Mall

ಶೀಘ್ರದಲ್ಲೇ ಸಾರ್ವಜನಿಕ ಸ್ಥಳಗಳಲ್ಲಿ Food testing kits; ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲಿಸುವುದು ಇನ್ನು ಸುಲಭ!
ಆಹಾರದ ಗುಣಮಟ್ಟವನ್ನು ಪರೀಕ್ಷಿಸಲು ಫುಡ್ ಕೋರ್ಟ್ ಮತ್ತು ಮಾಲ್‌ಗಳ ಬಳಿ ಸಾರ್ವಜನಿಕ ಸ್ಥಳಗಳಲ್ಲಿ ಆಹಾರ ಪರೀಕ್ಷಾ ಕಿಟ್‌ಗಳು ಲಭ್ಯವಿರಲಿದ್ದು, ಜನರೇ ತಾವು ತಿನ್ನುವ ಆಹಾರದ ಗುಣಮಟ್ಟವನ್ನು ಪರಿಶೀಲನೆ ನಡೆಸಬಹುದು.

ರೈತನಿಗೆ ಅಪಮಾನ ಪ್ರಕರಣ: ತಾರತಮ್ಯ ತೋರಿದರೆ ಪರವಾನಗಿ ರದ್ದು, ಮಾಲ್‌ಗಳಿಗೆ BBMP ಎಚ್ಚರಿಕೆ!
ರೈತನಿಗೆ ಅಪಮಾನ ಮಾಡಿದ ರೀತಿಯ ಪ್ರಕರಣಗಳು ಮರುಕಳಿಸಿದರೆ ಪರವಾನಗಿ ರದ್ದುಗೊಳಿಸಲಾಗುವುದು. ಜೊತೆಗೆ ಭಾರತೀಯ ನ್ಯಾಯ ಸಂಹಿತೆ ಅಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ.

ನೀರಿನ ಅಭಾವ: ನಗರದ ಮಾಲ್ ಗಳಲ್ಲಿ ಗಬ್ಬು ನಾರುತ್ತಿವೆ ಶೌಚಾಲಯಗಳು!
ದೀರ್ಘಾವಧಿಯ ನೀರಿನ ಕೊರತೆಯಿಂದಾಗಿ ನಗರದಲ್ಲಿ ನೀರಿನ ಬಿಕ್ಕಟ್ಟು ಮತ್ತಷ್ಟು ತಲೆದೋರಿದ್ದು, ಇದರ ಪರಿಣಾಮ ನಗರದಲ್ಲಿನ ಹಲವಾರು ಮಾಲ್‌ಗಳಲ್ಲಿನ ಶೌಚಾಲಯಗಳು ಗಬ್ಬು ನಾರುತ್ತಿವೆ.

ನಗರದ 7 ಮಾಲ್ ಗಳಿಂದ ತೆರಿಗೆ ಪಾವತಿ ಬಾಕಿ: ಬಿಬಿಎಂಪಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇದೂವರೆಗೆ ರೂ.2,093 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದೆ, ಆದರೆ 44 ಮಾಲ್‌ಗಳ ಪೈಕಿ ಏಳು ಮಾಲ್‌ಗಳು ಇನ್ನೂ 46.70 ಕೋಟಿ ತೆರಿಗೆ ಪಾವತಿಸಬೇಕಾಗಿದೆ ಎಂದು ಬಿಬಿಎಂಪಿ (ಕಂದಾಯ) ವಿಶೇಷ ಆಯುಕ್ತ ಆರ್‌ಎಲ್ ದೀಪಕ್ ಅವರು ಶುಕ್ರವಾರ ಹೇಳಿದ್ದಾರೆ.

ಮುಂಬೈ ಶಾಪಿಂಗ್ ಮಾಲ್'ನಲ್ಲಿ ಅಗ್ನಿ ಅವಘಡ: 20 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ, 3,500ಕ್ಕೂ ಹೆಚ್ಚು ಜನರ ಸ್ಥಳಾಂತರ
ದಕ್ಷಿಣ ಮುಂಬೈನಲ್ಲಿರುವ ಸಿಟಿ ಸೆಂಟರ್ ಮಾಲ್ ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಸ್ಥಳಕ್ಕೆ ದೌಡಾಯಿಸಿರುವ 20 ಅಗ್ನಿಶಾಮಕ ದಳದ ವಾಹನಗಳು ಕಾರ್ಯಾಚರಣೆ ಆರಂಭಿಸಿವೆ.

ಕೊರೋನಾ ಎಫೆಕ್ಟ್: ಕಂಟೈನ್ಮೆಂಟ್ ಝೋನ್ ಗಳಲ್ಲಿರುವ ಮಾಲ್'ಗಳು ತೆರೆಯಲು ಅವಕಾಶವಿಲ್ಲ- ಬಿಬಿಎಂಪಿ
ಕಂಟೈನ್ಮೆಂಟ್ ಝೋನ್ ಗಳಲ್ಲಿರುವ ಶಾಪಿಂಗ್ ಮಾಲ್ ಗಳು ತೆರೆಯಲು ಅವಕಾಶವಿಲ್ಲ ಎಂದು ಬಿಬಿಎಂಪಿ ಭಾನುವಾರ ಸ್ಪಷ್ಟಪಡಿಸಿದೆ.

ಜೂನ್ 8ರಿಂದ ಧಾರ್ಮಿಕ ಸ್ಥಳ, ಮಾಲ್ ಆರಂಭ: ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿ!
ಮಹಾಮಾರಿ ಕೊರೋನಾ ಸೋಂಕು ದೇಶದಲ್ಲಿ ಹೆಚ್ಚಾಗುತ್ತಿದ್ದರೂ ಲಾಕ್ ಡೌನ್ ಸಡಿಲಿಕೆ ಮಾಡಲಾಗುತ್ತಿದೆ. ಕಳೆದ 70 ದಿನಗಳ ನಂತರ ಜೂನ್ 8ರಿಂದ ಧಾರ್ಮಿಕ ಸ್ಥಳಗಳು, ಮಾಲ್, ರೆಸ್ಟೋರೆಂಟ್ ಗಳು ಆರಂಭಗೊಳ್ಳುತ್ತಿದ್ದು ಇದಕ್ಕಾಗಿ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ.

ನಮಗೂ ಅನುಮತಿ ನೀಡಿ: ಸರ್ಕಾರಕ್ಕೆ ಮಾಲ್, ಪ್ರವಾಸೋದ್ಯಮ ಸಂಘ ಪದಾಧಿಕಾರಿಗಳಿಂದ ಮನವಿ
ಮಾಲ್, ಹೋಟೆಲ್ ಸೇರಿದಂತೆ ಪ್ರವಾಸಿ ವಲಯಗಳು ಪುನರಾರಂಭಿಸಲು ಅನುಮತಿ ನೀಡುವಂತೆ ಅಖಿಲ ಭಾರತ ಶಾಪಿಂಗ್ ಮಾಲ್'ಗಳ ಸಂಘ ಹಾಗೂ ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘಗಳ ಪದಾಧಿಕಾರಿಗಳು ಪ್ರತ್ಯೇಕವಾಗಿ ಮಂಗಳವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದವು.

ಲಾಕ್ ಡೌನ್ 4.0: ಕೇಂದ್ರ ಸರ್ಕಾರದ ಮಾರ್ಗಸೂಚಿಗೆ ಕಾಯುತ್ತಿರುವ ಕರ್ನಾಟಕ, ನಾಳೆಯಿಂದ ಏನೇನು ಇರಲಿದೆ?
ಲಾಕ್ ಡೌನ್ 3.0 ನಾಳೆಗೆ ಮುಕ್ತಾಯವಾಗಲಿದ್ದು ಲಾಕ್ ಡೌನ್ 4.0ಗೆ ಸಂಬಂಧಪಟ್ಟಂತೆ ಮಾರ್ಗಸೂಚಿಗೆ ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರದತ್ತ ಕುತೂಹಲದಿಂದ ಕಾಯುತ್ತಿದೆ. ಇಂದು ಲಾಕ್ ಡೌನ್ 4.0ಗೆ ಬಗ್ಗೆ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಹೊರಡಿಕೆಯಾಗುವ ಸಾಧ್ಯತೆಯಿದೆ.

