lockdown

ಕೊರೋನಾ ಲಾಕ್ಡೌನ್: ಸಂಕಷ್ಟಕ್ಕೆ ಸಿಲುಕಿದ ಎಪಿಎಂಸಿ ಮಾರುಕಟ್ಟೆ ರೈತರು
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ವೈರಸ್ ಸೋಂಕು ಹೆಚ್ಚಾಗುತ್ತಿರುವುದರಿಂದ ವಾರಗಳ ಕಾಲ ಲಾಕ್ಡೌನ್ ಘೋಷಣೆ ಮಾಡಲಾಗಿದ್ದು, ಅಗತ್ಯ ವಸ್ತುಗಳ ಮಾರಾಟಕ್ಕೆ ಬೆಳಿಗ್ಗೆ 5 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಅವಕಾಶ ಮಾಡಿಕೊಡಲಾಗಿದೆ.

ರಾಜಕೀಯ ನಾಯಕರೂ ಸೇರಿ ಲಾಕ್ಡೌನ್ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಿ: ಸರ್ಕಾರಕ್ಕೆ 'ಹೈ' ಸೂಚನೆ
ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೊರೋನಾ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡುವ ಸಾರ್ವಜನಿಕರು ಸೇರಿದಂತೆ ರಾಜಕಾರಣಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಿ ಎಂದು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಪರಿಹಾರವಲ್ಲ, ಲಾಕ್ ಡೌನ್ ವಿಸ್ತರಣೆ ಇಲ್ಲ: ಮುಖ್ಯಮಂತ್ರಿ
ಲಾಕ್ ಡೌನ್ ವಿಸ್ತರಣೆ ಬಗ್ಗೆ ಚರ್ಚೆ ಸಾಕು. ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಪರಿಹಾರವಲ್ಲ, ಬೇರೆ ಮಾರ್ಗಗಳ ಬಗ್ಗೆ ಆಲೋಚಿಸಿ ಎಂದು ನಗರದ ವಲಯ ಉಸ್ತುವಾರಿಗಳಿಗೆ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಸಲಹೆ ನೀಡಿದ್ದಾರೆ.

ಬೆಂಗಳೂರು ನಗರ ಈಗ ಭಾರತದ ನೂತನ ಕೊರೋನಾ ಹಾಟ್'ಸ್ಪಾಟ್: ಸಿಲಿಕಾನ್ ಸಿಟಿಯಲ್ಲಿ ಲಾಕ್ಡೌನ್ ವಿಸ್ತರಣೆಗೆ ಸಲಹೆ?
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಇದೀಗ ಭಾರತದ ನೂತನ ಕೊರೋನಾ ಹಾಟ್'ಸ್ಟಾಟ್ ನಗರವೆಂಬ ಕುಖ್ಯಾತಿಯನ್ನು ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಕೊರೋನಾ ವಿರುದ್ಧ ದಿಟ್ಟ ಹೋರಾಟ ಮಾಡಲು ನಗರದಲ್ಲಿ ಲಾಕ್ಡೌನ್ ಮುಂದುವರೆಸುವಂತೆ ಧ್ವನಿಗಳು ಹೆಚ್ಚಾಗಿವೆ.

ರಾಜ್ಯದಾದ್ಯಂತ ಮುಂಗಾರು ಮಳೆ ಚುರುಕು: ಬೆಂಗಳೂರು ನಗರದಲ್ಲಿ 5 ದಿನ ಮಳೆ ಸಾಧ್ಯತೆ
ಲಾಕ್'ಡೌನ್ ನಡುವಲ್ಲೇ ನಗರದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಜನರನ್ನು ಮನೆಗಳಿಂದ ಹೊರಬರಂತೆ ನೋಡಿಕೊಳ್ಳಲು ಹರಸಾಹಸ ಪಡುತ್ತಿರುವ ಪೊಲೀಸರಿಗೆ ವರವಾಗಿ ಪರಿಣಮಿಸಿದೆ.

ಸಿಂಗಾಪುರ್ ಗೆ ತೆರಳಲು 5 ವರ್ಷದ ಬಾಲಕನಿಗೆ ಅತಿ ಕಡಿಮೆ ಸಮಯದಲ್ಲಿ ಪಾಸ್ ಪೋರ್ಟ್ ನೀಡಿದ ಬೆಂಗಳೂರಿನ ಪಾಸ್ ಪೋರ್ಟ್ ಕಚೇರಿ
ವಂದೇ ಭಾರತ್ ಮಿಷನ್ ವಿಮಾನದಲ್ಲಿ ಚೆನ್ನೈ ಮೂಲಕ ಕುಟುಂಬವೊಂದು ಸಿಂಗಾಪುರಕ್ಕೆ ತೆರಳಬೇಕಿತ್ತು, ಹೀಗಾಗಿ ಅವರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ್ದರು, ಅಲ್ಲಿ ಹೋಗಿ ನೋಡಿದ ನಂತರವೇ ತಿಳಿದಿದ್ದು ತಮ್ಮ ಐದು ವರ್ಷ ಮಗನ ಪಾಸ್ ಪೋರ್ಟ್ ಅವಧಿ ಮುಗಿದಿರುವುದು ತಿಳಿದಿದೆ.

ಹೊರರಾಜ್ಯಗಳಿಂದ ರಾಜ್ಯಕ್ಕೆ ಎಷ್ಟು ಮಂದಿ ಹಿಂತಿರುಗಿದ್ದಾರೆ?: ಸರ್ಕಾರದ ಬಳಿಯೇ ಮಾಹಿತಿ ಇಲ್ಲ!
ಲಾಕ್'ಡೌನ್ ಸಡಿಲಗೊಂಡ ಬಳಿಕ ಸಾಕಷ್ಟು ವಲಸೆ ಕಾರ್ಮಿಕರು ಹಾಗೂ ಇತರೆ ಜನರು ಹೊರ ರಾಜ್ಯಗಳಿಂದ ರಾಜ್ಯಕ್ಕೆ ಹಿಂತಿರುಗಿದ್ದಾರೆಂದು ಹೇಳುತ್ತಿರುವ ಸರ್ಕಾರಕ್ಕೆ ಎಷ್ಟು ಮಂದಿ ಹಿಂತಿರುಗಿದ್ದಾರೆಂಬ ನಿರ್ದಿಷ್ಟ ಮಾಹಿತಿಯೇ ತಿಳಿದಿಲ್ಲ ಎಂಬುದು ಇದೀಗ ಬೆಳಕಿಗೆ ಬಂದಿದೆ.

ಕೊರೋನಾ ಲಾಕ್'ಡೌನ್: ಬೆಂಗಳೂರು ಸ್ತಬ್ಧ, ಜನರ ಚಟುವಟಿಕೆಗಳಿಲ್ಲದೆ ರಸ್ತೆಗಳು ಖಾಲಿ ಖಾಲಿ!
ಅಂಕೆಗೆ ಸಿಗದೆ ವ್ಯಾಪಕವಾಗಿ ಹಬ್ಬುತ್ತಿರುವ ಕೊರೋನಾ ಸೋಂಕು ಹತೋಟಿಗೆ ತರುವ ಸಲುವಾಗಿ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಘೋಷಿಸಲಾಗಿದ್ದ ಲಾಕ್'ಡೌನ್'ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬುಧವಾರ ನಗರದ ಬಹುತೇಕ ರಸ್ತೆಗಳು ಜನರ ಚಟುವಟಿಕೆಗಳಿಲ್ಲದೆ ಖಾಲಿಯಾಗಿರುವುದು ಕಂಡು ಬಂದಿತ್ತು.

ಲಾಕ್‌ಡೌನ್ ನಿಯಮ ಪಾಲಿಸಿ: ಸಿಎಂ ಯಡಿಯೂರಪ್ಪ, ಡಿಸಿಎಂ ಮತ್ತು ಸಚಿವರ ಮನವಿ
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳು ನಿನ್ನೆ ರಾತ್ರಿ 8 ಗಂಟೆಯಿಂದ ಮುಂದಿನ ಬುಧವಾರ ಬೆಳಗ್ಗೆ 5 ಗಂಟೆವರೆಗೆ ಸಂಪೂರ್ಣ ಲಾಕ್ ಡೌನ್ ಆಗಿರಲಿದೆ. ಅಗತ್ಯಸೇವೆಗಳು ಲಭ್ಯವಿರಲಿದ್ದು ನಾಗರಿಕರು ಆತಂಕಕ್ಕೆ ಒಳಗಾಗದೆ ನಿಯಮಗಳನ್ನು ಪಾಲಿಸಬೇಕು, ಮುನ್ನೆಚ್ಚರಿಕೆ ವಹಿಸಬೇಕು.

