Manipur Violence

ಸರ್ಜಿಕಲ್ ಸ್ಟ್ರೈಕ್ ನೇತೃತ್ವ ವಹಿಸಿದ್ದ ನಿವೃತ್ತ ಸೇನಾಧಿಕಾರಿಗೆ ಮಣಿಪುರದ ಟಾಸ್ಕ್!!
ಕಳೆದ ಹಲವು ತಿಂಗಳುಗಳಿಂದ ಹಿಂಸಾಚಾರದಿಂದ ನಲುಗಿ ಹೋಗಿರುವ ಮಣಿಪುರದಲ್ಲಿ ಶಾಂತಿ ಸ್ಥಾಪನೆಯ ಟಾಸ್ಕ್ ಅನ್ನು ಮಹತ್ವದ ವ್ಯಕ್ತಿಗೆ ಕೇಂದ್ರ ಸರ್ಕಾರ ನೀಡಿದೆ.

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಐದು ಮನೆಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು
ಜನಾಂಗೀಯ ಕಲಹ ಪೀಡಿತ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದಿದ್ದು, ರಾಜಧಾನಿ ಇಂಫಾಲ್‌ನ ನ್ಯೂ ಚೆಕ್ಕೋನ್ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ ದುಷ್ಕರ್ಮಿಗಳು ಐದು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ.

ಮಣಿಪುರ ಹಿಂಸಾಚಾರ: ಸಿಬಿಐಗೆ ವರ್ಗಾಯಿಸಿದ ಪ್ರಕರಣಗಳ ಅಸ್ಸಾಂ ಹೈಕೋರ್ಟ್ ಗೆ ವರ್ಗ, ನ್ಯಾಯಾಧೀಶರ ನಾಮನಿರ್ದೇಶನಕ್ಕೆ ಸಿಜೆಐಗೆ ಸುಪ್ರೀಂ ಸೂಚನೆ
ಮಣಿಪುರ ಹಿಂಸಾಚಾರದ ಸಿಬಿಐ ಪ್ರಕರಣಗಳನ್ನು ಅಸ್ಸಾಂನ ಗುವಾಹತಿ ಹೈಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ ಕೋರ್ಟ್, ವಿಚಾರಣಾ ನ್ಯಾಯಾಧೀಶರ ನಾಮನಿರ್ದೇಶನ ಮಾಡಲು ಗುವಾಹತಿ ಹೈಕೋರ್ಟ್ ಸಿಜೆಐಗೆ ಸೂಚನೆ ನೀಡಿದೆ.

ಮಣಿಪುರ: ಮಯನ್ಮಾರ್ ಗೆ ಪಲಾಯನ ಮಾಡಿದ್ದ 200ಕ್ಕೂ ಹೆಚ್ಚು ಮೆಯ್ಟೀ ಸಮುದಾಯದವರು ಮರಳಿ ರಾಜ್ಯಕ್ಕೆ- ಸಿಎಂ ಬಿರೇನ್ ಸಿಂಗ್
ಮಣಿಪುರ ಜನಾಂಗೀಯ ಹಿಂಸಾಚಾರದಿಂದ ಜೀವ ಉಳಿಸಿಕೊಳ್ಳಲು ನೆರೆಯ ಮಯನ್ಮಾರ್ ದೇಶಕ್ಕೆ ಪಲಾಯನ ಮಾಡಿದ್ದ 200ಕ್ಕೂ ಅಧಿಕ ಮೆಯ್ಟೀ ಸಮುದಾಯದವರು ಮರಳಿ ರಾಜ್ಯಕ್ಕೆ ಸುರಕ್ಷಿತವಾಗಿ ಆಗಮಿಸಿದ್ದಾರೆ ಎಂದು ಸಿಎಂ ಬಿರೇನ್ ಸಿಂಗ್ ಹೇಳಿದ್ದಾರೆ.

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಗುಂಡಿನ ದಾಳಿಯಲ್ಲಿ ಮೂವರು ಬಲಿ
ಜನಾಂಗೀಯ ಕಲಹ ಪೀಡಿತ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ನಡೆದಿದ್ದು, ಶುಕ್ರವಾರ ಉಖ್ರುಲ್ ಜಿಲ್ಲೆಯ ಕುಕಿ ಥೋವೈ ಗ್ರಾಮದಲ್ಲಿ ಭಾರೀ ಗುಂಡಿನ ದಾಳಿಯ ನಂತರ ಮೂವರು ಯುವಕರ ವಿರೂಪಗೊಂಡ ಶವಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಣಿಪುರ ಹಿಂಸಾಚಾರ: ಸಿಬಿಐ ತನಿಖೆ ಚುರುಕು; 29 ಮಹಿಳಾ ಅಧಿಕಾರಿಗಳು ಸೇರಿದ 53 ಅಧಿಕಾರಿಗಳ ತಂಡ ನಿಯೋಜನೆ!
ಮಣಿಪುರ ಜನಾಂಗೀಯ ಹಿಂಸಾಚಾರ ಪ್ರಕರಣಗಳ ತನಿಖೆಯನ್ನು ಚುರುಕುಗೊಳಿಸಿರುವ ಸಿಬಿಐ ಬುಧವಾರ ವಿವಿಧ ಶ್ರೇಣಿಗಳಿಂದ 29 ಮಹಿಳಾ ಅಧಿಕಾರಿಗಳು ಸೇರಿದಂತೆ 53 ಅಧಿಕಾರಿಗಳನ್ನು ನಿಯೋಜಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ಹೇಳುವವರೆಗೂ ಮಣಿಪುರ ಕುರಿತು ಮೌನವಾಗಿದ್ದ ಪ್ರಧಾನಿ ಬಗ್ಗೆ INDIA ವಿಶ್ವಾಸವಿಡುವುದು ಹೇಗೆ?: ಕಪಿಲ್ ಸಿಬಲ್
ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಬುಧವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಮಣಿಪುರದ ವಿಚಾರವಾಗಿ ಸಂಸತ್ತಿನಲ್ಲಿ ಹೇಳಿಕೆ ನೀಡಲೂ ಕೂಡ ಆತ್ಮವಿಶ್ವಾಸವಿಲ್ಲದ ಪ್ರಧಾನಿ ನರೇಂದ್ರ ಮೋದಿ ಮೇಲೆ ಇಂಡಿಯಾ (INDIA) ಹೇಗೆ ವಿಶ್ವಾಸವಿಡುತ್ತದೆ ಎಂದು ಪ್ರಶ್ನಿಸಿದ್ದಾರೆ.

ಮಣಿಪುರ: ದುಷ್ಕರ್ಮಿಗಳು ನನ್ನ ಪತ್ನಿ ಮೇಲೆ ಮೃಗಗಳಂತೆ ಮೇಲೆರಗಿದರು; ಸಂತ್ರಸ್ಥ ಮಹಿಳೆಯ ಪತಿ
ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿರುವ ಬೆನ್ನಲ್ಲೇ ಇದೀಗ ಸಂತ್ರಸ್ಥೆಯ ಕುಟುಂಬಸ್ಥರು ಕೂಡ ಇದೀಗ ಧೈರ್ಯವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದು, ದುಷ್ಕರ್ಮಿಗಳು ನನ್ನ ಪತ್ನಿ ಮೇಲೆ ಮೃಗಗಳಂತೆ ಮೇಲರಗಿದರು ಎಂದು ಸಂತ್ರಸ್ಥ ಮಹಿಳೆಯ ಪತಿ ಹೇಳಿದ್ದಾರೆ.

ಮಹಿಳೆಯರು-ಅಲ್ಪಸಂಖ್ಯಾತರು ಸಂಕಷ್ಟದಲ್ಲಿರುವಾಗ ಸ್ವಾತಂತ್ರ್ಯ ದಿನಾಚರಣೆ ಸಂತೋಷಪಡಲು ಸಾಧ್ಯವಿಲ್ಲ: ಪ್ರಕಾಶ್ ರಾಜ್
ಮಂಗಳವಾರ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ದೇಶದಾದ್ಯಂತ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದ್ದರೂ, ನಟ ಪ್ರಕಾಶ್ ರಾಜ್ ಮಾತ್ರ ಸಿನಿಮಾ ಎಕ್ಸ್‌ಪ್ರೆಸ್ ಜೊತೆಗೆ ನಡೆಸಿದ ವಿಶೇಷ ಸಂವಾದದಲ್ಲಿ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

