ನಾನೇಕೆ ನಿಖತಾಳೊಂದಿಗೆ ಕೈ ಜೋಡಿಸಲಿ?: ಮೇರಿ ಕೋಮ್
ಆರು ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಫೈನಲ್ಸ್ ನಲ್ಲಿ ನಿಖತ ಜರೀನ್ ಅವರನ್ನು 9-1 ರಿಂದ ಮಣಿಸಿ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದಿದ್ದಾರೆ.

ನವದೆಹಲಿ: ಆರು ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಫೈನಲ್ಸ್ ನಲ್ಲಿ ನಿಖತ ಜರೀನ್ ಅವರನ್ನು 9-1 ರಿಂದ ಮಣಿಸಿ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದಿದ್ದಾರೆ.
ಈ ಬಗ್ಗೆ ಪಂದ್ಯ ಮುಗಿದ ಬಳಿಕ ಮಾತನಾಡಿದ ಮೇರಿ, “ನಾನೇಕೆ ಅವಳೊಂದಿಗೆ ಕೈ ಜೋಡಿಸಲಿ. ಅವಳಿಗೆ ನನ್ನನ್ನು ಗೌರವಿಸುವುದು ಗೊತ್ತಿಲ್ಲ. ನಾನೇಕೆ ಅವಳನ್ನು ಗೌರವಿಸಲಿ. ಒಂದು ಕಡೆಯಲ್ಲಿ ನಿಖತ ಹೇಳುತ್ತಾಳೆ ನಾನೇ ಅವಳ ಆರ್ದಶ ಎಂದು, ಮತ್ತೆ ನನ್ನ ಮೇಲೆ ಆರೋಪ ಮಾಡುತ್ತಾಳೆ” ಎಂದು ತಿಳಿಸಿದ್ದಾರೆ.
“ನಿಖತ ನನ್ನ ಬಗ್ಗೆ ಮಾಧ್ಯಮಗಳ ಮುಂದೆ ಸಾಕಷ್ಟು ಹೇಳಿಕೆ ನೀಡಿದ್ದಾಳೆ. ಅವಳು ಕೇಂದ್ರ ಕ್ರೀಡಾ ಸಚಿವ, ಬಾಕ್ಸಿಂಗ್ ಸಂಸ್ಥೆಗೆ ಪತ್ರ ಬರೆದು ದೂರಿದ್ದಾಳೆ. ಈ ರೀತಿಯ ವರ್ತನೆ ನನಗೆ ಹಿಡಿಸದು. ವಿವಾದಗಳಿಂದ ನಾನು ದೂರ ಇರುತ್ತೇನೆ. ಸದಾ ನನ್ನ ಚಿತ್ತ ಆಟದ ಮೇಲೆ ಇರುತ್ತದೆ. ಅಲ್ಲದೆ ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ. ಟ್ರಾಯಲ್ಸ್ ಬಗ್ಗೆಯೂ ವಿವಾದಗಳು ಎದ್ದಿದ್ದು, ಎಲ್ಲವೂ ಭಾರತೀಯ ಬಾಕ್ಸಿಂಗ್ ಸಂಸ್ಥೆಯ ನಿಯಮದಂತೆ ನಡೆದಿದೆ” ಎಂದು ಮೇರಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


