ಯಾಬ್ ಕಾರ್ಯನಿರ್ವಹಿಸುತ್ತಿಲ್ಲ.

ಲಸಿಕೆ ದಂಧೆ ನಡೆಸುವವರ ವಿರುದ್ಧ ಕಠಿಣ ಕ್ರಮ: ಬಸವರಾಜ ಬೊಮ್ಮಾಯಿ ಖಡಕ್ ಎಚ್ಚರಿಕೆ
ಕೋವಿಡ್ ಲಸಿಕೆಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟು ದಂಧೆ ನಡೆಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಕಪ್ಪು ಶಿಲೀಂದ್ರ ಚಿಕಿತ್ಸೆಗಾಗಿ ಕರ್ನಾಟಕ ಸೇರಿ ಎಲ್ಲಾ ರಾಜ್ಯಗಳಿಗೆ 10 ಸಾವಿರ ವಯಲ್ಸ್: ಸದಾನಂದಗೌಡ
ಕಪ್ಪು ಶಿಲೀಂಧ್ರ ರೋಗದ ಚಿಕಿತ್ಸೆಗಾಗಿ ರಾಜ್ಯಗಳಿಗೆ ಸೋಮವಾರ ಮತ್ತೆ 19,420 ವಯಲ್ಸ್ ಲಿಫೋಸೊಮಾಲ್ ಎಂಫೋಟೆರಿಸೋನ್ ಬಿ ಚುಚ್ಚುಮದ್ದನ್ನು ಹಂಚಿಕೆ ಮಾಡಿರುವುದಾಗಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ. ವಿ. ಸದಾನಂದಗೌಡ ಹೇಳಿದ್ದಾರೆ.

