Lucknow

ಉತ್ತರ ಪ್ರದೇಶ: ನೂಪುರ್ ಶರ್ಮಾ ಹತ್ಯೆಗೆ ಯೋಜಿಸಿದ್ದ ಜೈಷ್-ಇ- ಮೊಹಮ್ಮದ್ ಉಗ್ರನ ಬಂಧನ
ಪ್ರವಾದಿ ಮೊಹಮದ್ ಪೈಗಂಬರ್ ಕುರಿತು ವಿವಾದಾತಾತ್ಮಕ ಹೇಳಿಕೆ ನೀಡಿ ಬಿಜೆಪಿಯಿಂದ ಅಮಾನತುಗೊಂಡಿರುವ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ಮೇಲೆ ಆತ್ಮಾಹತ್ಯಾ ದಾಳಿ ನಡೆಸಲು ನಿಯೋಜಿಸಲಾಗಿದ್ದ ಪಾಕಿಸ್ತಾನ ಜೈಷ್ ಎ ಮೊಹಮ್ಮದ್ ಸಂಘಟನೆಯ ಉಗ್ರನನ್ನು ಉತ್ತರ ಪ್ರದೇಶದ ಭಯೋತ್ಪಾದನಾ ಉಗ್ರ ನಿಗ್ರಹ ದಳ ಶುಕ್ರವಾರ ಬಂಧಿಸಿದೆ.

5 ಲಕ್ಷ ಮುಸ್ಲಿಂ ಮನೆಗಳು, ಮದರಸಾ, ದರ್ಗಾಗಳಲ್ಲಿ ತ್ರಿವರ್ಣ ಧ್ವಜ ಹಾರಿಸಲು ಬಿಜೆಪಿ ತಯಾರಿ
ಸ್ವಾತಂತ್ರ್ಯದ ಅಮೃತ ಮಹೋತ್ಸವದ 'ಹರ್ ಘರ್ ತಿರಂಗಾ' ಅಭಿಯಾನದ ಅಂಗವಾಗಿ ಆಗಸ್ಟ್ 15 ರಂದು ಸುಮಾರು 5 ಲಕ್ಷ ಮುಸ್ಲಿಂ ಮನೆಗಳು, ಮದರಾಸ ಮತ್ತು ದರ್ಗಾಗಳಲ್ಲಿ ತ್ರಿವರ್ಣ ಧ್ವಜ ಹಾರಿಸಲು ಉತ್ತರ ಪ್ರದೇಶ ಬಿಜೆಪಿ ನಿರ್ಧರಿಸಿದೆ. ಆಗಸ್ಟ್ 12 ರಿಂದ ಮೂರು ದಿನ ಬಿಜೆಪಿ ಮುಸ್ಲಿಂ ಮೋರ್ಚಾ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಿದೆ.

2024ರ ಲೋಕಸಭಾ ಚುನಾವಣೆ ಸಿದ್ಧತೆ; ಯೋಗಿ ಆದಿತ್ಯಾನಾಥ್ ರ ಹಿಂದೂ ಯುವ ವಾಹಿನಿ ವಿಸರ್ಜನೆ
2002ರಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಅವರು ತಮ್ಮ ವೈಯಕ್ತಿಕ ಶಕ್ತಿಯಾಗಿ ಆರಂಭಿಸಿದ್ದ ಹಿಂದೂ ಯುವ ವಾಹಿನಿ (HYV) ಉತ್ತರ ಪ್ರದೇಶ ಘಟಕವನ್ನು ವಿಸರ್ಜಿಸಲಾಗಿದೆ.

ಹಿಂದಿ ಸಿನಿಮಾ ನಟ, ರಂಗಭೂಮಿ ಕಲಾವಿದ ಮಿಥಿಲೇಶ್ ಚತುರ್ವೇದಿ ನಿಧನ
ಬಾಲಿವುಡ್ ನಟ, ರಂಗಭೂಮಿ ಕಲಾವಿದ, ಹೃತಿಕ್ ರೋಶನ್ ಅವರ 'ಕೋಯಿ ಮಿಲ್ ಗಯಾ' ಸೇರಿದಂತೆ ಹಲವು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದ ನಟ ಮಿಥಿಲೇಶ್ ಚತುರ್ವೇದಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಉಪರಾಷ್ಟ್ರಪತಿ ಚುನಾವಣೆ: ಎನ್ ಡಿಎ ಅಭ್ಯರ್ಥಿ ಜಗದೀಪ್ ಧಂಕರ್ ಗೆ ಬಿಎಸ್ ಪಿ ಬೆಂಬಲ
ಉಪ ರಾಷ್ಟ್ರಪತಿ ಚುನಾವಣೆಯ ಎನ್ ಡಿಎ ಅಭ್ಯರ್ಥಿ ಜಗದೀಪ್ ಧಂಕರ್ ಅವರನ್ನು ಬಿಎಸ್ ಪಿ ಪಕ್ಷ ಬೆಂಬಲಿಸಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಘೋಷಿಸಿದ್ದಾರೆ.

ಐದೇ ದಿನಕ್ಕೆ ಕಿತ್ತು ಬಂತು ಪ್ರಧಾನಿ ಮೋದಿ ಉದ್ಘಾಟಿಸಿದ್ದ ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ರಸ್ತೆ!
ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದ್ದ ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ರಸ್ತೆ ಉದ್ಘಾಟನೆಯಾದ ಐದೇ ದಿನದಲ್ಲಿ ಕಿತ್ತುಬಂದಿದ್ದು, ಕಾಮಗಾರಿ ಗುಣಮಟ್ಟ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ರಾಷ್ಟ್ರಪತಿ ಚುನಾವಣೆಯಲ್ಲಿ ಅಡ್ಡ ಮತದಾನ: ಅಖಿಲೇಶ್ ಮಿತ್ರ ರಾಜ್ ಭರ್ ಗೆ 'ವೈ' ಕೆಟಗರಿ ಭದ್ರತೆ ನೀಡಿದ ಯೋಗಿ ಆದಿತ್ಯನಾಥ್
ಸಮಾಜವಾದಿ ಪಕ್ಷದ ಮಿತ್ರ ಪಕ್ಷ ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷದ ಅಧ್ಯಕ್ಷ ಓಂ ಪ್ರಕಾಶ್ ರಾಜ್ ಭರ್ ಗೆ ಉತ್ತರ ಪ್ರದೇಶ ಸರ್ಕಾರ 'ವೈ' ಕೆಟಗರಿಯ ಭದ್ರತೆ ನೀಡಿರುವುದಾಗಿ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಈ ಕೆಟಗರಿಯ ಭದ್ರತೆಯಡಿ ಇಬ್ಬರು ಆಪ್ತ ಭದ್ರತಾ ಅಧಿಕಾರಿಗಳು ಸೇರಿದಂತೆ 11 ಭದ್ರತಾ ಸಿಬ್ಬಂದಿಯನ್ನು ಒದಗಿಸಲಾಗುತ್ತದೆ.

ಲಖನೌ ಲುಲು ಮಾಲ್‌ನಲ್ಲಿ ನಮಾಜ್ Vs ಹನುಮಾನ್ ಚಾಲೀಸ್: ನಾಲ್ವರ ಬಂಧನ
ರಾಜಧಾನಿ ಲಖನೌದಲ್ಲಿ ಹೊಸದಾಗಿ ತೆರೆದಿರುವ ಲುಲು ಮಾಲ್‌ನಲ್ಲಿ ನಮಾಜ್ ಸಲ್ಲಿಸುವ ವಿಡಿಯೋ ವೈರಲ್ ಆದ ನಂತರ ಪ್ರತಿದಿನ ಆ ಮಾಲ್ ಹಲವು ಅಹಿತಕರ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ.

ಲಖನೌ ಲುಲು ಮಾಲ್‌ನಲ್ಲಿ ನಮಾಜ್: ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲು
ಉತ್ತರ ಪ್ರದೇಶದ ಲಖನೌ ನಲ್ಲಿ ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ಲುಲು ಮಾಲ್‌ನಲ್ಲಿ ನಮಾಜ್ ವಿಚಾರವಾಗಿ ಗಲಾಟೆ ನಡೆದಿರುವ ಹಿನ್ನೆಲೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

