ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಅಸ್ಸಾಂ ರೈಫಲ್ಸ್ ಬದಲಿಗೆ CRPF ನಿಯೋಜನೆ!
ತೆಲಂಗಾಣದ ವಾರಂಗಲ್‌ನಿಂದ ಬೆಟಾಲಿಯನ್ ಸಂಖ್ಯೆ 58 ಮತ್ತು ಜಾರ್ಖಂಡ್‌ನ ಲತೇಹರ್‌ನಿಂದ ಬೆಟಾಲಿಯನ್ ಸಂಖ್ಯೆ 112 ಅನ್ನು ಸ್ಥಳಾಂತರಿಸಲಾಗುತ್ತದೆ.

ನವದೆಹಲಿ: ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಕೇಂದ್ರದ ನಿರ್ದೇಶನದಂತೆ ಅಸ್ಸಾಂ ರೈಫಲ್ಸ್ ಘಟಕಗಳ ಜಾಗಕ್ಕೆ ತಲಾ 1,000 ಸಿಬ್ಬಂದಿಯನ್ನೊಳಗೊಂಡ CRPF ಎರಡು ಹೊಸ ಬೆಟಾಲಿಯನ್‌ಗಳನ್ನು ನಿಯೋಜಿಸಲಾಗಿದೆ.
ತೆಲಂಗಾಣದ ವಾರಂಗಲ್‌ನಿಂದ ಬೆಟಾಲಿಯನ್ ಸಂಖ್ಯೆ 58 ಮತ್ತು ಜಾರ್ಖಂಡ್‌ನ ಲತೇಹರ್‌ನಿಂದ ಬೆಟಾಲಿಯನ್ ಸಂಖ್ಯೆ 112 ಅನ್ನು ಸ್ಥಳಾಂತರಿಸಲಾಗುತ್ತದೆ. ಮೊದಲ ಘಟಕವು ಮಣಿಪುರದ ಕಾಂಗ್ವೈ (ಚುರಾಚಂದಪುರ) ದಲ್ಲಿ ತನ್ನ ಪ್ರಧಾನ ಕಛೇರಿಯನ್ನು ಹೊಂದಿರುತ್ತದೆ ಮತ್ತು ಎರಡನೇ ಘಟಕವು ಇಂಫಾಲ್ ಸುತ್ತಲೂ ಇರಲಿದೆ ಎಂದು CRPF ನ ಮೂಲಗಳು ತಿಳಿಸಿವೆ.
ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯದ ಇತರ ಕೆಲವು ಭಾಗಗಳಲ್ಲಿ ಕಾರ್ಯಾಚರಣೆಯ ಕರ್ತವ್ಯಕ್ಕಾಗಿ ಮಣಿಪುರದಿಂದ ಎರಡು ಅಸ್ಸಾಂ ರೈಫಲ್ಸ್ ಬೆಟಾಲಿಯನ್‌ಗಳನ್ನು ಹಿಂತೆಗೆದುಕೊಂಡ ನಂತರ ಸಿಆರ್‌ಪಿಎಫ್ ಬೆಟಾಲಿಯನ್‌ಗಳನ್ನು ಸ್ಥಳಾಂತರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



