ಮೊಸಳೆಗೆ ವ್ಯಕ್ತಿ ಬಲಿ: ಮೃತನ ಬಟ್ಟೆ-ಚಪ್ಪಲಿಗೆ ಅಂತ್ಯಕ್ರಿಯೆ ನಡೆಸಿದ ಕುಟುಂಬಸ್ಥರು!
ಕೃಷ್ಣಾ ನದಿ ದಡದಲ್ಲಿ ಮೊಸಳೆಗೆ ಬಲಿಯಾದ 75 ವರ್ಷದ ವ್ಯಕ್ತಿಯ ದೇಹ ಸಿಗದ ಕಾರಣ, ಮೃತ ವ್ಯಕ್ತಿಯ ಕುಟುಂಬಸ್ಥರು ಆತನ ಚಪ್ಪಲಿ ಮತ್ತು ಬಟ್ಟೆಗೆ ಅಂತ್ಯಕ್ರಿಯೆ ...

Published On :
ಬಾಗಲಕೋಟೆ: ಕೃಷ್ಣಾ ನದಿ ದಡದಲ್ಲಿ ಮೊಸಳೆಗೆ ಬಲಿಯಾದ 75 ವರ್ಷದ ವ್ಯಕ್ತಿಯ ದೇಹ ಸಿಗದ ಕಾರಣ, ಮೃತ ವ್ಯಕ್ತಿಯ ಕುಟುಂಬಸ್ಥರು ಆತನ ಚಪ್ಪಲಿ ಮತ್ತು ಬಟ್ಟೆಗೆ ಅಂತ್ಯಕ್ರಿಯೆ ನಡೆಸಿದ್ದಾರೆ.
ನಯನೇಗಳಿ ಗ್ರಾಮದ ನಿವಾಸಿ, ಹನಮಪ್ಪ ಹಲ್ವಾರ್ ಜೂನ್ 6 ರಂದು ಬೆಳಗ್ಗೆ ಪೂಜೆ ಸಲ್ಲಿಸಲು ನದಿಗೆ ತೆರಳಿದ್ದರು, ವೇಳೆ ಮೊಸಳೆಯೊಂದು ಆತನನ್ನು ಹಿಡಿದು ನದಿಯೊಳಗೆ ಎಳೆದೊಯ್ದಿತ್ತು ಎಂದು ಮೂಲಗಳು ತಿಳಿಸಿವೆ.
ಘಟನೆ ನಡೆದು ಎರಡು ದಿನಗಳ ನಂತರ ಮೃತರ ಕುಟುಂಬಕ್ಕೆ ವಿಷಯ ತಿಳಿಯಿತು. ಹಲ್ವಾರ್ ಅವರ ಚಪ್ಪಲಿ ಮತ್ತು ಬಟ್ಟೆ ನದಿ ದಡದಲ್ಲಿರುವುದನ್ನು ಗ್ರಾಮಸ್ಥರು ನೋಡಿದ್ದರು, ನಂತರ ಈ ವಿಷಯವನ್ನು ಕುಟುಂಬಸ್ಥರಿಗೆ ತಿಳಿಸಿದರು. ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರು, ನಂತರ ಪೊಲೀಸರು ಕಾರ್ಯಾಚರಣೆ ಆರಂಭಿಸಿದರು.
ಪೊಲೀಸರ ಕಾರ್ಯಾಚರಣೆ ವೇಳೆ ಅಪರಿಚಿತ ವ್ಯಕ್ತಿಯ ಶವವೊಂದು ಸಿಕ್ಕಿತು. ಆದರೆ ಹಲ್ವಾರ್ ಶವ ಸಿಕ್ಕಿಲ್ಲ, ಮತ್ತೆ ಎರಡನೇ ದಿನವೂ ಶೋಧ ಕಾರ್ಯ ಮುಂದುವರೆಸಲಾಗಿತು, ಈ ವೇಳೆ ರಕ್ಷಣಾ ತಂಡಕ್ಕೆ ಹಲ್ವಾರ್ ಧರಿಸಿದ್ದ ಬಟ್ಟೆಯ ತುಂಡೊಂದು ಸಿಕ್ಕಿತು.
ಮತ್ತೆ ಕಾರ್ಯಾಚರಣೆ ಮುಂದುವರಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ ಹೀಗಾಗಿ ಕುಟುಂಬಸ್ಥರ ಅನುಮತಿ ಮೇರೆಗೆ ಶೋಧ ಕಾರ್ಯ ಸ್ಥಗಿತಗೊಳಿಸಲಾಯಿತು. ಹೀಗಾಗಿ ಶವ ಸಿಗದ ಕಾರಣ ಹಲ್ವಾರ್ ಅವರ ಬಟ್ಟೆ ಮತ್ತು ಚಪ್ಪಲಿಗೆ ಅಂತ್ಯಕ್ರಿಯೆ ನಡೆಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


