lebanon

IN PICS | ಲೆಬನಾನ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ!

ಲೆಬನಾನ್ ಬಿಟ್ಟು ಹೊರಡಿ; ನೇತನ್ಯಾಹು ಎಚ್ಚರಿಕೆ: ಹೆಜ್ಬುಲ್ಲಾ ಗುರಿಯಾಗಿಸಿ ಇಸ್ರೇಲ್ ಭೀಕರ ವಾಯುದಾಳಿ, 500ಕ್ಕೂ ಮಂದಿ ಸಾವು!
ಆತಂಕದ ಸಂಗತಿ ಎಂದರೆ ಅಮೆರಿಕ, ಇರಾನ್ ನಂತಹ ದೇಶಗಳೂ ಈ ಯುದ್ಧಕ್ಕೆ ಧುಮುಕುವ ಭೀತಿ ಎದುರಾಗಿದೆ. ಮಧ್ಯಪ್ರಾಚ್ಯಕ್ಕೆ ಹೆಚ್ಚಿನ ಪಡೆಗಳನ್ನು ಕಳುಹಿಸುವುದಾಗಿ ಅಮೆರಿಕ ಈಗಾಗಲೇ ಘೋಷಿಸಿದೆ. ಈ ದಾಳಿಗಳು ನಮ್ಮನ್ನು ಯುದ್ಧಕ್ಕೆ ಎಳೆಯುವ ಸಂಚು ಎಂದು ಇರಾನ್ ಆರೋಪಿಸುತ್ತಿದೆ.

ಲೆಬನಾನ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ: 24 ಮಕ್ಕಳು ಸೇರಿ 356 ಮಂದಿ ಸಾವು
ಅಕ್ಟೋಬರ್‌ನಲ್ಲಿ ಸಂಘರ್ಷ ಪ್ರಾರಂಭವಾದಾಗಿನಿಂದ ಲೆಬನಾನ್ ಮೇಲೆ ನಡೆದ ಅತ್ಯಂತ ಮಾರಣಾಂತಿಕ ದಾಳಿ ಇದಾಗಿದ್ದು, ದಾಳಿಯಲ್ಲಿ 356 ಜನರು ಸಾವನ್ನಪ್ಪಿದ್ದಾರೆ ಮತ್ತು 1000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್ ದಾಳಿ; 12 ಮಂದಿ ಸಾವು, 59 ಜನರಿಗೆ ಗಾಯ
ಇಸ್ರೇಲಿ ಮಿಲಿಟರಿಯು ತಾನು ಈ "ಉದ್ದೇಶಿತ ದಾಳಿ" ನಡೆಸಿರುವುದಾಗಿ ಹೇಳಿದೆ. ಆದರೆ ಲೆಬನಾನಿನ ಆರೋಗ್ಯ ಸಚಿವಾಲಯವು ದಾಳಿಯಲ್ಲಿ 12 ಜನರು ಸಾವನ್ನಪ್ಪಿದ್ದಾರೆ ಮತ್ತು 59 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.

ಇಸ್ರೇಲ್ ವಿರುದ್ಧ ಕಠಿಣ ಪ್ರತೀಕಾರ ಶತಸಿದ್ಧ; ಸ್ಫೋಟಿಸಿದ್ದಕ್ಕೆ ಶಿಕ್ಷೆಯಾಗಲಿದೆ: ಹೆಜ್ಬುಲ್ಲಾ ಮುಖ್ಯಸ್ಥ
ಸ್ಫೋಟಗಳಿಗೆ "ಕಠಿಣ ಪ್ರತೀಕಾರ ಮತ್ತು ನ್ಯಾಯಯುತ ಶಿಕ್ಷೆ" ಎದುರಿಸಬೇಕಾಗುತ್ತದೆ ಎಂದು ನಸ್ರಲ್ಲಾಹ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

Lebanon Pager Attacks: ''ಮಧ್ಯಪ್ರಾಚ್ಯದಲ್ಲಿ ತೀವ್ರ ಸಂಘರ್ಷ ಅಪಾಯಕರ''- ವಿಶ್ವಸಂಸ್ಥೆ ತೀವ್ರ ಕಳವಳ
'ಹೆಜ್ಬೊಲ್ಲಾ ಗುರಿಯಾಗಿಸಿಕೊಂಡು ನಡೆದ ಪೇಜರ್ ಸ್ಫೋಟ ಲೆಬನಾನ್‌ನಲ್ಲಿ ನಾಟಕೀಯ ಸಂಘರ್ಷ ಉಲ್ಬಣಗೊಳ್ಳುವ ಗಂಭೀರ ಅಪಾಯವನ್ನು ಸೂಚಿಸುತ್ತವೆ ಮತ್ತು ಆ ಉಲ್ಬಣವನ್ನು ತಪ್ಪಿಸಲು ಎಲ್ಲವನ್ನೂ ಮಾಡಬೇಕು'...

ಪೇಜರ್ ದಾಳಿಯ ನಂತರ, ಲೆಬನಾನ್‌ನಲ್ಲಿ ವಾಕಿ-ಟಾಕಿಗಳು ಸ್ಫೋಟ

Lebanon: ಪೇಜರ್ ಬೆನ್ನಲ್ಲೇ ವಾಕಿಟಾಕಿ ಕೂಡ ಸ್ಫೋಟ; 32 ಸಾವು, 3250 ಮಂದಿಗೆ ಗಾಯ!
ಇರಾನ್ ಬೆಂಬಲಿತ ಹಿಜ್ಬುಲ್ಲಾ ಬಂಡುಕೋರರು ಬಳಸುತ್ತಿದ್ದ ವಾಕಿ-ಟಾಕಿಗಳು ಬುಧವಾರ ಅದರ ಭದ್ರಕೋಟೆ ಬೈರುತ್ ನಲ್ಲಿ ಸ್ಫೋಟಗೊಂಡವು. ಈ ಪ್ರಕರಣದಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿ ಮತ್ತು 450 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಲೆಬನಾನ್ ನಾದ್ಯಂತ ಪೇಜರ್ ಗಳು ಸ್ಫೋಟ: 20 ಮಂದಿ ಸಾವು, 450ಕ್ಕೂ ಹೆಚ್ಚು ಮಂದಿಗೆ ಗಾಯ
ಅಸೋಸಿಯೇಟೆಡ್ ಪ್ರೆಸ್ ಪತ್ರಕರ್ತರು ಬೈರುತ್‌ನಲ್ಲಿ ಮೂರು ಹಿಜ್ಬುಲ್ಲಾ ಸದಸ್ಯರು ಮತ್ತು ಹಿಂದಿನ ದಿನ ಪೇಜರ್‌ಗಳನ್ನು ಸ್ಫೋಟಿಸುವ ಮೂಲಕ ಕೊಲ್ಲಲ್ಪಟ್ಟ ಮಗುವಿನ ಅಂತ್ಯಕ್ರಿಯೆಯ ಸ್ಥಳದಲ್ಲಿ ಅನೇಕ ಸ್ಫೋಟಗಳನ್ನು ಪತ್ತೆಹಚ್ಚಿದ್ದಾರೆ.

