ನೀರಿನ ಅಭಾವ: ನಗರದ ಮಾಲ್ ಗಳಲ್ಲಿ ಗಬ್ಬು ನಾರುತ್ತಿವೆ ಶೌಚಾಲಯಗಳು!
ದೀರ್ಘಾವಧಿಯ ನೀರಿನ ಕೊರತೆಯಿಂದಾಗಿ ನಗರದಲ್ಲಿ ನೀರಿನ ಬಿಕ್ಕಟ್ಟು ಮತ್ತಷ್ಟು ತಲೆದೋರಿದ್ದು, ಇದರ ಪರಿಣಾಮ ನಗರದಲ್ಲಿನ ಹಲವಾರು ಮಾಲ್‌ಗಳಲ್ಲಿನ ಶೌಚಾಲಯಗಳು ಗಬ್ಬು ನಾರುತ್ತಿವೆ.

ಬೆಂಗಳೂರು: ದೀರ್ಘಾವಧಿಯ ನೀರಿನ ಕೊರತೆಯಿಂದಾಗಿ ನಗರದಲ್ಲಿ ನೀರಿನ ಬಿಕ್ಕಟ್ಟು ಮತ್ತಷ್ಟು ತಲೆದೋರಿದ್ದು, ಇದರ ಪರಿಣಾಮ ನಗರದಲ್ಲಿನ ಹಲವಾರು ಮಾಲ್‌ಗಳಲ್ಲಿನ ಶೌಚಾಲಯಗಳು ಗಬ್ಬು ನಾರುತ್ತಿವೆ.
ಮಾಲ್ ಗಳಲ್ಲಿನ ಶೌಚಾಲಯಗಳನ್ನು ಆಗಾಗ್ಗೆ ಅಲ್ಲದೆ, ಕೆಲವೇ ಬಾರಿ ಸ್ವಚ್ಛಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೌಸ್‌ಕೀಪಿಂಗ್ ಸಿಬ್ಬಂದಿಗಳು ಹೇಳಿದ್ದಾರೆ.
ಮಾಲ್ ಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಶೌಚಾಲಯಗಳನ್ನು ಬಳಕೆ ಮಾಡುತ್ತಿರುತ್ತಾರೆ. ನೀರಿನ ಅಭವಾ ಹಿನ್ನೆಲೆಯಲ್ಲಿ ಶೌಚಾಲಯಗಳ ಸ್ವಚ್ಛತೆಗೆ ನೀರು ಬಳಕೆಯನ್ನು ಕಡಿಮೆ ಮಾಡಿ ಏರ್ ಫ್ರೆಶನರ್ ಮತ್ತು ಸೋಂಕುನಿವಾರಕಗಳನ್ನು ಬಳಕೆ ಮಾಡಲಾಗುತ್ತಿದೆ. ಏರ್ ಫ್ರೆಶನರ್ ಬಳಕೆ ಮಾಡಿದರೂ ಸಾಕಷ್ಟು ನೀರಿನಿಂದ ಸ್ವಚ್ಛಗೊಳಿಸದ ಕಾರಣ ದುರ್ವಾಸನೆ ಬರುತ್ತಿದೆ. ಒಂದು ತಿಂಗಳಿನಿಂದಲೂ ಪರಿಸ್ಥಿತಿ ಹೀಗೆಯೇ ಇದೆ ಎಂದು ತಿಳಿಸಿದ್ದಾರೆ.
ಸೇಲ್ಸ್ ಎಕ್ಸಿಕ್ಯೂಟಿವ್ ಆಗಿರುವ ಪ್ರೇರಣಾ ಅವರು ಮಾತನಾಡಿ, ಮಾಲ್ ಗಳಲ್ಲಿ ಶೌಚಾಲಯಗಳ ಸ್ಥಿತಿ ಹದಗೆಡುತ್ತಿದೆ. ದುರ್ವಾಸನೆ ಬರುತ್ತಿದೆ. ಹೌಸ್ ಕೀಪಿಂಗ್ ಸಿಬ್ಬಂದಿಯನ್ನು ವಿಚಾರಿಸಿದಾಗ ಸ್ವಚ್ಛತೆಗೆ ನೀರನ್ನು ಕಡಿಮೆ ಬಳಕೆ ಮಾಡುತ್ತಿರುವುದಾಗಿ ಹೇಳಿದರು ಎಂದು ಹೇಳಿದ್ದಾರೆ.
ಮಲ್ಲೇಶ್ವರಂನ ಮಾಲ್‌ನಲ್ಲಿನ ಮತ್ತೊಬ್ಬ ಹೌಸ್‌ಕೀಪಿಂಗ್ ಸಿಬ್ಬಂದಿ ಮಾತನಾಡಿ, ನೀರು ಬಳಕೆ ಕಡಿಮೆ ಮಾಡಲು, ಸಾಬೂನುಗಳನ್ನು ಫ್ಲಶ್ ಟ್ಯಾಂಕ್‌ಗಳಿಗೆ ಹಾಕುವಂತೆ ಸೂಚಿಸಲಾಗಿದೆ. ದಿನಕ್ಕೆ ಒಂದು ಬಾರಿ ಶೌಚಾಲಯಗಳ ಸ್ವಚ್ಛಗೊಳಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



