last rites

ಮಹಿಳೆ ಅಂತ್ಯ ಸಂಸ್ಕಾರ ವಿಚಾರದಲ್ಲಿ ಶಾಸಕ ಭರತ್ ಶೆಟ್ಟಿ ನಡವಳಿಕೆ ವಿರುದ್ಧ ಸಾರ್ವಜನಿಕರ ಆಕ್ರೋಶ
ನನ್ನ ಕ್ಷೇತ್ರದಲ್ಲಿ ಶವ ಸುಡಲು ಬಿಡುವುದಿಲ್ಲ ಎಂದು ಮಂಗಳೂರಿನ ಬಿಜೆಪಿ ಶಾಸಕ ಡಾ.ವೈ.ಭರತ್ ಶೆಟ್ಟಿ ಆವಾಜ್ ಹಾಕಿದ ಘಟನೆ ಸಂಬಂಧ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಒಡಿಸ್ಸಾ ಮೂಲದ ಮನೆ ಕೆಲಸದಾಕೆಯ ಅಂತ್ಯ ಸಂಸ್ಕಾರ ನೆರವೇರಿಸಿದ ಗೌತಮ್ ಗಂಭೀರ್
ಅನಾರೋಗ್ಯದಿಂದ ಸಾವನ್ನಪ್ಪಿದ ಮನೆಕೆಲಸದಾಕೆಯ ಅಂತ್ಯ ಸಂಸ್ಕಾರವನ್ನು ತಾವೇ ನಡೆಸಿದ ಕ್ರಿಕೆಟಿಗ ಮತ್ತು ರಾಜಕಾರಣಿ ಗೌತಮ್ ಗಂಭೀರ್ ಮಾನವೀಯತೆ ಮೆರೆದಿದ್ದಾರೆ.

ಅಯ್ಯೋ ದುರ್ವಿಧಿಯೇ! ಫೇಸ್ ಬುಕ್ ನಲ್ಲಿ ಮುದ್ದು ಮಗನ ಅಂತ್ಯ ಸಂಸ್ಕಾರ ನೋಡಿ ಕಣ್ಣೀರಿಟ್ಟ ದಂಪತಿ
ಕೊರೋನಾ ವೈರಸ್ ನಿರ್ಬಂಧಗಳಿಂದಾಗಿ ಕೇರಳದಲ್ಲಿ ನಡೆದ ಮಗನ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ದುಬೈನಲ್ಲಿದ್ದ ಭಾರತೀಯ ಕುಟುಂಬಕ್ಕೆ ಸಾಧ್ಯವಾಗದೇ, ಕೊನೆಗೆ ಫೇಸ್ ಬುಕ್ ಮೂಲಕ ಮೃತನ ಪೋಷಕರು ಅಂತಿಮ ಸಂಸ್ಕಾರ ವೀಕ್ಷಿಸಿದ ಮನಕಲಕುವ ಘಟನೆ ನಡೆದಿದೆ.

'ರಾಮ್ ನಾಮ್ ಸತ್ಯ ಹೈ' ಮಂತ್ರದೊಂದಿಗೆ ಹಿಂದೂ ವ್ಯಕ್ತಿಯ ಅಂತ್ಯಸಂಸ್ಕಾರ ನೆರವೇರಿಸಿದ ಮುಸ್ಲಿಂರು!
ಲಾಕ್ ಡೌನ್ ಕಾರಣ ಕುಟುಂಬಸ್ಥರು ಯಾರೂ ಬಾರದ ಹಿನ್ನೆಲೆಯಲ್ಲಿ 68 ವರ್ಷದ ಹಿಂದೂ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರವನ್ನು ನೆರೆಹೊರೆಯ ಮುಸ್ಲಿಂ ಸಮುದಾಯದವರು ನೆರವೇರಿಸಿರುವ ಘಟನೆ ಮುಂಬೈ ಹೊರವಲಯ ಬಾಂದ್ರಾದಲ್ಲಿ ನಡೆದಿದೆ.

ಉತ್ತರ ಪ್ರದೇಶ: ಮುಸ್ಲಿಂ ಸಹೋದರರಿಂದ ಹಿಂದೂ ಕೆಲಸಗಾರನ ಅಂತಿಮ ಸಂಸ್ಕಾರ!
ಉತ್ತರ ಪ್ರದೇಶದ ಬಾದಿ ಜಿಲ್ಲೆಯ ಹರಿರಾಮ್ ಹಳ್ಳಿಯಲ್ಲಿ ಮುಸ್ಲಿಂ ಕುಟುಂಬವೊಂದು ಹಿಂದೂ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರ ನಡೆಸಿರುವುದಲ್ಲದೇ, 13 ದಿನಗಳ ಶೋಕಾಚರಣೆ ಅವಧಿಯಲ್ಲಿ ಸನಾತನ ಧರ್ಮದ ಸಂಪ್ರದಾಯದಂತೆ ಧಾರ್ಮಿಕ ವಿಧಿ ವಿಧಾನ ನೆರೆವೇರಿಸಿದೆ.

ಮೊಸಳೆಗೆ ವ್ಯಕ್ತಿ ಬಲಿ: ಮೃತನ ಬಟ್ಟೆ-ಚಪ್ಪಲಿಗೆ ಅಂತ್ಯಕ್ರಿಯೆ ನಡೆಸಿದ ಕುಟುಂಬಸ್ಥರು!
ಕೃಷ್ಣಾ ನದಿ ದಡದಲ್ಲಿ ಮೊಸಳೆಗೆ ಬಲಿಯಾದ 75 ವರ್ಷದ ವ್ಯಕ್ತಿಯ ದೇಹ ಸಿಗದ ಕಾರಣ, ಮೃತ ವ್ಯಕ್ತಿಯ ಕುಟುಂಬಸ್ಥರು ಆತನ ಚಪ್ಪಲಿ ಮತ್ತು ಬಟ್ಟೆಗೆ ಅಂತ್ಯಕ್ರಿಯೆ ...

ಶ್ರೀಮಠದತ್ತ ಭಕ್ತ ಸಾಗರ; ಅಂತಿಮ ದರ್ಶನಕ್ಕೆ ಪ್ರಧಾನಿ ಮೋದಿ ಗೈರು
ನಿನ್ನೆ ಲಿಂಗೈಕ್ಯರಾದ ಶ್ರೀ ಶಿವಕುಮಾರ ಸ್ವಾಮಿಜಿಗಳ ಅಂತಿಮ ದರ್ಶನಕ್ಕಾಗಿ ತುಮಕೂರಿನ ಶ್ರೀಮಠದತ್ತ ಭಕ್ತ ಸಾಗರವೇ ಹರಿದು ಬರುತ್ತಿದ್ದು, ಅಂತಿಮ ದರ್ಶನಕ್ಕೆ ಭದ್ರತಾ ಕಾರಣಗಳಿಂದಾಗಿ ಪ್ರಧಾನಿ ಮೋದಿ ಗೈರಾಗಿದ್ದಾರೆ.

70ರ ದಶಕದಲ್ಲೇ ಗದ್ದುಗೆ ನಿರ್ಮಾಣಕ್ಕೆ ಜಾಗ ಸೂಚಿಸಿದ್ದ ಶ್ರೀಗಳು, ವಿಶೇಷತೆ ಏನು ಗೊತ್ತಾ?
ನಿನ್ನೆ ಲಿಂಗೈಕ್ಯರಾಗಿದ್ದ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಜಿಗಳು 70ರ ದಶಕದಲ್ಲೇ ತಮ್ಮ ಪವಿತ್ರ ಸಮಾಧಿಯ ಸ್ಥಳ ಮತ್ತು ರೂಪುರೇಷೆಗಳನ್ನು ನೀಡಿದ್ದರಂತೆ.

ಕ್ರಿಯಾ ಸಮಾಧಿ ಸ್ಥಳ ತಲುಪಿದ ಶ್ರೀಗಳ ಅಂತಿಮಯಾತ್ರೆ, ಸಕಲ ಸರ್ಕಾರಿ ಗೌರವ ಸಲ್ಲಿಕೆ
ನಿನ್ನೆ ಲಿಂಗೈಕ್ಯರಾದ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಯವರ ಅಂತ್ಯಕ್ರಿಯೆ ಇಂದು ನೆರವೇರಲಿದ್ದು, ಮಠದ ಆವರಣದಲ್ಲಿನ ಕ್ರಿಯಾ ಸಮಾಧಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.

