Ladakh

ಗಡಿ ಸಂಘರ್ಷ: ಲಡಾಕ್ ನಲ್ಲಿ ಇಂದು ಭಾರತ-ಚೀನಾ ಸೇನೆಯ ಉನ್ನತ ಹೈಕಮಾಂಡರ್ ಮಟ್ಟದ ಮಾತುಕತೆ
ಲಡಾಕ್ ಗಡಿ ಭಾಗದಲ್ಲಿ ನಿರ್ಮಾಣಗೊಂಡಿರುವ ಉದ್ವಿಗ್ನ ಸ್ಥಿತಿಯನ್ನು ಶಮನಗೊಳಿಸುವ ಕ್ರಮವಾಗಿ ಮಂಗಳವಾರ ಭಾರತ ಮತ್ತು ಚೀನಾ ಸೈನ ಉನ್ನತ ಮಟ್ಟದ ಮಾತುಕತೆ ನಡೆಸಲಿದೆ ಎಂದು ತಿಳಿದುಬಂದಿದೆ.

ಚೀನಾ ಗಡಿಯಲ್ಲಿ ಸೇನೆ ಮೇಲಿನ ಹಿಂಸಾಚಾರದ ವಿಡಿಯೋ ಸತ್ಯಕ್ಕೆ ದೂರವಾದುದ್ದು: ಭಾರತೀಯ ಸೇನೆ
ಭಾರತ-ಚೀನಾ ಗಡಿಯಲ್ಲಿ ಯಾವುದೇ ಹಿಂಸಾಚಾರದ ಘಟನೆಗಳು ನಡೆದಿಲ್ಲ. ಈ ಸಂಬಂಧ ಹೊರಬಿದ್ದಿರುವ ವಿಡಿಯೋಗಳು 'ದುರುದ್ದೇಶ'ದಿಂದ ಕೂಡಿವೆ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.

ಲಡಾಕ್ ವಿವಾದ ಕುರಿತು ಚೀನಾ ಜೊತೆ ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದ ಮಾತುಕತೆ ನಡೆಸುತ್ತೇವೆ:ರಾಜನಾಥ್ ಸಿಂಗ್
ಲಡಾಕ್ ಗಡಿಭಾಗದಲ್ಲಿ ಭಾರತ ಮತ್ತು ಚೀನಾ ಸೈನಿಕರ ನಿಯೋಜನೆಯಿಂದ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು ಈ ಕುರಿತಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.

ಮೋದಿ ನಾಯಕತ್ವದ ಭಾರತವನ್ನು ದಿಟ್ಟಿಸಿ ನೋಡುವ ಧೈರ್ಯ ಯಾರಿಗೂ ಇಲ್ಲ: ರವಿಶಂಕರ್ ಪ್ರಸಾದ್
ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಭಾರತವನ್ನು ದಿಟ್ಟಿಸಿ ನೋಡುವ ಧೈರ್ಯವನ್ನು ಯಾರೂ ಮಾಡಲಾರರು ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಬುಧವಾರ ಮಹತ್ವದ ಹೇಳಿಕೆ ನೀಡಿದ್ದಾರೆ.

ಭಾರತ-ಚೀನಾ ಗಡಿಯಲ್ಲಿ ಸದ್ಯ ಏನು ನಡೆಯುತ್ತಿದೆ, ಅಲ್ಲಿ ಪರಿಸ್ಥಿತಿ ಈಗ ಹೇಗಿದೆ?: ಅಧಿಕಾರಿಗಳು ಏನನ್ನುತ್ತಾರೆ?
ಲಡಾಕ್ ನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ(ಎಲ್ಎಸಿ) ಕಳೆದ ಕೆಲ ದಿನಗಳಿಂದ ಭಾರತ ಮತ್ತು ಚೀನಾ ಸೇನಾಪಡೆಗಳಿಂದ ಹೆಚ್ಚುವರಿ ಸೇನೆಯ ಚಲನವಲನ ಅಥವಾ ಹೊಸ ಚಟುವಟಿಕೆಗಳು ನಡೆದಿಲ್ಲ. ಎರಡೂ ದೇಶಗಳ ಸೇನೆಗಳು ಇಲ್ಲಿಂದ ಭಾರೀ ವಾಹನಗಳನ್ನು ಹಿಂತೆಗೆದುಕೊಂಡಿವೆ. ಸದ್ಯ ಸೇನೆ ಯಥಾಸ್ಥಿತಿ ನಿಲುಗಡೆಯಲ್ಲಿದೆ. ಇದು ಲಡಾಕ್ ನ ಭಾರತ-ಚೀನಾ ಗಡಿಯಲ್ಲಿನ ಸದ್ಯದ ಪರಿಸ್ಥಿತಿ.

ಲಡಾಖ್ ನಲ್ಲಿ ಭಾರತೀಯ ಯೋಧರ ಬಂಧಿಸಿದ ಚೀನಾ: ವರದಿ ತಿರಸ್ಕರಿಸಿದ ಭಾರತೀಯ ಸೇನೆ
ಲಡಾಖ್ ನಲ್ಲಿ ಭಾರತ ಹಾಗೂ ಚೀನಾ ನಡುವೆ ಸಂಘರ್ಷ ತಾರಕಕ್ಕೇರಿರುವ ನಡುವಲ್ಲೇ ಭಾರತೀಯ ಯೋಧರನ್ನು ಚೀನಾ ಪಡೆಗಳು ಕಳೆದ ವಾರ ಬಂಧನಕ್ಕೊಳಪಡಿಸಿತ್ತು ಎಂಬ ವರದಿಯನ್ನು ಭಾರತೀಯ ಸೇನಾಪಡೆ ತಿರಸ್ಕರಿಸಿದೆ.

ಲಡಾಕ್ ಗಡಿಯಲ್ಲಿ ಭಾರತ, ಚೀನಾ ದೇಶಗಳಿಂದ ಸೇನೆ ನಿಯೋಜನೆ, ಉದ್ವಿಗ್ನ ವಾತಾವರಣ ನಿರ್ಮಾಣ
ಹೊಸ ಕೇಂದ್ರಾಡಳಿತ ಪ್ರದೇಶ ಲಡಾಕ್ ನ ಪ್ಯಾಂಗೊಂಗ್ ತ್ಸೋ ಸರೋವರ ಮತ್ತು ಗಾಲ್ವಾನ್ ಕಣಿವೆ ಪ್ರದೇಶಗಳಲ್ಲಿ ಭಾರತ ಮತ್ತು ಚೀನಾ ದೇಶಗಳು ಹೆಚ್ಚುವರಿ ಸೇನಾಪಡೆಗಳನ್ನು ನಿಯೋಜಿಸಿದ್ದು ಗಡಿ ಭಾಗದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಸವಾಲಿಗೆ ತಕ್ಕ ಪ್ರತ್ಯುತ್ತರ: ಗಡಿಯಲ್ಲಿ ಹಾರಾಡಿದ ಚೀನಾ ಹೆಲಿಕಾಪ್ಟರ್‌ಗಳು, ರಂಗಕ್ಕಿಳಿದ ಭಾರತದ ಯುದ್ಧ ವಿಮಾನಗಳು!
ಕೊರೋನಾ ಮಹಾಮಾರಿಯನ್ನು ಬಿಟ್ಟಿದ್ದಲ್ಲದೆ ಚೀನಾ ಮತ್ತೊಮ್ಮೆ ಅಕ್ರಮಣಕಾರಿ ಕೃತ್ಯದಲ್ಲಿ ಭಾಗಿಯಾಗಿದೆ. ಇತ್ತೀಚಿಗೆ ಸಿಕ್ಕಿಂನ ನಾಕು ಲಾ ಪಾಸ್ ವಲಯದಲ್ಲಿ ಭಾರತೀಯ ಸೇನೆಯೊಂದಿಗೆ ಘರ್ಷಣೆಗೆ ಇಳಿದಿದ್ದ ಚೀನಾ ಪಡೆಗಳು, ಮತ್ತೊಮ್ಮೆ ಪ್ರಚೋದಾನಾತ್ಮಕ ಕೃತ್ಯ ನಡೆಸಿವೆ.

ಕೊರೋನಾ ವೈರಸ್: 15 ದಿನದಲ್ಲಿ ಒಂದೇ ಒಂದು ಪಾಸಿಟಿವ್ ಪ್ರಕರಣ, 14 ರೋಗಿಗಳ ಪೈಕಿ 9 ಮಂದಿ ಗುಣಮುಖ; ಲಡಾಖ್ ಕ್ರಮಕ್ಕೆ ನ್ಯಾಯಾಲಯ ಶ್ಲಾಘನೆ
ಭಾರತದಲ್ಲಿ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ದೇಶದಲ್ಲಿ ವೈರಸ್ ನಿಂದಾಗಿ 80 ಮಂದಿ ಸಾವನ್ನಪ್ಪಿದ್ದು, 3374 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಆದರೆ ಇದೇ ನಮ್ಮ ಭಾರತದ ಕೇಂದ್ರಾಡಳಿತ ಪ್ರದೇಶ ಲಡಾಕ್ ನಲ್ಲಿ ಮಾತ್ರ ಕಳೆದ 15 ದಿನಗಳಿಂದ ಕೇವಲ ಒಂದೇ ಒಂದು ಕೊರೋನಾ ಪಾಸಿಟಿವ್ ಕೇಸ್ ದಾಖಲಾಗಿದೆ.

