madikeri

ಉತ್ತಮ ಗುಣಮಟ್ಟದ ಗಾಳಿ: ಕರ್ನಾಟಕದ ಗದಗ, ಮಡಿಕೇರಿಗೆ ಅಗ್ರಸ್ಥಾನ
ಗದಗ ಹೊರತುಪಡಿಸಿ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳು ‘ಉತ್ತಮ’ ಎಕ್ಯೂಐ ವಿಭಾಗದಲ್ಲಿ ಹುಬ್ಬಳ್ಳಿ (35), ಬಾಗಲಕೋಟೆ (23), ಯಾದಗಿರಿ (30) ಮತ್ತು ಬೀದರ್ (41) ಸೇರಿವೆ.

ಹುಲಿ ಹಲ್ಲು ಕಳ್ಳ ಸಾಗಣೆ ಜಾಲ ಭೇದಿಸಿದ ಮಡಿಕೇರಿ ಪೊಲೀಸರು, ನಾಲ್ವರ ಬಂಧನ
ಹುಲಿ ಹಲ್ಲುಗಳನ್ನು ಮಾರಾಟ ಮಾಡುೃತ್ತಿದ್ದ ಬೃಹತ್ ಜಾಲವನ್ನು ಮಡಿಕೇರಿ ಪೊಲೀಸರು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ವಿರಾಜಪೇಟೆ ತಾಲ್ಲೂಕು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಹಾಗೂ ತಿತಿಮತಿ ಪ್ರಾದೇಶಿಕ ವಲಯ ಅರಣ್ಯ ಘಟಕ ಯಶಸ್ವಿಯಾಗಿದೆ.

ಭಾರತ-ಪಾಕ್ ಟಿ20 ಪಂದ್ಯ ವೀಕ್ಷಣೆ ವೇಳೆ ಹೃದಯಾಘಾತವಾಗಿ ವ್ಯಕ್ತಿ ಸಾವು, ಮಡಿಕೇರಿಯಲ್ಲಿ ಅನಿಲ ಸೋರಿಕೆಗೆ ಯುವತಿ ಬಲಿ!
ಭಾರತ-ಪಾಕಿಸ್ತಾನ ನಡುವಿನ ಟಿ20 ಕ್ರಿಕೆಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಪ್ರದರ್ಶನದ ಬಗ್ಗೆ ಬೇಸರಗೊಂಡಿದ್ದ ದೊಡ್ಡಮಲ್ತೆ ಗ್ರಾಮದ ನಿವಾಸಿ ಉದಯ್ ಎಂಬುವರಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.

ಸೋಮವಾರಪೇಟೆ: ಭಾರತ- ಪಾಕ್ ಕ್ರಿಕೆಟ್ ಪಂದ್ಯ ವೀಕ್ಷಣೆ ವೇಳೆ ಹೃದಯಾಘಾತದಿಂದ ಕ್ರಿಕೆಟ್ ಪ್ರೇಮಿ ಸಾವು
ಜಗತ್ತಿನ ಕ್ರಿಕೆಟ್ ಪ್ರೇಮಿಗಳನ್ನು ತುದಿಗಾಲಲ್ಲಿ ಇರಿಸುವಂತೆ ಮಾಡಿತ್ತು ಭಾನುವಾರದ ಭಾರತ- ಪಾಕ್ ನಡುವಣ ಪಂದ್ಯ.ಭಾರತ ತಂಡ ಗೆದ್ದೇ ತೀರುವುದಾಗಿ ಭಾರತೀಯರು ಮಹದಾಸೆ ಇಟ್ಟುಕೊಂಡಿದ್ದರು.

ಕೊಡಗು: ನೋಂದಣಿಯಾಗದ ಹೋಮ್ ಸ್ಟೇ ನಲ್ಲಿ ಅನಿಲ ಸೋರಿಕೆ; ಯುವತಿ ಸಾವು
ನೋಂದಣಿಯಾಗದ ಹೋಮ್ ಸ್ಟೇ ನಲ್ಲಿ ತಂಗಿದ್ದ ಪ್ರವಾಸಕ್ಕಾಗಿ ಬಂದಿದ್ದ ಯುವತಿಯೋರ್ವಳು ಗ್ಯಾಸ್ ಗೀಸರ್ ನಿಂದ ಅನಿಲ ಸೋರಿಕೆಯಾಗಿ ಮೃತಪಟ್ಟಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಕೂತಿ ಎಂದರೆ ಹೊಡಿ ಸೀಟಿ: ಕೊಡಗಿನಲ್ಲೊಂದು ಮಾದರಿ ಆತ್ಮನಿರ್ಭರ್ ಗ್ರಾಮ
ಗ್ರಾಮ ಸಮಿತಿಯೇ ಪೊಲೀಸ್ ಠಾಣೆ, ನ್ಯಾಯಾಲಯ ಎಲ್ಲಾ. ಯಾರಾದರೂ ಸತ್ತರೆ ಪ್ರತಿ ಮನೆಯಿಂದ ಕಟ್ಟಿಗೆ. ಮೂಲಸೌಕರ್ಯ ಅಭಿವೃದ್ಧಿಗೆ ದೇಣಿಗೆ ಸಂಗ್ರಹ. ಸ್ಥಳೀಯರ ನಡುವೆ ಮದುವೆ ಸಂಬಂಧ ನಿಷಿದ್ಧ. ವೆಲ್ಕಂ ಟು ಕೂತಿ ಗ್ರಾಮ.

ಕೊಡಗು: ಮನೆ ಕಳೆದುಕೊಂಡು ನಿರಾಶ್ರಿತರಾದ ಎಂಟು ಮಂದಿಯ ಕುಟುಂಬ, ನ್ಯಾಯ ಒದಗಿಸಲು ಕೋರಿಕೆ
ಕೊಡಗಿನಲ್ಲಿ ಮನೆ ಕಳೆದುಕೊಂಡು ನಿರಾಶ್ರಿತರಾದ ಯರವ ಸಮುದಾಯದ ಕುಟುಂಬವೊಂದು ನ್ಯಾಯ ಒದಗಿಸುವಂತೆ ಕೋರಿದೆ.ಹುಟ್ಟಿದಾಗಿನಿಂದ ವಾಸಿಸುತ್ತಿದ್ದ ಮನೆ ಕಳೆದುಕೊಂಡ ಮಹಿಳೆ ಪಂಜಿರಿ ಯರವರ ಕುಂಜಿಯ ನೋವು ಹೇಳತೀರದಾಗಿತ್ತು.

12 ವರ್ಷಗಳ ಬಳಿಕ ಮತ್ತೆ ಅರಳಿದ ನೀಲಕುರಿಂಜಿ ಹೂವು: ಮಡಿಕೇರಿ ಬೆಟ್ಟ ಶ್ರೇಣಿಗೆ ನೀಲವರ್ಣದ ಹೊದಿಕೆ!
ಪಶ್ಚಿಮ ಘಟ್ಟದ ಅರಣ್ಯ ಪ್ರದೇಶ ಹಾಗೂ ಬೆಟ್ಟದ ಸಾಲಿನ ಪ್ರಸಿದ್ಧ ಪ್ರವಾಸಿ ತಾಣ ಮಾಂದಲ್ಪಟ್ಟಿಯಲ್ಲಿ 12 ವರ್ಷಗಳ ಬಳಿಕ ನೀಲಕುರಿಂಜಿ ಹೂವು ಅರಳಿದ್ದು, ಬೆಟ್ಟದ ಶ್ರೇಣಿ ನೀಲಿಮಯವಾಗಿ ಕಂಗೊಳಿಸುತ್ತಿದೆ.

ದುಬಾರೆ: ಆನೆ ಮನೆ ಫೌಂಡೇಶನ್ ಆನೆಗಳನ್ನು ವಶಕ್ಕೆ ಪಡೆಯಲು ರಾಜ್ಯ ಸರ್ಕಾರ ಆದೇಶ
ಕುಶಾಲನಗರ ಬಳಿಯ ದುಬಾರೆಯಲ್ಲಿರುವ ಆನೆ ಮನೆ ಫೌಂಡೇಶನ್ ಮಾಲೀಕತ್ವದಲ್ಲಿರುವ ಏಳು ಆನೆಗಳನ್ನು ವಶಕ್ಕೆ ಪಡೆಯಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ವಾರ್ಡನ್ ಆದೇಶ ಹೊರಡಿಸಿದ್ದಾರೆ.

