ದೇಶ

ಲಡಾಕ್ ಗಡಿಯಲ್ಲಿ ಭಾರತ, ಚೀನಾ ದೇಶಗಳಿಂದ ಸೇನೆ ನಿಯೋಜನೆ, ಉದ್ವಿಗ್ನ ವಾತಾವರಣ ನಿರ್ಮಾಣ

ಹೊಸ ಕೇಂದ್ರಾಡಳಿತ ಪ್ರದೇಶ ಲಡಾಕ್ ನ ಪ್ಯಾಂಗೊಂಗ್ ತ್ಸೋ ಸರೋವರ ಮತ್ತು ಗಾಲ್ವಾನ್ ಕಣಿವೆ ಪ್ರದೇಶಗಳಲ್ಲಿ ಭಾರತ ಮತ್ತು ಚೀನಾ ದೇಶಗಳು ಹೆಚ್ಚುವರಿ ಸೇನಾಪಡೆಗಳನ್ನು ನಿಯೋಜಿಸಿದ್ದು ಗಡಿ ಭಾಗದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಲಡಾಕ್ ಗಡಿಯಲ್ಲಿ ಭಾರತ, ಚೀನಾ ದೇಶಗಳಿಂದ ಸೇನೆ ನಿಯೋಜನೆ, ಉದ್ವಿಗ್ನ ವಾತಾವರಣ ನಿರ್ಮಾಣ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಹೊಸ ಕೇಂದ್ರಾಡಳಿತ ಪ್ರದೇಶ ಲಡಾಕ್ ನ ಪ್ಯಾಂಗೊಂಗ್ ತ್ಸೋ ಸರೋವರ ಮತ್ತು ಗಾಲ್ವಾನ್ ಕಣಿವೆ ಪ್ರದೇಶಗಳಲ್ಲಿ ಭಾರತ ಮತ್ತು ಚೀನಾ ದೇಶಗಳು ಹೆಚ್ಚುವರಿ ಸೇನಾಪಡೆಗಳನ್ನು ನಿಯೋಜಿಸಿದ್ದು ಗಡಿ ಭಾಗದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಚೀನಾ ಸೈನ್ಯದ ಆಕ್ರಮಣಕಾರಿ ನಡವಳಿಕೆಯು ಚೀನಾ ಒಡ್ಡಿದ ಬೆದರಿಕೆ ನೆನಪನ್ನು ಮರುಕಳಿಸುತ್ತದೆ ಎಂದು ಅಮೆರಿಕಾ ಹೇಳಿದ್ದು ಈ ಸಂದರ್ಭದಲ್ಲಿ ಭಾರತದ ಉನ್ನತ ಮಿಲಿಟರಿ ಸೇನೆ ಅಲ್ಲಿನ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿದೆ.

ಗಡಿಯಲ್ಲಿನ ಭುಗಿಲೆದ್ದಿರುವಿಕೆಗಳು, ಚೀನಾದ ಆಕ್ರಮಣವು ಯಾವಾಗಲೂ ಕೇವಲ ವಾಕ್ಚಾತುರ್ಯವಲ್ಲ ಎಂಬುದನ್ನು ನೆನಪಿಸುತ್ತದೆ ಎಂದು ನಾನು ಭಾವಿಸುತ್ತೇನೆ, ಅದು ದಕ್ಷಿಣ ಚೀನಾ ಸಮುದ್ರದಲ್ಲಿರಲಿ ಅಥವಾ ಅದು ಭಾರತದ ಗಡಿಯಲ್ಲಿದ್ದರೂ, ನಾವು ಚೀನಾ ದೇಶದ ಪ್ರಚೋದನೆ ಮತ್ತು ಗೊಂದಲದ ನಡವಳಿಕೆಯನ್ನು ಗಮನಿಸುತ್ತಲೇ ಇದ್ದೇವೆ ಎಂದು ಅಮೆರಿಕಾದ ದಕ್ಷಿಣ ಮತ್ತು ಕೇಂದ್ರ ಏಷ್ಯಾ ವಲಯ ಮುಖ್ಯಸ್ಥ ಆಲಿಸ್ ವೆಲ್ಸ್ ಹೇಳಿದ್ದಾರೆ.

ಪ್ಯಾಂಗೊಂಗ್ ತ್ಸೋ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಹೆಚ್ಚುವರಿ ದೋಣಿಗಳನ್ನು ಚೀನಾ ನಿಯೋಜಿಸಿದೆ ಎಂದು ಹೇಳಲಾಗುತ್ತಿದ್ದು , ಭಾರತ ಮತ್ತು ಚೀನಾ ಮಧ್ಯೆ ಕಳೆದ 6 ದಶಕಗಳಿಂದ ಗಲ್ವಾನ್ ಪಾಯಿಂಟ್ ನಲ್ಲಿ ಕಿತ್ತಾಟ ನಡೆಯುತ್ತಲೇ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.