Manipur Violence

ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಅಸ್ಸಾಂ ರೈಫಲ್ಸ್ ಬದಲಿಗೆ CRPF ನಿಯೋಜನೆ!
ತೆಲಂಗಾಣದ ವಾರಂಗಲ್‌ನಿಂದ ಬೆಟಾಲಿಯನ್ ಸಂಖ್ಯೆ 58 ಮತ್ತು ಜಾರ್ಖಂಡ್‌ನ ಲತೇಹರ್‌ನಿಂದ ಬೆಟಾಲಿಯನ್ ಸಂಖ್ಯೆ 112 ಅನ್ನು ಸ್ಥಳಾಂತರಿಸಲಾಗುತ್ತದೆ.

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣ: ಪೊಲೀಸರೊಂದಿಗೆ ಘರ್ಷಣೆ; 40 ವಿದ್ಯಾರ್ಥಿಗಳಿಗೆ ಗಾಯ
ಮಣಿಪುರ ಸರ್ಕಾರ ಇಂಫಾಲ್ ಪೂರ್ವ ಮತ್ತು ಪಶ್ಚಿಮ ಜಿಲ್ಲೆಗಳಲ್ಲಿ ಕರ್ಫ್ಯೂ ಮತ್ತು ಥೌಬಲ್‌ನಲ್ಲಿ BNSS ನ ಸೆಕ್ಷನ್ 163 (2) ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ.

ಮಣಿಪುರ ಹಿಂಸಾಚಾರ: ರಾಜಭವನಕ್ಕೆ ವಿದ್ಯಾರ್ಥಿಗಳ ಪ್ರತಿಭಟನಾ ಮೆರವಣಿ; ಅಶ್ರುವಾಯು ಪ್ರಯೋಗ; 5 ದಿನ ಇಂಟರ್ನೆಟ್ ಸ್ಥಗಿತ!
ರಾಜಭವನದೆಡೆಗೆ ಹೋಗುವುದಕ್ಕೂ ಮೊದಲು ಭದ್ರತಾ ಸಿಬ್ಬಂದಿಗಳು ಪ್ರತಿಭಟನಾ ನಿರತರನ್ನು ಕಾಂಗ್ರೆಸ್ ಭವನದ ಬಳಿ ತಡೆದಿದ್ದಾರೆ.

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ರಾಜ್ಯಪಾಲರ ಭೇಟಿಯಾದ ಸಿಎಂ ಬಿರೇನ್ ಸಿಂಗ್
ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ಎರಡು ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಗಲಭೆ ಪೀಡಿತ ಪ್ರದೇಶಗಳಲ್ಲಿ ಸೇನಾ ಹೆಲಿಕಾಫ್ಟರ್ ಮೂಲಕ ಕಣ್ಗಾವಲಿಡಲು ಮತ್ತು ಡ್ರೋನ್ ಪತ್ತೆ ವ್ಯವಸ್ಥೆಯೊಂದಿಗೆ ಬೃಹತ್ ಕೂಂಬಿಂಗ್ ಕಾರ್ಯಾಚರಣೆ ನಡೆಸಲು ಭದ್ರತಾ ಪಡೆಗಳನ್ನು ನಿಯೋಜಿಸಲು ಸರ್ಕಾರ ನಿರ್ಧರಿಸಿದೆ.

ಮಣಿಪುರ ಹಿಂಸಾಚಾರ: ಕೊನೆಗೂ ಮೌನ ಮುರಿದ ಪ್ರಧಾನಿ ಮೋದಿ; ಕಾಂಗ್ರೆಸ್ ತೀವ್ರ ಟೀಕೆ
ಮಣಿಪುರದಲ್ಲಿ ಶಾಂತಿ ಮರು ಸ್ಥಾಪಿಸಲು ಪ್ರಯತ್ನ ಮಾಡಲಾಗುತ್ತಿದೆ. ಈ ಸಂಬಂಧ 500 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಸುಮಾರು 11,000 ಎಫ್ ಐಆರ್ ದಾಖಲಿಸಲಾಗಿದೆ.

ಮಣಿಪುರ ಹಿಂಸಾಚಾರ ವಿಷಯ ಆದ್ಯತೆಯಾಗಬೇಕು, ನಿಜವಾದ ಜನಸೇವಕ ದಾರ್ಷ್ಟ್ಯ ತೋರುವುದಿಲ್ಲ: NDA ಸರ್ಕಾರಕ್ಕೆ ಭಾಗ್ವತ್ ಸಂದೇಶ!
ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ಮಿತ್ರಪಕ್ಷಗಳ ಬೆಂಬಲದೊಂದಿಗೆ ರಚನೆಯಾದ ಬೆನ್ನಲ್ಲೇ ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಕೇಂದ್ರ ಸರ್ಕಾರಕ್ಕೆ ಸಂದೇಶ ರವಾನಿಸಿದ್ದಾರೆ.

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಮತ್ತಿಬ್ಬರು ಬಲಿ, ಮೂವರಿಗೆ ಗಾಯ
ಮಣಿಪುರದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದ್ದು, ಬಂಡುಕೋರರು ಮತ್ತು ಗ್ರಾಮಸ್ಥರ ನಡುವೆ ನಡೆದಿರುವ ಗುಂಡಿನ ಕಾಳಗದಲ್ಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟು, ಮೂವರಿಗೆ ಗಾಯವಾಗಿರುವ ಘಟನೆ ಮಂಗಳವಾರ ನಡೆದಿದೆ.

ಕಾಂಗ್ರೆಸ್ ಪ್ರಧಾನಿಯಾಗಿದ್ದರೆ ನಾಲ್ಕೇ ದಿನಕ್ಕೆ ಮಣಿಪುರ ಹಿಂಸಾಚಾರ ನಿಯಂತ್ರಿಸುತ್ತಿದ್ದರು: ರಾಹುಲ್ ಗಾಂಧಿ
ಕಾಂಗ್ರೆಸ್ ನ ಪ್ರಧಾನಿ ಇದ್ದಿದ್ದರೆ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ನಾಲ್ಕೇ ದಿನಕ್ಕೆ ನಿಯಂತ್ರಣಕ್ಕೆ ಬರುತ್ತಿತ್ತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾನುವಾರ ಹೇಳಿದ್ದಾರೆ.

ಮಣಿಪುರದಲ್ಲಿ ನಿಲ್ಲದ ಹಿಂಸಾಚಾರ; ಗುಂಡಿನ ಗಾಯಗಳೊಂದಿಗೆ ಮಹಿಳೆ ಸೇರಿದಂತೆ ಇಬ್ಬರ ಮೃತದೇಹ ಪತ್ತೆ
ಮಣಿಪುರದ ಇಂಫಾಲ ಪೂರ್ವ ಮತ್ತು ಪಶ್ಚಿಮ ಜಿಲ್ಲೆಗಳಲ್ಲಿ ಗುಂಡಿನ ಗಾಯದೊಂದಿಗೆ ಮಹಿಳೆ ಸೇರಿದಂತೆ ಎರಡು ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

