Manipur

ಆರೀಫ್ ಮೊಹಮ್ಮದ್ ಖಾನ್ ಕೇರಳದಿಂದ ಬಿಹಾರಕ್ಕೆ, ಗಲಭೆಪೀಡಿತ ಮಣಿಪುರಕ್ಕೆ ಮಾಜಿ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ರಾಜ್ಯಪಾಲರಾಗಿ ನೇಮಕ
ರಾಷ್ಟ್ರಪತಿ ಭವನ ಈ ಬಗ್ಗೆ ಅಧಿಕೃತ ಆದೇಶ ಪ್ರಕಟಿಸಿದೆ. ಮಹತ್ವದ ಬೆಳವಣಿಗೆಯಲ್ಲಿ ಕೇರಳದ ರಾಜ್ಯಪಾಲರಾಗಿದ್ದ ಆರೀಫ್ ಮೊಹಮ್ಮದ್ ಖಾನ್ ಅವರನ್ನು ಬಿಹಾರಕ್ಕೆ ವರ್ಗಾವಣೆ ಮಾಡಲಾಗಿದೆ.

ಮಣಿಪುರದಲ್ಲೂ ವಲಸಿಗರ ಹತ್ಯೆ: ಬಿಹಾರಿಗಳನ್ನು ಕೊಂದ ಉಗ್ರನ ಗುಂಡಿಕ್ಕಿ ಹತ್ಯೆ!
ಇಬ್ಬರೂ ಕಾರ್ಮಿಕರು ಕಕ್ಚಿಂಗ್ ಜಿಲ್ಲೆಯ ಕೈರಾಕ್‌ನಲ್ಲಿ ನಿರ್ಮಾಣ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ದಾಳಿ ನಡೆದಿದೆ. ಪಂಚಾಯತ್ ಕಚೇರಿ ಬಳಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಣಿಪುರದಲ್ಲಿ 250 ಮಂದಿ ಸಾವು ಖಂಡಿಸಿ ಇಂಡಿಯಾ ಬ್ಲಾಕ್ ನಿಂದ ದೆಹಲಿಯಲ್ಲಿ ಪ್ರತಿಭಟನೆ
ರಾಷ್ಟ್ರ ರಾಜಧಾನಿಯಲ್ಲಿ ನಡೆಯುವ ಉದ್ದೇಶಿತ ಪ್ರತಿಭಟನೆಯಲ್ಲಿ ಇಂಡಿಯಾ ಮೈತ್ರಿಕೂಟದ ರಾಷ್ಟ್ರೀಯ ನಾಯಕರು ಭಾಗವಹಿಸಬಹುದು ಎಂದು ಅವರು ತಿಳಿಸಿದ್ದಾರೆ.

ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ: ಮೇ 2023 ರಿಂದ ಇದುವರೆಗೆ 258 ಜನರ ಹತ್ಯೆ
ಇಂಫಾಲ್‌ನಲ್ಲಿ ಭದ್ರತಾ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಂಗ್, ಸೇನೆ, ಪೊಲೀಸ್, ಸಿಆರ್ ಪಿಎಫ್, ಬಿಎಸ್ ಎಫ್ ಮತ್ತು ಐಟಿಬಿಪಿ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಪರಿಸ್ಥಿತಿ ಕುರಿತು ಪರಾಮರ್ಶೆ ನಡೆಸಲಾಯಿತು ಎಂದರು.

ಮಣಿಪುರ: 4 ಜಿಲ್ಲೆಗಳಲ್ಲಿ ಸರ್ಕಾರ ಕರ್ಫ್ಯೂ ಸಡಿಲಿಕೆ, AFSPA ಮರು ಹೇರಿಕೆ ವಿರೋಧಿಸಿ ಮೈತೀ ಸಂಘಟನೆಗಳ ಪ್ರತಿಭಟನೆ
ಜಿರಿಬಾಮ್‌ನ ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದಂತೆ 6 ನಾಗರಿಕರ ಹತ್ಯೆಗೆ ಕಾರಣರಾದ ಕುಕಿ-ಜೊ-ಹ್ಮಾರ್ ಗುಂಪಿನ ಸದಸ್ಯರ ವಿರುದ್ಧ ತ್ವರಿತ ಕ್ರಮಕ್ಕೆ ಪ್ರತಿಭಟನಾಕಾರರು ಒತ್ತಾಯಿಸಿದರು.

ಮಣಿಪುರದಲ್ಲಿ ಇನ್ನೂ ಮೂರು ದಿನ ಮೊಬೈಲ್ ಇಂಟರ್ನೆಟ್ ನಿಷೇಧ
ನವೆಂಬರ್ 16 ರಂದು, ಸರ್ಕಾರ, ಬ್ರಾಡ್‌ಬ್ಯಾಂಡ್ ಮತ್ತು ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಅಮಾನತುಗೊಳಿಸಿತ್ತು.

ಮಣಿಪುರಕ್ಕೆ ಭೇಟಿ ನೀಡುವಂತೆ ಪ್ರಧಾನಿ ಮೋದಿಗೆ ಕಾಂಗ್ರೆಸ್ ಒತ್ತಾಯ; ಅಮಿತ್ ಶಾ ರಾಜೀನಾಮೆಗೂ ಆಗ್ರಹ
ಮಣಿಪುರದ "ಡಬಲ್ ಇಂಜಿನ್ ಸರ್ಕಾರದ ಸಂಪೂರ್ಣ ವೈಫಲ್ಯ"ಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ.

ಮಣಿಪುರ: ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದ NPP
ಕಳೆದ ಕೆಲವು ದಿನಗಳಿಂದ ಮಣಿಪುರದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ ಬಿಜೆಪಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ NPP ಪತ್ರ..

ಮಣಿಪುರದಲ್ಲಿ 6 ಮಂದಿ ಹತ್ಯೆ: 2 ಸಚಿವರು, 3 ಶಾಸಕರ ಮನೆಗೆ ನುಗ್ಗಿದ ಪ್ರತಿಭಟನಾಕಾರರು; ಕರ್ಫ್ಯೂ ಜಾರಿ!
ಶಾಸಕರ ಮನೆಗಳ ಮೇಲೆ ಗುಂಪು ದಾಳಿಗಳ ಹಿನ್ನೆಲೆಯಲ್ಲಿ ಇಂಫಾಲ್ ಪಶ್ಚಿಮ ಆಡಳಿತ ಅನಿರ್ದಿಷ್ಟ ಅವಧಿಗೆ ಜಿಲ್ಲೆಯಲ್ಲಿ ನಿಷೇಧಾಜ್ಞೆಗಳನ್ನು ವಿಧಿಸಿದೆ.

