12 ವರ್ಷಗಳ ಬಳಿಕ ಮತ್ತೆ ಅರಳಿದ ನೀಲಕುರಿಂಜಿ ಹೂವು: ಮಡಿಕೇರಿ ಬೆಟ್ಟ ಶ್ರೇಣಿಗೆ ನೀಲವರ್ಣದ ಹೊದಿಕೆ!
ಪಶ್ಚಿಮ ಘಟ್ಟದ ಅರಣ್ಯ ಪ್ರದೇಶ ಹಾಗೂ ಬೆಟ್ಟದ ಸಾಲಿನ ಪ್ರಸಿದ್ಧ ಪ್ರವಾಸಿ ತಾಣ ಮಾಂದಲ್‌ಪಟ್ಟಿಯಲ್ಲಿ 12 ವರ್ಷಗಳ ಬಳಿಕ ನೀಲಕುರಿಂಜಿ ಹೂವು ಅರಳಿದ್ದು, ಬೆಟ್ಟದ ಶ್ರೇಣಿ ನೀಲಿಮಯವಾಗಿ ಕಂಗೊಳಿಸುತ್ತಿದೆ.

ಮಡಿಕೇರಿ: ಪಶ್ಚಿಮ ಘಟ್ಟದ ಅರಣ್ಯ ಪ್ರದೇಶ ಹಾಗೂ ಬೆಟ್ಟದ ಸಾಲಿನ ಪ್ರಸಿದ್ಧ ಪ್ರವಾಸಿ ತಾಣ ಮಾಂದಲ್‌ಪಟ್ಟಿಯಲ್ಲಿ 12 ವರ್ಷಗಳ ಬಳಿಕ ನೀಲಕುರಿಂಜಿ ಹೂವು ಅರಳಿದ್ದು, ಬೆಟ್ಟದ ಶ್ರೇಣಿ ನೀಲಿಮಯವಾಗಿ ಕಂಗೊಳಿಸುತ್ತಿದೆ.
ವಾರಾಂತ್ಯ ಕರ್ಫ್ಯೂ ಕಾರಣಕ್ಕೆ ವಾರದ ಮಧ್ಯದಲ್ಲೂ ಪ್ರವಾಸಿಗರು ಬಂದು ನೀಲಿ ಬೆಟ್ಟದ ಅಂದವನ್ನು ಸವಿದು, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ. ಹೂವು ಅರಳಿ ಒಂದು ವಾರವಾಗಿದ್ದು, ಇನ್ನೂ ಕೆಲವು ದಿನಗಳ ಸೊಬಗನ್ನು ಕಣ್ತುಂಬಿಕೊಳ್ಳಬಹುದು. ಸಂಘಜೀವಿಯಾಗಿ ಅರಳುವ ಹೂವು ಅಪರೂಪಕ್ಕೊಮ್ಮೆ ಅರಳಿ ಕಾಫಿ ನಾಡಿನ ಬೆಟ್ಟಗಳ ಅಂದ ಹೆಚ್ಚಿಸುತ್ತಿವೆ.
ಇತ್ತೀಚೆಗೆ ನನ್ನ ಸೋದರಸಂಬಂಧಿಗಳೊಂದಿಗೆ ಕೋಟೆ ಬೆಟ್ಟಕ್ಕೆ ಭೇಟಿ ನೀಡಿದ್ದೆ, ಅಲ್ಲಿ ನನಗೆ ಅಭೂತಪೂರ್ವ ಅನುಭವವಾಗಿತ್ತು. ಬೆಟ್ಟದ ಪ್ರಮುಖ ಭಾಗವು ಈ ನೇರಳೆ ಹೂವುಗಳಿಂದ ಆವೃತವಾಗಿತ್ತು. ಈ ಹೂವು ಪ್ರತಿ 12 ವರ್ಷಗಳಿಗೊಮ್ಮೆ ಅರಳುತ್ತವೆ ಎಂದು ನಂತರ ನಮಗೆ ತಿಳಿಯಿತು ಎಂದು ಸ್ಥಳೀಯರಾದ ಧನುಷ್ ಕಾವೇರಿಯಪ್ಪ ಹೇಳಿದರು.

ಪಶ್ಚಿಮಘಟ್ಟದ ಸಾಲಿನ ಕೋಟೆಬೆಟ್ಟ, ಪುಷ್ಪಗಿರಿ, ಕುಮಾರ ಪರ್ವತದಲ್ಲಿ ಹೂವುಗಳು ಅರಳುವುದುಂಟು. ಸ್ಥಳೀಯವಾಗಿ, ಅವುಗಳನ್ನು ಕುರಿಂಜಿ ಹೂವುಗಳು ಎಂದು ಕರೆಯಲಾಗುತ್ತದೆ ಮತ್ತು ವೈಜ್ಞಾನಿಕವಾಗಿ ಅವುಗಳನ್ನು ಸ್ಟ್ರೋಬಿಲಾಂಥೆಸ್ ಕುಂಥಿಯಾನ ಎಂದು ಕರೆಯಲಾಗುತ್ತದೆ. ಇವು 12 ವರ್ಷಗಳಿಗೊಮ್ಮೆ ಅರಳುವುದು ನಿಜ ಎಂದು ಮಡಿಕೇರಿ ಡಿಸಿಎಫ್ ಪೂವಯ್ಯ ಖಚಿತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


