Mary Kom

ಬಾಕ್ಸಿಂಗ್: ಮೇರಿ ಕೋಮ್ ಗೆ ಜಯ, ಟೋಕಿಯೋಗೆ ತೆರಳಲು ಇನ್ನೊಂದೇ ಹೆಜ್ಜೆ!
ಆರು ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಜೋರ್ಡಾನ್‌ನ ಅಮ್ಮನ್‌ನಲ್ಲಿ ಶನಿವಾರ ನಡೆದ ಏಷ್ಯನ್ / ಓಷಿಯಾನಿಯನ್ ಒಲಿಂಪಿಕ್ ಕ್ವಾಲಿಫೈಯರ್ಸ್‌ನಲ್ಲಿ ನಡೆದ ಆರಂಭಿಕ ಪಂದ್ಯಗಳಲ್ಲಿ ಪ್ರಬಲ ಪ್ರದರ್ಶನ ನೀಡಿ ಎರಡನೇ ಬಾರಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಒಂದು ಹೆಜ್ಜೆ ಮುಂದಿಟ್ಟಿದ್ದಾರೆ.

ನಾನೇಕೆ ನಿಖತಾಳೊಂದಿಗೆ ಕೈ ಜೋಡಿಸಲಿ?: ಮೇರಿ ಕೋಮ್
ಆರು ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಫೈನಲ್ಸ್ ನಲ್ಲಿ ನಿಖತ ಜರೀನ್ ಅವರನ್ನು 9-1 ರಿಂದ ಮಣಿಸಿ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದಿದ್ದಾರೆ.

ವಿಶ್ವ ಗೆದ್ದ ಬಾಕ್ಸರ್ ಮೇರಿ ಕೋಮ್ ಗೆ ಒಲಂಪಿಕ್ ಸಂಸ್ಥೆಯಿಂದ ‘OLY’ಗೌರವ
ಆರು ಬಾರಿಯ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಎಂ.ಸಿ. ಮೇರಿ ಕೋಮ್ ಅವರಿಗೆ ವಿಶ್ವ ಒಲಿಂಪಿಯನ್ಸ್ ಅಸೋಸಿಯೇಷನ್ (ಡಬ್ಲ್ಯುಒಎ) ತನ್ನ ವತಿಯಿಂದ 'OLY' (ಒಲಿಂಪಿಯನ್) ಗೌರವದ ಸ್ಥಾನಮಾನ ನೀಡಿದೆ.

ಟೋಕಿಯೋ ಒಲಿಂಪಿಕ್ಸ್ ರಾಯಭಾರಿ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ ಮೇರಿ ಕೋಮ್
ಮುಂದಿನ ವರ್ಷ ಟೋಕಿಯೊ ಒಲಿಂಪಿಕ್ಸ್‌ನ 10 ಅನುಭವಿ ಅಥ್ಲೀಟ್ ರಾಯಭಾರಿಗಳ ಪಟ್ಟಿಯಲ್ಲಿ ಭಾರತದ ಸ್ಟಾರ್ ಮಹಿಳಾ ಬಾಕ್ಸರ್ ಎಂಸಿ ಮೇರಿ ಕೋಮ್ ಸ್ಥಾನ ಪಡೆದಿದ್ದಾರೆ.

ವಿಶ್ವ ಚಾಂಪಿಯನ್‌ಶಿಪ್: ಸೆಮಿಫೈನಲ್ಸ್ ನಲ್ಲಿ ಮೇರಿ ಕೋಮ್ ಗೆ ಸೋಲು, ಕಂಚಿನ ಪದಕಕ್ಕೆ ತೃಪ್ತಿ
ಇಲ್ಲಿ ನಡೆಯುತ್ತಿರುವ ವಿಶ್ವ ಮಹಿಳೆಯರ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನ 51 ಕೆ.ಜಿ ವಿಭಾಗದಲ್ಲಿ ಭಾರತದ ಅನುಭವಿ ಬಾಕ್ಸರ್, ಆರು ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಸೆಮಿ ಫೈನಲ್ಸ್ ನಲ್ಲಿ ಪರಾಜಿತರಾಗಿದ್ದಾರೆ.

ಬಾಕ್ಸಿಂಗ್ ಚಾಂಪಿಯನ್‍ಶಿಪ್: ಸೆಮಿಫೈನಲ್‍ಗೆ ಮೇರಿ ಕೋಮ್, ಪದಕ ಖಚಿತ!
ಆರು ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಅವರು ಇಲ್ಲಿ ನಡೆಯುತ್ತಿರುವ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನ 51 ಕೆ.ಜಿ ವಿಭಾಗದಲ್ಲಿ ಸೆಮಿಫೈನಲ್‍ಗೆ ತಲುಪಿದ್ದಾರೆ. ಆ ಮೂಲಕ ಅವರ ವೃತ್ತಿ ಜೀವನದ ಎಂಟನೇ ಚಾಂಪಿಯನ್‍ಶಿಪ್‍ನಲ್ಲಿ ಪದಕ ಖಚಿತಪಡಿಸಿಕೊಂಡಿದ್ದಾರೆ.

ವಿಶ್ವ ಬಾಕ್ಸಿಂಗ್: ಕ್ವಾರ್ಟರ್ ಫೈನಲ್ಸ್ ಗೆ ಮೇರಿ ಕೋಮ್!
ಆರು ಬಾರಿ ವಿಶ್ವ ಚಾಂಪಿಯನ್ ಭಾರತದ ಸ್ಟಾರ್ ಬಾಕ್ಸರ್ ಮೇರಿ ಕೋಮ್ ಅವರು ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನ ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ಜಯ ಸಾಧಿಸಿದ್ದಾರೆ.

ಬಾಕ್ಸರ್ ಮೇರಿಗೆ ಪದ್ಮವಿಭೂಷಣ, ಸಿಂಧುಗೆ ಪದ್ಮಭೂಷಣ: ಪದ್ಮ ಪ್ರಶಸ್ತಿಗಾಗಿ 9 ಮಹಿಳಾ ಸಾಧಕಿಯರ ಹೆಸರು ಶಿಫಾರಸು
ಕ್ರೀಡಾಕ್ಷೇತ್ರದಲ್ಲಿ ಭಾರತದ ಮಹಿಳಾ ಕ್ರೀಡಾಪಟುಗಳ ಅತ್ಯುನ್ನತ ಸಾಧನೆಯನ್ನು ಪರಿಗಣಿಸಲು ಹಾಗೂ ಸಂಭ್ರಮಿಸಲು ಕ್ರೀಡಾ ಸಚಿವಾಲಯ ಸಜ್ಜಾಗಿದೆ. ಇದಕ್ಕಾಗಿ ಇದೇ ಮೊದಲ ಬಾರಿಗೆ ದೇಶದ ಪ್ರತಿಷ್ಠಿತ ನಾಗರಿಕ ಪುರಸ್ಕಾರವಾಗಿರುವ ಪದ್ಮ ಪ್ರಶಸ್ತಿಗಳಿಗಾಗಿ ಸಂಪೂರ್ಣ ಮಹಿಳಾ ಕ್ರಿಡಾತಾರೆಯರ ಪಟ್ಟಿಯನ್ನು ಗೃಹ ಸಚಿವಾಲಯಕ್ಕೆ ಕಳುಹಿಸಿದೆ.

ಇಂಡೊನೇಷ್ಯಾ: 23ನೇ ಪ್ರೆಸಿಡೆಂಟ್ಸ್ ಕಪ್, ಚಿನ್ನ ಗೆದ್ದ ಮೇರಿಕೋಮ್
ಆರು ಬಾರಿ ವಿಶ್ವ ಚಾಂಪಿಯನ್ ಆಗಿರುವ ಭಾರತದ ಬಾಕ್ಸರ್ ಮೇರಿ ಕೋಮ್ ಇಂಡೊನೇಷ್ಯಾದಲ್ಲಿ ಇಂದು ನಡೆದ 23ನೇ ಫ್ರೆಸಿಡೆಂಟ್ಸ್ ಕಪ್ ನ ಫೈನಲ್ ಪಂದ್ಯದಲ್ಲಿ ಗೆದ್ದು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

