ಕಲಬುರಗಿ: ಕುಡಿತದ ಚಟ ಬಿಡಿಸಲು ನೀಡಿದ ನಾಟಿ ಔಷಧ ಸೇವಿಸಿ ಮೂವರು ಸಾವು; ಓರ್ವನ ಸ್ಥಿತಿ ಗಂಭೀರ
ಇಮಡಾಪುರ ಗ್ರಾಮದಲ್ಲಿ ಫಕೀರಪ್ಪ ಅಲಿಯಾಸ್ ಸಾಯಪ್ಪ ಅವರು ಕುಡಿತದ ಚಟ ಬಿಡಿಸಲು ಔಷಧ ನೀಡುತ್ತಿದ್ದರು. ನಾಲ್ವರು ಔಷಧ ಪಡೆದಿದ್ದರು ಎನ್ನಲಾಗಿದೆ.

ಕಲಬುರಗಿ: ಸೇಡಂ ತಾಲೂಕಿನ ಇಮಡಾಪುರದಲ್ಲಿ ಮದ್ಯ ಸೇವನೆ ಚಟ ಬಿಡಿಸಲು ನಾಟಿ ವೈದ್ಯ ನೀಡಿದ್ದ ಔಷಧ ಸೇವಿಸಿದ್ದ ಮೂವರು ಬುಧವಾರ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಸೇಡಂ ತಾಲೂಕಿನ ಬುರಗಪಲ್ಲಿ ಗ್ರಾಮದ ಲಕ್ಷ್ಮಿ ನರಸಿಂಹಲು ಬಟಗೇರಾ (55), ಮದಕಲ್ ಗ್ರಾಮದ ನಾಗೇಶ (32) ಹಾಗೂ ಶಹಾಬಾದ್ ಬಳಿಯ ಡಕ್ಕಾ ತಾಂಡಾ ಗಣೇಶ ರಾಠೋಡ್ (30) ಮೃತರು. ಲಕ್ಷ್ಮಿ ಅವರ ಮಗ ಲಿಂಗಪ್ಪ ಅವರ ಸ್ಥಿತಿ ಗಂಭೀರವಾಗಿದ್ದು, ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಮಡಾಪುರ ಗ್ರಾಮದಲ್ಲಿ ಫಕೀರಪ್ಪ ಅಲಿಯಾಸ್ ಸಾಯಪ್ಪ ಅವರು ಕುಡಿತದ ಚಟ ಬಿಡಿಸಲು ಔಷಧ ನೀಡುತ್ತಿದ್ದರು. ನಾಲ್ವರು ಔಷಧ ಪಡೆದಿದ್ದರು ಎನ್ನಲಾಗಿದೆ. ಪ್ರಾಥಮಿಕ ಮಾಹಿತಿಯಂತೆ ಮದ್ಯ ಸೇವನೆ ವ್ಯಸನದಿಂದ ಹೊರಬರಲು ಕೆಲವರು ನಾಟಿ ಔಷಧ ಪಡೆದಿದ್ದರು. ಭಾನುವಾರ ಔಷಧ ಪಡೆದಿದ್ದ ಜನರು ಮತ್ತೆ ಬುಧವಾರವೂ ಬಂದು ಔಷಧ ಪಡೆದಿದ್ದರು. ಆದರೆ, ಔಷಧ ಸೇವಿಸಿದ ಕೆಲವೇ ಗಂಟೆಗಳಲ್ಲಿ ಈ ದುರಂತ ಸಂಭವಿಸಿದೆ.
ಈ ಸಂಬಂಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಔಷಧ ನೀಡಿದ ಫಕೀರಪ್ಪ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



