Manipur Violence

ಮಣಿಪುರ ವಿಚಾರವಾಗಿ ಗೋವಾ ಸದನದಲ್ಲಿ ಗದ್ದಲ: ಎಲ್ಲಾ 7 ಪ್ರತಿಪಕ್ಷ ಸದಸ್ಯರು ಎರಡು ದಿನಗಳ ಅವಧಿಗೆ ಅಮಾನತು
ಮಣಿಪುರ ಹಿಂಸಾಚಾರದ ಬಗ್ಗೆ ಸದನದಲ್ಲಿ ಗದ್ದಲ ಸೃಷ್ಟಿಸಿದ್ದಕ್ಕಾಗಿ ಗೋವಾ ವಿಧಾನಸಭೆಯ ಎಲ್ಲಾ ಏಳು ಪ್ರತಿಪಕ್ಷಗಳ ಸದಸ್ಯರನ್ನು ಸೋಮವಾರ ಎರಡು ದಿನಗಳ ಕಾಲ ಅಮಾನತುಗೊಳಿಸಲಾಯಿತು.

ನಿಯಮ 267 ಅಡಿ ಮಣಿಪುರ ಪರಿಸ್ಥಿತಿ ಕುರಿತ ಚರ್ಚೆಗೆ ವಿಪಕ್ಷ ಪಟ್ಟು, ರಾಜ್ಯಸಭೆ ಕಲಾಪ ಮಧ್ಯಾಹ್ನ 2ಕ್ಕೆ ಮುಂದೂಡಿಕೆ
ಸೋಮವಾರ ಮಧ್ಯಾಹ್ನ 2 ಗಂಟೆಗೆ ರಾಜ್ಯಸಭೆಯಲ್ಲಿ ಮಣಿಪುರ ವಿಷಯದ ಚರ್ಚೆಗೆ ಸರ್ಕಾರ ಒಪ್ಪಿಗೆ ನೀಡಿತು ಆದರೆ ಪ್ರತಿಪಕ್ಷಗಳು ಸದನದ ನಿಯಮ 267 ರ ಅಡಿಯಲ್ಲಿ ಮಾತ್ರ ಚರ್ಚೆಗೆ ಒತ್ತಾಯಿಸಿದವು. ಇದರಿಂದಾಗಿ ಭೋಜನ ವಿರಾಮಕ್ಕೂ ಮುನ್ನಾ ಎರಡು ಬಾರಿ ಕಲಾಪವನ್ನು ಸಭಾಪತಿ ಮುಂದೂಡಿದರು.

ಮಣಿಪುರದ ಇಬ್ಬರು ಮಹಿಳೆಯರ ವಿವಸ್ತ್ರಗೊಳಿಸಿ ಮೆರವಣಿಗೆ; ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಸಂತ್ರಸ್ತೆಯರು
ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ, ಮೆರವಣಿಗೆ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರು ಸಂತ್ರಸ್ತೆಯರು ಇದೀಗ ಕೇಂದ್ರ ಮತ್ತು ಮಣಿಪುರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

INDIA ಒಕ್ಕೂಟದ ಇತರ ಸದಸ್ಯರಿಗೆ ಮಣಿಪುರದ ಪರಿಸ್ಥಿತಿ ವಿವರಿಸಿದ 21 ಸಂಸದರ ನಿಯೋಗ
ಘರ್ಷಣೆ ಪೀಡಿತ ಮಣಿಪುರ ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಲು ಸೋಮವಾರ ಮಣಿಪುರಕ್ಕೆ ತೆರಳಿದ್ದ ವಿರೋಧ ಪಕ್ಷಗಳ INDIA ಮೈತ್ರಿಕೂಟದ ಸಂಸದರು ಒಕ್ಕೂಟದ ಇತರೆ ನಾಯಕರಿಗೆ ಮಾಹಿತಿ ನೀಡಿದರು.

ಅವಿಶ್ವಾಸ ನಿರ್ಣಯ ಅಂಗೀಕಾರದ ನಂತರ ಮಸೂದೆಗಳನ್ನು ಅಂಗೀಕರಿಸುವುದು ಸಾಂವಿಧಾನಕ್ಕೆ ವಿರುದ್ಧ: ಮನೀಶ್ ತಿವಾರಿ
ಲೋಕಸಭೆಯು ಅವಿಶ್ವಾಸ ನಿರ್ಣಯವನ್ನು ಅಂಗೀಕರಿಸಿದ ನಂತರ ಅಂಗೀಕರಿಸಿದ ಎಲ್ಲಾ ಮಸೂದೆಗಳು 'ಸಾಂವಿಧಾನಕ್ಕೆ ವಿರುದ್ಧ' ಎಂದು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಹೇಳಿದ್ದಾರೆ.

ಮಣಿಪುರ ಇಬ್ಬರು ಮಹಿಳೆಯರ ವಿಡಿಯೋ ವೈರಲ್: ಕೇಂದ್ರವನ್ನು 'ಧೃತರಾಷ್ಟ್ರ' ಎಂದು ಕರೆದ ಉದ್ಧವ್ ಠಾಕ್ರೆ
ಮೇ 3ರಂದು ಈಶಾನ್ಯ ರಾಜ್ಯದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ, ಮೆರವಣಿಗೆ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ ಘಟನೆಗೆ ಸಂಬಂಧಿಸಿದಂತೆ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಶನಿವಾರ ಕೇಂದ್ರ ಮತ್ತು ಮಣಿಪುರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಮಣಿಪುರ ಇಬ್ಬರು ಮಹಿಳೆಯರ ವಿಡಿಯೋ ವೈರಲ್ ಪ್ರಕರಣ: ತನಿಖೆ ಕೈಗೆತ್ತಿಕೊಂಡ ಸಿಬಿಐ
ಮೇ 4 ರಂದು ಮಣಿಪುರದಲ್ಲಿ ಗುಂಪೊಂದು ಇಬ್ಬರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ.

ಮಣಿಪುರ ನಗ್ನ ವೈರಲ್ ವಿಡಿಯೋ ಪ್ರಕರಣ: ಸಿಬಿಐ ತನಿಖೆಗೆ ಆದೇಶ; ಮಣಿಪುರದಿಂದ ಹೊರಗೆ ವಿಚಾರಣೆ ಕೋರಿ ಸುಪ್ರೀಂ'ಗೆ ಮನವಿ
ಮಣಿಪುರದಲ್ಲಿ ಕುಕಿ ಸಮುದಾಯದ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿಸಿ ಮೆರವಣಿಗೆ ಮಾಡಿ, ಕಿರುಕುಳ ನೀಡಿದ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ)ಕ್ಕೆ ವಹಿಸಿರುವ ಕೇಂದ್ರ ಸರ್ಕಾರ, ಪ್ರಕರಣದ ವಿಚಾರಣೆಯನ್ನು ಮಣಿಪುರದಿಂದ ಹೊರಗೆ ನಡೆಸಲು ಆದೇಶಿಸುವಂತೆ ಸುಪ್ರೀಂ ಕೋರ್ಟ್ ಬಳಿ ಮನವಿ ಮಾಡಿಕೊಂಡಿದೆ.

ಮಣಿಪುರ ಹಿಂಸಾಚಾರ: ಪ್ರಧಾನಿ ನರೇಂದ್ರ ಮೋದಿ ಮೌನ ಪ್ರಶ್ನಿಸಿದ ಸಚಿನ್ ಪೈಲಟ್
ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಮಣಿಪುರ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೌನವನ್ನು ಪ್ರಶ್ನಿಸಿದ್ದಾರೆ ಮತ್ತು ಹಿಂಸಾಚಾರವನ್ನು ತಗ್ಗಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರವು ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

