Kulbhushan Jadhav

ಕುಲಭೂಷಣ್ ಜಾಧವ್ ಬಿಡುಗಡೆಗೆ ಪಾಕಿಸ್ತಾನ ಮನವೊಲಿಸಲು ಭಾರತ ಹಿಂಬಾಗಿಲ ಪ್ರಯತ್ನ ನಡೆಸಿತ್ತು: ಹರೀಶ್ ಸಾಳ್ವೆ
ಬೇಹುಗಾರಿಕೆ ಮತ್ತು ಭಯೋತ್ಪಾದನೆ ಆರೋಪದ ಮೇಲೆ 2017ರಲ್ಲಿ ಪಾಕಿಸ್ತಾನ ಮಿಲಿಟರಿ ಕೋರ್ಟ್ ನಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಬಿಡುಗಡೆಗೆ ಪಾಕಿಸ್ತಾನವನ್ನು ಹಿಂದಿನ ಬಾಗಿಲಿನಿಂದ ರಹಸ್ಯವಾಗಿ ಮನವೊಲಿಸಲು ಭಾರತ ಪ್ರಯತ್ನಿಸಿತ್ತು ಎಂದು ಹಿರಿಯ ವಕೀಲ ಹರೀಶ್ ಸಾಳ್ವೆ ಹೇಳಿದ್ದಾರೆ.

ಜಾಧವ್ ಪ್ರಕರಣ: ಭಾರತದೊಂದಿಗೆ ಯಾವುದೇ ಒಪ್ಪಂದವಿಲ್ಲ ಎಂದ ಪಾಕಿಸ್ತಾನ!
ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆ ಎದುರಿಸುತ್ತಿರುವ ಕುಲಭೂಷನ್ ಜಾಧವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದೊಂದಿಗೆ ಯಾವುದೇ ರೀತಿ ಒಪ್ಪಂದವಿಲ್ಲ ಎಂದು ಅಲ್ಲಿನ ಸರ್ಕಾರ ಹೇಳಿದೆ.

ಮೋದಿ ಮುಖಭಂಗಕ್ಕೆ ಕುತಂತ್ರ: ಜಾಧವ್ ಬಳಿಕ ಮತ್ತೊಬ್ಬ ಅಮಾಯಕನಿಗೆ ಉಗ್ರ ಪಟ್ಟಕ್ಕೆ ಪಾಕ್ ಯತ್ನ
ವಿಶ್ವಸಂಸ್ಥೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮುಖಭಂಗವಾಗುವಂತೆ ಮಾಡಲು ಪಾಕಿಸ್ತಾನ ಕುತಂತ್ರ ನಡೆಸುತ್ತಿದ್ದು, ಕುಲಭೂಷಣ್ ಜಾಧವ್ ಪ್ರಕರಣದ ಬಳಿಕ ಅಂತಹುದ್ದೇ ಮತ್ತೊಂದು ಪ್ರಯತ್ನ ನಡೆಸಲು ಹೋಗಿ ವಿಫಲವಾಗಿದೆ.

ಅಮ್ಮನ ಅಂತಿಮ ಆಶಯವನ್ನು ಈಡೇರಿಸಿದ ಸುಷ್ಮಾ ಸ್ವರಾಜ್ ಪುತ್ರಿ
ಹಿರಿಯ ಬಿಜೆಪಿ ನಾಯಕಿ, ದಿವಂಗತ ಸುಷ್ಮಾ ಸ್ವರಾಜ್ ಅವರ ಕೊನೆಯ ಆಶಯವನ್ನು ಅವರ ಮಗಳು ಶುಕ್ರವಾರ ನೆರವೇರಿಸಿದ್ದಾರೆ ಎಂದು ಸುಷ್ಮಾ ಸ್ವರಾಜ್ ಅವರ ಪತಿ ಸ್ವರಾಜ್ ಕೌಶಲ್ ಹೇಳಿದ್ದಾರೆ.

ಕುಲಭೂಷಣ್ ಜಾಧವ್ ಗೆ ಮತ್ತೊಮ್ಮೆ ದೂತಾವಾಸ ಸಂಪರ್ಕ ಕಲ್ಪಿಸಲು ಯತ್ನ: ವಿದೇಶಾಂಗ ಸಚಿವಾಲಯ
ಗೂಡಾಚಾರಿಕೆ ಮತ್ತು ಭಯೋತ್ಪಾದನೆ ಆರೋಪದ ಮೇಲೆ ಪಾಕಿಸ್ತಾನ ಸೇನೆಯ ವಶದಲ್ಲಿರುವ ಭಾರತೀಯ ನೌಕಾ ಪಡೆಯ ನಿವೃತ್ ಅಧಿಕಾರಿ ಮತ್ತು ಉದ್ಯಮಿ ಕುಲಭೂಷನ್ ಜಾಧವ್ ಅವರಿಗೆ ಎರಡನೇ ಬಾರಿಗೆ ದೂತಾವಾಸದ ಸಂಪರ್ಕ ಕಲ್ಪಿಸಲು ಪಾಕ್ ನಿರಾಕರಿಸಿದ ಬೆನ್ನಲ್ಲೇ, ತಾವು ಮರು ಪ್ರಯತ್ನ ನಡೆಸುವುದಾಗಿ ಭಾರತ ಹೇಳಿದೆ.

ಕುಲಭೂಷಣ್ ಜಾಧವ್'ಗೆ 2ನೇ ಬಾರಿ ರಾಜತಾಂತ್ರಿಕ ನೆರವು ನೀಡಲು ಸಾಧ್ಯವಿಲ್ಲ: ಪಾಕಿಸ್ತಾನ
ಪಾಕಿಸ್ತಾನದಲ್ಲಿ ಬೇಹುಗಾರಿಕೆ ಆರೋಪದಡಿ ಬಂಧನವಾಗಿರುವ ಕುಲಭೂಷಣ್ ಜಾಧವ್ ಗೆ 2ನೇ ಬಾರಿ ರಾಜತಾಂತ್ರಿಕ ನೆರವು ನೀಡಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಗುರುವಾರ ಹೇಳಿದೆ.

ಆರೋಪ ಒಪ್ಪಿಕೊಳ್ಳುವಂತೆ ಕುಲಭೂಷಣ್ ಜಾಧವ್‌ಗೆ ಪಾಕ್‌ನಿಂದ ಒತ್ತಡ: ಭೇಟಿ ಬಳಿಕ ಭಾರತ ಆಕ್ರೋಶ
ಮಾಡದ ತಪ್ಪನ್ನು ಒಪ್ಪಿಕೊಳ್ಳುವಂತೆ ಪಾಕಿಸ್ತಾನ ಕುಲಭೂಷಣ್ ಜಾದವ್ ಮೇಲೆ ತೀವ್ರ ಒತ್ತಡ ಹೇರುತ್ತಿದೆ ಎಂದು ಭಾರತ ಆಕ್ರೋಶ ವ್ಯಕ್ತಪಡಿಸಿದೆ.

ಜಾಧವ್ ಗೆ ರಾಜತಾಂತ್ರಿಕ ನೆರವು, ಪಾಕ್ ಪ್ರಸ್ತಾಪಕ್ಕೆ ಭಾರತದ ಒಪ್ಪಿಗೆ
ಬೇಹುಗಾರಿಕೆ ಆರೋಪದ ಹಿನ್ನೆಲೆ ಪಾಕಿಸ್ತಾನದ ಜೈಲಿನಲ್ಲಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಗೆ ರಾಜತಾಂತ್ರಿಕ ನೆರವು ನೀಡುವ ಪಾಕಿಸ್ತಾನದ ಪ್ರಸ್ತಾಪಕ್ಕೆ ಭಾರತ ಒಪ್ಪಿಗೆ ಸೂಚಿಸಿದೆ.

ಕುಲಭೂಷಣ್ ಜಾಧವ್ ಗೆ ಅಡೆತಡೆಯಿಲ್ಲದ ರಾಯಬಾರ ಪ್ರವೇಶಕ್ಕೆ ಭಾರತದ ಕೋರಿಕೆ
ಪಾಕಿಸ್ತಾನದಲ್ಲಿರುವ ಭಾರತದ ನೌಕಪಡೆ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಅಡೆತಡೆಯಿಲ್ಲದ ರಾಯಬಾರ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕೆಂದು ಭಾರತ ಪಾಕಿಸ್ತಾನವನ್ನು ಕೋರಿದೆ.

