Mascow

2021ರ ಅಂತ್ಯದ ವೇಳೆ ಭಾರತಕ್ಕೆ ಎಸ್-400 ಕ್ಷಿಪಣಿ ವ್ಯವಸ್ಥೆ ರವಾನೆ ಆರಂಭ: ರಷ್ಯಾ
ಬಹು ನಿರೀಕ್ಷಿತ ಎಸ್-400 ಕ್ಷಿಪಣಿ ವ್ಯವಸ್ಥೆಯನ್ನು ಭಾರತಕ್ಕೆ 2021ರ ಅಂತ್ಯದಿಂದ ಸರಬರಾಜು ಮಾಡಲು ಆರಂಭಿಸುವುದಾಗಿ ಕ್ಷಿಪಣಿ ನಿರ್ಮಾಣ ಸಂಸ್ಥೆ ಅಲ್ಮಾಝ್ ಅಂಟೇ ಮಾಹಿತಿ ನೀಡಿದೆ.

ರಷ್ಯಾದ ಸ್ಪುಟ್ನಿಕ್ ಲೈಟ್ ಲಸಿಕೆಯ ಒಂದು ಡೋಸ್ ಎಲ್ಲಾ ಕೊರೋನಾ ವೈರಸ್ ತಳಿಗಳ ವಿರುದ್ಧ ಶೇ.80ರಷ್ಟು ಪರಿಣಾಮಕಾರಿ: ಅಧ್ಯಯನ
ಎಲ್ಲ ರೀತಿಯ ರೂಪಾಂತರಿ ಕೊರೋನಾ ವೈರಸ್ ತಳಿಗಳ ವಿರುದ್ಧ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯ ಒಂದು ಡೋಸ್ ಶೇ.80ರಷ್ಟು ಪರಿಣಾಮಕಾರಿ ಎಂದು ಅಧ್ಯಯನವೊಂದು ಹೇಳಿದೆ.

ಲಡಾಕ್ ನಲ್ಲಿ ಯಥಾಸ್ಥಿತಿ ಮುರಿಯುವ ಚೀನಾದ ಪ್ರಯತ್ನ ದ್ವಿಪಕ್ಷೀಯ ಸಂಬಂಧ ಉಲ್ಲಂಘನೆಯಾಗಿದೆ:ರಾಜನಾಥ್ ಸಿಂಗ್
ಗಡಿ ವಾಸ್ತವ ರೇಖೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಒಪ್ಪದೆ ಚೀನಾ ತನ್ನ ದ್ವಿಪಕ್ಷೀಯ ಒಪ್ಪಂದವನ್ನು ಮುರಿಯುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಸ್ಕೊದಲ್ಲಿ ಅಲ್ಲಿನ ರಕ್ಷಣಾ ಸಚಿವರ ಜೊತೆ ನಡೆಸಿದ ಸಭೆಯಲ್ಲಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಲಡಾಖ್ ಸಂಘರ್ಷಕ್ಕೆ ಭಾರತವೇ ಸಂಪೂರ್ಣ ಹೊಣೆ, ಗಡಿಯ ಒಂದಿಂಚು ಭೂಮಿಯನ್ನೂ ಕಳೆದುಕೊಳ್ಳಲು ಇಷ್ಟವಿಲ್ಲ: ರಾಜನಾಥ್ ಸಿಂಗ್ ಭೇಟಿ ಬಳಿಕ ಚೀನಾ ಹೇಳಿಕೆ!
ಲಡಾಖ್ ನಲ್ಲಿ ನಡೆದ ಇಂಡೋ-ಚೀನಾ ಸೈನಿಕರ ಸಂಘರ್ಷಕ್ಕೆ ಭಾರತೀಯ ಸೈನಿಕರೇ ನೇರಹೊಣೆ ಎಂದು ಹೇಳಿರುವ ಚೀನಾ ಸರ್ಕಾರ, ತಾನು ಯಾವುದೇ ಕಾರಣಕ್ಕೂ ತನ್ನ ಗಡಿಯ ಒಂದಿಂಚು ಭೂಮಿಯನ್ನೂ ಕಳೆದುಕೊಳ್ಳಲು ಸಿದ್ಧನಿಲ್ಲ ಎಂದು ಹೇಳಿದೆ.

ಇಂಡೋ-ಚೀನಾ ರಕ್ಷಣಾ ಸಚಿವರ ಸಭೆ: ಗಡಿಯಲ್ಲಿ ಶಾಂತಿಗೆ ಭಾರತ ಆಗ್ರಹ, ಸಂಪೂರ್ಣವಾಗಿ ಸೇನೆ ಹಿಂಪಡೆಯುವಂತೆ ಚೀನಾಗೆ ಒತ್ತಾಯ
ಪೂರ್ವ ಲಡಾಕ್ ನ ಭಾರತ-ಚೀನಾ ಗಡಿಭಾಗದಲ್ಲಿ ಸೇನೆ ನಿಯೋಜನೆ, ಸಂಘರ್ಷ ಮುಂದುವರಿಯುತ್ತಿರುವುದರ ಮಧ್ಯೆ ರಷ್ಯಾದ ಮಾಸ್ಕೊದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಚೀನಾ ರಕ್ಷಣಾ ಸಚಿವ ಜನರಲ್ ವೈ ಫೆಂಗೆ ಮಧ್ಯೆ ಮಾತುಕತೆ ನಡೆದಿದ್ದು ಭಾರತೀಯ ಕಾಲಮಾನ ಪ್ರಕಾರ ಕಳೆದ ರಾತ್ರಿ ಮುಕ್ತಾಯವಾಗಿದೆ.

ಗಡಿ ಸಂಘರ್ಷ:ರಾಜನಾಥ್ ಸಿಂಗ್ ಜೊತೆ ಶಾಂಘೈ ಶೃಂಗಸಭೆ ಹೊರಗೆ ಮಾತುಕತೆ ನಡೆಸಲು ಚೀನಾ ರಕ್ಷಣಾ ಸಚಿವ ಒಲವು?
ರಷ್ಯಾದ ಮಾಸ್ಕೊದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘದ ಸಭೆಯ ಹೊರಗೆ ಚೀನಾದ ರಕ್ಷಣಾ ಸಚಿವ ವೈ ಫೆಂಗಿ, ಭಾರತ-ಚೀನಾ ಗಡಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಚರ್ಚೆ ನಡೆಸಲು ಸಮಯಾವಕಾಶ ಕೇಳಿದ್ದಾರೆ ಎಂದು ತಿಳಿದುಬಂದಿದೆ.

ಕೈ ಕುಲುಕಲು ಮುಂದೆ ಬಂದ ರಷ್ಯಾದ ಅಧಿಕಾರಿಗೆ 'ನಮಸ್ತೆ' ಹೇಳಿ ಬದ್ಧತೆ ಮೆರೆದ ರಕ್ಷಣಾ ಸಚಿವ ರಾಜನಾಥ್ ಸಿಂಗ್!
ಶಾಂಘೈ ಸಹಕಾರ ಸಂಘ(ಎಸ್ ಸಿಒ)ದ ಪ್ರಮುಖ ಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾದಲ್ಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೋವಿಡ್-19ನ ಈ ಸಮಸ್ಯೆಯ ಸಮಯದಲ್ಲಿ ಅಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಗಮನ ಸೆಳೆದಿದ್ದಾರೆ.

ಗೌಪ್ಯತೆ ಉಲ್ಲಂಘನೆ: ಟ್ವಿಟರ್ ಗೆ 250 ದಶಲಕ್ಷ ಡಾಲರ್ ದಂಡ
ಜಾಹೀರಾತುಗಳನ್ನು ಒದಗಿಸಲು ವೈಯಕ್ತಿಕ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡ ಆರೋಪಕ್ಕಾಗಿ ಅಮೆರಿಕ ಫೆಡರಲ್ ಟ್ರೇಡ್ ಕಮಿಷನ್ (ಎಫ್‌ಟಿಸಿ) ತನಿಖೆ ನಡೆಸುತ್ತಿದೆ ಎಂದು ಸಾಮಾಜಿಕ ಮಾಧ್ಯಮ ಕಂಪನಿ ಟ್ವಿಟರ್ ಸೋಮವಾರ ತಿಳಿಸಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಎರಡನೇ ಮಹಾಯುದ್ಧದ 75 ನೇ ವಿಜಯೋತ್ಸವ: ಮಾಸ್ಕೋ 'ಮಹಾ ಪರೇಡ್' ನಲ್ಲಿ ರಾಜನಾಥ್ ಸಿಂಗ್ ಭಾಗಿ
ಎರಡನೇ ಮಹಾಯುದ್ಧದಲ್ಲಿ ವಿಜಯೋತ್ಸವದ 75 ನೇ ವರ್ಷಾಚರಣೆಯ ನೆನಪಿನಾರ್ಥ ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ನಡೆಯಲಿರುವ ಮಹಾ ಪರೇಡ್ ನಲ್ಲಿ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪಾಲ್ಗೊಳ್ಳಲ್ಲಿದ್ದಾರೆ.

