Lalit Modi

ನಾನಿನ್ನೂ IPL ಮುಖ್ಯಸ್ಥನಾಗಿದ್ರೆ ತಕ್ಷಣವೇ ಸಂಜೀವ್ ಗೋಯೆಂಕಾ ಬ್ಯಾನ್ ಮಾಡ್ತಿದ್ದೆ: ಲಲಿತ್ ಮೋದಿ
ನಾನು ಅಭಿಮಾನಿಗಳು ಮತ್ತು ಆಟಗಾರರಿಗಾಗಿ IP ಅನ್ನು ಮಾಡಿದ್ದೇನೆ. ಪ್ರತಿ ವರ್ಷವೂ ಇದು ಆಗಬಾರದು. ನಾನು ಇನ್ನೂ ಅಧ್ಯಕ್ಷ ಮತ್ತು ಕಮಿಷನರ್ ಆಗಿದ್ದರೆ, ತಕ್ಷಣದಿಂದಲೇ ತಂಡದ ಮಾಲೀಕತ್ವವನ್ನು ರದ್ದುಪಡಿಸುತ್ತಿದ್ದೆ ಎಂದು ಲಲಿತ್ ಮೋದಿ ಹೇಳಿದ್ದಾರೆ.

RCB, RR ಮಾರಾಟ: LSG ಮಾಲೀಕ ಸಂಜೀವ್ ಗೋಯೆಂಕಾರನ್ನು 'ವಿದೂಷಕ' ಎಂದು ಕರೆದ ಲಲಿತ್ ಮೋದಿ; ವಿವಾದ ಸೃಷ್ಟಿ
ಇದಕ್ಕೂ ಮೊದಲು, ಫ್ರಾಂಚೈಸಿಗಳ ದಾಖಲೆಯ ಮಾರಾಟಕ್ಕೆ ಗೋಯೆಂಕಾ ಪ್ರತಿಕ್ರಿಯಿಸಿ ಲೀಗ್ ಆಡಳಿತದ ಬಗ್ಗೆ ಮುಖ್ಯವಾಗಿ ಜಯ್ ಶಾ ಅವರ ಉಲ್ಲೇಖ ಮಾಡಿದ್ದರು.

ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಖರೀದಿ: ಕಾವ್ಯಾ ಮಾರನ್ ಒಡೆತನದ ಸನ್‌ರೈಸರ್ಸ್‌ಗೆ ಲಲಿತ್ ಮೋದಿ ಸಲಹೆ
ಯಾರ ಹೆಸರುಗಳನ್ನು ಉಲ್ಲೇಖಿಸದಿದ್ದರೂ, ಮೊತ್ತ, ಪಾಕಿಸ್ತಾನಿ ಆಟಗಾರನ ಉಲ್ಲೇಖ ಮತ್ತು ಪೋಸ್ಟ್‌ನ ಸಮಯವು ಲಲಿತ್ ಮೋದಿ ಏನನ್ನು ಸೂಚಿಸುತ್ತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ.

ಭಾರತ ಸರ್ಕಾರಕ್ಕೆ 'ಕ್ಷಮೆ'ಯಾಚಿಸಿದ ದೇಶಭ್ರಷ್ಟ ಲಲಿತ್ ಮೋದಿ! ಕಾರಣವೇನು ಗೊತ್ತಾ?
ಇತ್ತೀಚಿಗೆ ಲಂಡನ್‌ನಲ್ಲಿ ವಿಜಯ್ ಮಲ್ಯ ಅವರ ಅದ್ದೂರಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದ ಲಲಿತ್ ಮೋದಿ, ನಾವಿಬ್ಬರೂ ಅತಿದೊಡ್ಡ ದೇಶಭ್ರಷ್ಟ ಎಂದು ವ್ಯಂಗ್ಯ ಮಾಡಿದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣ ಇನ್ಸಾಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು.

Watch | ಮಲ್ಯ ಜೊತೆ ಸೇರಿ ಲಲಿತ್ ಮೋದಿ ತಮಾಷೆ! ಕೇಂದ್ರ ಸರ್ಕಾರಕ್ಕೆ ಇರುಸುಮುರುಸು!

IPL ಮೊದಲ ಆವೃತ್ತಿಯಲ್ಲಿ ಎಲ್ಲ ನಿಯಮಗಳನ್ನು ಮುರಿದಿದ್ದೇನೆ, ಏಕೆಂದರೆ..: ಲಲಿತ್ ಮೋದಿ ಸ್ಫೋಟಕ ಹೇಳಿಕೆ
2008ರ ಐಪಿಎಲ್ ಸಮಯದಲ್ಲಿ ಹರ್ಭಜನ್ ಸಿಂಗ್ ಶ್ರೀಶಾಂತ್ ಅವರಿಗೆ ಕಪಾಳಮೋಕ್ಷ ಮಾಡಿದ್ದ ವಿಡಿಯೋವನ್ನು ಲಲಿತ್ ಮೋದಿ ಬಹಿರಂಗಪಡಿಸಿದ ನಂತರ ದೊಡ್ಡ ವಿವಾದಕ್ಕೆ ಸಿಲುಕಿದರು.

'ಸತ್ಯ ಹಂಚಿಕೊಂಡೆ': ವಿಡಿಯೋ ರಿಲೀಸ್ ಮಾಡಿದ್ದನ್ನು ಸಮರ್ಥಿಸಿಕೊಂಡ ಲಲಿತ್ ಮೋದಿ
ಮೊಹಾಲಿಯಲ್ಲಿ ನಡೆದ 2008ನೇ ಆವೃತ್ತಿಯಲ್ಲಿ ಆಗ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದ ಹರ್ಭಜನ್ ಸಿಂಗ್, ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದ ನಂತರ ಶ್ರೀಶಾಂತ್‌ಗೆ ಕಪಾಳಮೋಕ್ಷ ಮಾಡಿದ್ದರು.

18 ವರ್ಷಗಳ ಹಳೆಯ ವಿಡಿಯೋ ರಿಲೀಸ್ ಮಾಡಿದ ಲಲಿತ್ ಮೋದಿ; ಅಮಾನವೀಯ ನಡೆ ಎಂದ ಶ್ರೀಶಾಂತ್ ಪತ್ನಿ
ಪಂದ್ಯದ ನಂತರದ ಹ್ಯಾಂಡ್‌ಶೇಕ್ ಸಮಯದಲ್ಲಿ ಹರ್ಭಜನ್ ಸಿಂಗ್ ವೇಗಿಗೆ ಕಪಾಳಮೋಕ್ಷ ಮಾಡಿದ್ದರು. ಆಗ ಹರ್ಭಜನ್ ಮುಂಬೈ ತಂಡದ ನಾಯಕರಾಗಿದ್ದರು ಮತ್ತು ಅವರ ತಂಡವು ಪಂಜಾಬ್ ವಿರುದ್ಧ 66 ರನ್‌ಗಳ ಸೋಲನ್ನು ಎದುರಿಸಿತ್ತು.

RCB ಮಾರಾಟದ ವದಂತಿ: 'ಅವರು ಮೂರ್ಖರಾಗುತ್ತಿದ್ದರು...'; ಕಾಲ್ತುಳಿತ ಸಂಭವಿಸಿದ್ದು ದುರದೃಷ್ಟಕರ- ಲಲಿತ್ ಮೋದಿ
18 ವರ್ಷಗಳ ಭಳಿಕ ಐಪಿಎಲ್ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವವನ್ನು ವೀಕ್ಷಿಸಲು ಸುಮಾರು 3 ಲಕ್ಷ ಜನರು ಸೇರಿದ್ದರು. ಈ ವೇಳೆ ಉಂಟಾದ ನೂಕುನುಗ್ಗಲಿನಿಂದ ಕಾಲ್ತುಳಿತ ಸಂಭವಿಸಿತ್ತು.

