Manipur

ನಾಯಕತ್ವ ಬಿಕ್ಕಟ್ಟಿನ ನಡುವೆ ಬಿಜೆಪಿ ನಿಯೋಗದಿಂದ ಮಣಿಪುರ ರಾಜ್ಯಪಾಲರ ಭೇಟಿ
ಇಂದು ಸಂಜೆ ಇಂಫಾಲ್‌ನ ರಾಜಭವನಕ್ಕೆ ತೆರಳಿದ ಬಿಜೆಪಿ ಈಶಾನ್ಯ ಉಸ್ತುವಾರಿ ಸಂಬಿತ್ ಪಾತ್ರ ಮತ್ತು ಪಕ್ಷದ ರಾಜ್ಯಾಧ್ಯಕ್ಷೆ ಎ ಶಾರದಾ ದೇವಿ ನೇತೃತ್ವದ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿತು.

Manipur: ಉಗ್ರರ ಅಡಗುತಾಣ ಭೇದಿಸಿದ ಭದ್ರತಾ ಪಡೆಗಳು; ಏಳು ಜನರ ಬಂಧನ
ಖಚಿತ ಸುಳಿವಿನ ಮೇರೆಗೆ ಪೊಲೀಸರು ಭಾನುವಾರ ಟೆಲ್ಲೌ ಮಖಾ ಲೈಕೈನಲ್ಲಿ ದಾಳಿ ನಡೆಸಿ ಉಗ್ರರನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಮಣಿಪುರ: ಮುಖ್ಯಮಂತ್ರಿ ಸ್ಥಾನಕ್ಕೆ ಎನ್ ಬಿರೇನ್ ಸಿಂಗ್ ದಿಢೀರ್ ರಾಜೀನಾಮೆ!
ಈಶಾನ್ಯ ರಾಜ್ಯ ಮೇ 2023 ರಿಂದ ಜನಾಂಗೀಯ ಹಿಂಸಾಚಾರದಿಂದ ನರಳುತ್ತಿದೆ.

ಮಣಿಪುರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದ ಜೆಡಿಯು
ರಾಜ್ಯದ ಏಕೈಕ ಜೆಡಿಯು ಶಾಸಕ ಎಂಡಿ ಅಬ್ದುಲ್ ನಾಸಿರ್ ಅವರು ವಿರೋಧ ಪಕ್ಷಗಳ ಸ್ಥಾನದಲ್ಲಿ ಕುಳಿತುಕೊಳ್ಳಲಿದ್ದಾರೆ ಎಂದು ನಿತೀಶ್ ಕುಮಾರ್ ನೇತೃತ್ವದ ಪಕ್ಷ ಬುಧವಾರ ತಿಳಿಸಿದೆ.

'ಬಿಜೆಪಿ ಮಣಿಪುರವನ್ನು ಸುಟ್ಟ ಬೆಂಕಿಕಡ್ಡಿ', ಪ್ರಧಾನಿ ಅಪರಾಧದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ
"ಬಿಜೆಪಿ ಮಣಿಪುರವನ್ನು ಸುಟ್ಟ ಬೆಂಕಿಕಡ್ಡಿ!" ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಕಿಡಿಕಾರಿದ್ದಾರೆ. ಅವರು ಇತ್ತೀಚಿನ ಹಿಂಸಾಚಾರದ ಕುರಿತು ಸುದ್ದಿ ವರದಿಯ ಸ್ಕ್ರೀನ್ ಶಾಟ್ ನ್ನು ಸಹ ಹಂಚಿಕೊಂಡಿದ್ದಾರೆ.

ಮಣಿಪುರದಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡು ವಶ
ನಾಲ್ಕು ಕೈ ಗ್ರೆನೇಡ್‌ಗಳು, ಒಂದು ಡಿಟೋನೇಟರ್, ಐದು ಗಲಭೆ ನಿಗ್ರಹ ಶೆಲ್ ಮತ್ತು ಮದ್ದುಗುಂಡುಗಳನ್ನು ಭದ್ರತಾ ಪಡೆಗಳು ಜಪ್ತಿ ಮಾಡಿವೆ.

ಮಣಿಪುರ: ಇಂಫಾಲ್ ಪಶ್ಚಿಮ ಜಿಲ್ಲೆಯ ಗ್ರಾಮದ ಮೇಲೆ ಶಂಕಿತ ಉಗ್ರರ ದಾಳಿ
ಪರಿಸ್ಥಿತಿಯನ್ನು ನಿಯಂತ್ರಿಸಲು ಹೆಚ್ಚುವರಿ ಭದ್ರತಾ ಪಡೆಗಳು ಪ್ರದೇಶಕ್ಕೆ ಧಾವಿಸಿದ್ದರೂ ಸಹ ಪ್ರದೇಶದಲ್ಲಿ ನಿಯೋಜಿಸಲಾದ ಗ್ರಾಮ ಸ್ವಯಂಸೇವಕರು ಪ್ರತಿದಾಳಿ ನಡೆಸಿದರು. ದಾಳಿಯಲ್ಲಿ ಯಾವುದೇ ಸಾವು ನೋವು ಸಂಭವಿಸಿದ ವರದಿಯಾಗಿಲ್ಲ.

ಮಣಿಪುರ ಹಿಂಸಾಚಾರಕ್ಕೆ ಕ್ಷಮೆಯಾಚಿಸಿದ ಸಿಎಂ; ಪ್ರಧಾನಿ ಮೋದಿ ಏಕೆ ಕ್ಷಮೆಯಾಚಿಸುತ್ತಿಲ್ಲ?: ಕಾಂಗ್ರೆಸ್
"ಪ್ರಧಾನಿ ಅವರು ಮಣಿಪುರಕ್ಕೆ ಹೋಗಿ, ಸಿಎಂ ಹೇಳಿದ ಮಾತನ್ನು ಏಕೆ ಹೇಳಬಾರದು? ಅವರು ಮೇ 4, 2023 ರಿಂದ ದೇಶ ಮತ್ತು ಪ್ರಪಂಚದಾದ್ಯಂತ ಪ್ರವಾಸ ಮಾಡಿದ್ದರೂ ಹಿಂಸಾಚಾರ ಪೀಡಿತ ರಾಜ್ಯಕ್ಕೆ ಭೇಟಿ ನೀಡುವುದನ್ನು ಉದ್ದೇಶಪೂರ್ವಕವಾಗಿ ತಪ್ಪಿಸಿದ್ದಾರೆ"

ಮಣಿಪುರದಲ್ಲಿ ಸೇನಾ ವಾಹನ ಅಪಘಾತ: ಬೆಳಗಾವಿ ಯೋಧ ಸಾವು
ಮಣಿಪುರದ ಇಂಫಾಲಾ ಜಿಲ್ಲೆಯ ಬೊಂಬಾಲಾ ಪ್ರದೇಶದ ಇಂಪಾಲಾ ಕಣಿವೆಯಲ್ಲಿ ಮಂಗಳವಾರ ಸೇನಾ ವಾಹನ ಉರುಳಿ, ಬೆಳಗಾವಿ ಜಿಲ್ಲೆಯ ಯೋಧ ಸಾವನ್ನಪ್ಪಿದ್ದಾರೆ.

