loan

ಮಿತ್ರರಾಷ್ಟ್ರ ಪಾಕಿಸ್ತಾನಕ್ಕೆ ಸುಮಾರು 2.4 ಶತಕೋಟಿ ಡಾಲರ್ ಸಾಲ ನೀಡಿದ ಚೀನಾ!
ನಗದು ಕೊರತೆಯಿಂದ ಬಳಲುತ್ತಿರುವ ಮಿತ್ರ ರಾಷ್ಟ್ರ ಪಾಕಿಸ್ತಾನಕ್ಕೆ ನೆರವು ನೀಡುವ ನಿಟ್ಟಿನಲ್ಲಿ ಚೀನಾ ಸುಮಾರು 2.4 ಶತಕೋಟಿ ಡಾಲರ್ ಸಾಲವನ್ನು ನೀಡಿರುವುದಾಗಿ ಹಣಕಾಸು ಸಚಿವ ಇಶಾಕ್ ದಾರ್ ಗುರುವಾರ ಹೇಳಿದ್ದಾರೆ.

ಕರ್ನಾಟಕ ಬಜೆಟ್: ರಾಜ್ಯದಲ್ಲಿ 'ರೈತ ವಿರೋಧಿ' ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದು: ರೈತರಿಗೆ ಶೂನ್ಯ ಬಡ್ಡಿದರ ಸಾಲ 5 ಲಕ್ಷ ರೂ.ಗೆ ಏರಿಕೆ
2023-24 ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಿರುವ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ರೈತ ವಿರೋಧಿ ಎಂದು ಹೇಳಿದ್ದು, ರಾಜ್ಯದಲ್ಲಿ ಈ ಕಾಯ್ದೆಯನ್ನು ಹಿಂಪಡೆಯುವುದಾಗಿ ಬಜೆಟ್ ಭಾಷಣದಲ್ಲಿ ಘೋಷಿಸಿದ್ದಾರೆ.

2 ಲಕ್ಷ ರೂ. ಸಾಲ ತೀರಿಸದ ಪೋಷಕರು; ಅಪ್ರಾಪ್ತ ಬಾಲಕಿಯನ್ನು ಮದುವೆಯಾದ 40 ವರ್ಷದ ವ್ಯಕ್ತಿ
ಬಾಲಕಿಯ ತಾಯಿ 2 ಲಕ್ಷ ರೂಪಾಯಿ ಸಾಲವನ್ನು ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿ ಎರಡನೇ ಹೆಂಡತಿಯಾಗಿ ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದ 40 ವರ್ಷದ ವ್ಯಕ್ತಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಮುದ್ರಾ ಯೋಜನೆಯಡಿ ಶೇ 83ರಷ್ಟು 50 ಸಾವಿರ ರೂ. ಸಾಲ: ಆ ಮೊತ್ತದಿಂದ ಯಾವ ರೀತಿಯ ವ್ಯವಹಾರ ಮಾಡಬಹುದು: ಪಿ. ಚಿದಂಬರಂ
ಪ್ರಧಾನ ಮಂತ್ರಿ ಮುದ್ರಾ ಯೋಜನೆ ಎಂಟು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ, ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರು ಭಾನುವಾರ, ಈ ಯೋಜನೆಯಡಿ ನೀಡಲಾದ ಶೇ 83 ರಷ್ಟು ಸಾಲಗಳು 50,000 ರೂ.ಗಿಂತ ಕಡಿಮೆಯಿವೆ. ಇದು ಮೊತ್ತದ ಸಾಲದಿಂದ ಇಂದು ಯಾವ ರೀತಿಯ ವ್ಯವಹಾರವನ್ನು ಮಾಡಬಹುದು ಎಂದು ಪ್ರಶ್ನಿಸಿದ್ದಾರೆ.

ವಿಜಯ ಮಲ್ಯ ಬಳಿ ಸಾಲ ತೀರಿಸುವಷ್ಟು ಹಣವಿತ್ತು: 3ನೇ ಚಾರ್ಜ್‌ಶೀಟ್ ಸಲ್ಲಿಸಿದ ಸಿಬಿಐ
2015-16ರ ಅವಧಿಯಲ್ಲಿ ತಮ್ಮ ಕಿಂಗ್‌ಫಿಷರ್ ವಿಮಾನಯಾನ ಸಂಸ್ಥೆಯ ಸಾಲ ಮರುಪಾವತಿ ಮಾಡಲು ಸಾಕಾಗುವಷ್ಟು ಹಣ ವಿಜಯ್ ಮಲ್ಯ ಬಳಿ ಇತ್ತು ಎಂದು ಕೇಂದ್ರೀಯ ತನಿಖಾ ದಳ (ಸಿಬಿಐ) 3ನೇ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ.

ಸರ್ಕಾರವು 9,000 ರೈತರಿಗೆ ಒಂದು ದಿನದಲ್ಲಿ ಸಾಲ ನೀಡಲಿದೆ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿಯಲ್ಲಿ ಸರ್ಕಾರವು 9,000 ರೈತರಿಗೆ ಕೇವಲ ಒಂದು ದಿನದಲ್ಲಿ ಒಟ್ಟು 1,500 ಕೋಟಿ ರೂಪಾಯಿಗಳ ಸಾಲದ ಚೆಕ್‌ಗಳನ್ನು ನೀಡಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ನೇಕಾರರಿಗೆ 2 ಲಕ್ಷದವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ, ಸಹಾಯಧನ ಶೇ.50 ರಷ್ಟಕ್ಕೆ ಹೆಚ್ಚಳ: ಸಿಎಂ
ವಿದ್ಯುತ್ ಕೈಮಗ್ಗದಲ್ಲಿ ಕೆಲಸ ಮಾಡುತ್ತಿರುವ ನೇಕಾರರಿಗೆ ನೇಕಾರ ಸಮ್ಮಾನ ಯೋಜನೆ, 2 ಲಕ್ಷದವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ, 5 ಎಚ್ ಪಿ ವರೆಗೆ ಉಚಿತ ವಿದ್ಯುತ್ ನೀಡಲು ತೀರ್ಮಾನಿಸಲಾಗಿದೆ

ಗುತ್ತಿಗೆದಾರರ ಸಾಲ ತೀರಿಸಲು 600 ರೂ.ಕೋಟಿ ಸಾಲ ಕೋರಿ ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು(BBMP) ಗುತ್ತಿಗೆದಾರರಿಗೆ 2,500 ಕೋಟಿ ರೂಪಾಯಿ ನೀಡಲು ಬಾಕಿ ಉಳಿಸಿಕೊಂಡಿದ್ದು, ಕೆಲವು ಬಿಲ್‌ಗಳನ್ನು ಇತ್ಯರ್ಥಪಡಿಸಲು 600 ಕೋಟಿ ರೂಪಾಯಿ ಸಾಲ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದೆ. ಪಾಲಿಕೆಯು 2020 ರಿಂದ ಗುತ್ತಿಗೆದಾರರಿಗೆ ಯಾವುದೇ ಬಿಲ್‌ಗಳನ್ನು ತೆರವುಗೊಳಿಸಿಲ್ಲ ಎಂದು ಹೇಳಲಾಗಿದೆ.

40 ಲೋನ್ ಆ್ಯಪ್ ಗಳಲ್ಲಿ ಸಾಲ: ಮರುಪಾವತಿಸಲು ಆಗದೆ, ಕಿರುಕುಳ ಸಹಿಸಲು ಆಗದೆ ವ್ಯಕ್ತಿ ಆತ್ಮಹತ್ಯೆ
ಮೃತರನ್ನು ಸಹಕಾರಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ನಾಗದೇವನಹಳ್ಳಿ ನಿವಾಸಿ ನಂದಕುಮಾರ್ ಎಂದು ಗುರುತಿಸಲಾಗಿದೆ. ರಾಜ್ಯ ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ ಸಿರಿ ಗೌರಿ ತಿಳಿಸಿದ್ದಾರೆ

