KPCC

ಕೆಪಿಸಿಸಿ ಅಧ್ಯಕ್ಷಗಿರಿಗೆ ಎಂ.ಬಿ ಪಾಟೀಲ್ ಪರ ಸಿದ್ದರಾಮಯ್ಯ ಬ್ಯಾಟಿಂಗ್: ಹಿರಿಯ ನಾಯಕರ ವಿರೋಧ
ರಾಜ್ಯ ಕಾಂಗ್ರೆಸ್ ನಾಯಕತ್ವದ ಗೊಂದಲ ಅಂತಿಮ ಹಂತಕ್ಕೆ ತಲುಪಿದ್ದು, ಹೈಕಮಾಂಡ್ ಸಾಮಾಜಿಕ ನ್ಯಾಯದ ಲೆಕ್ಕಾಚಾರದಲ್ಲಿ, ಜಾತಿ ಮತ್ತು ಪ್ರಾದೇಶಿಕತೆ ಆಧಾರದಲ್ಲಿ ಕೆಪಿಸಿಸಿ ಅಧ್ಯಕ್ಷ, ಶಾಸಕಾಂಗ ಪಕ್ಷದ ನಾಯಕ ಹಾಗೂ ಪ್ರತಿಪಕ್ಷದ ನಾಯಕನ ಹುದ್ದೆಗಳಿಗೆ ವಾರಾಂತ್ಯದೊಳಗೆ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ.

ಕೆಪಿಸಿಸಿ ಅಧ್ಯಕ್ಷ, ಸಿಎಲ್'ಪಿ ನಾಯಕರ ನೇಮಕ ಕುರಿತು ಹೈಕಮಾಂಡ್ ಬಳಿ ಶೀಘ್ರದಲ್ಲೇ ಮನವಿ: ಪರಮೇಶ್ವರ್
ಕೆಪಿಸಿಸಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರನ್ನು ಶೀಘ್ರಗತಿಯಲ್ಲಿ ನೇಮಕ ಮಾಡುವಂತೆ ಶೀಘ್ರದಲ್ಲೇ ಹೈಕಮಾಂಡ್ ಬಳಿ ಮನವಿ ಮಾಡಿಕೊಳ್ಳಲಾಗುತ್ತದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಹೇಳಿದ್ದಾರೆ.

ಕೆಪಿಸಿಸಿ ಸಾರಥ್ಯಕ್ಕೆ ಶಿವಕುಮಾರ್, ಹರಿಪ್ರಸಾದ್, ಕೆ.ಎಚ್. ಮುನಿಯಪ್ಪ ಹೆಸರು ಶಿಫಾರಸ್ಸು
ಎಐಸಿಸಿ ವರಿಷ್ಠ ಮಧುಸೂಧನ್ ಮಿಸ್ತ್ರಿ ನೇತೃತ್ವದ ವೀಕ್ಷಕರ ತಂಡ ಕೆಪಿಸಿಸಿ ಸಾರಥ್ಯ ವಹಿಸಿಕೊಳ್ಳಲು ಮಾಜಿ ಸಚಿವ ಡಿ.ಕೆ ಶಿವಕುಮಾರ್, ರಾಜ್ಯಸಭಾ ಸದಸ್ಯ ಬಿ.ಕೆ ಹರಿಪ್ರಸಾದ್, ಮಾಜಿ ಸಂಸದ ಕೆ.ಹೆಚ್. ಮುನಿಯಪ್ಪ ಅರ್ಹರಾಗಿದ್ದು, ಇವರ ಪೈಕಿ ಒಬ್ಬರನ್ನು ಪರಿಗಣಿಸಬಹುದು ಎಂದು ಹೈಕಮಾಂಡ್‌ಗೆ ಶಿಫಾರಸು ಮಾಡಿದೆ.

ಖಾಲಿಯಿರುವ ಮೂರು ಹುದ್ದೆಗಳ ನೇಮಕಕ್ಕೆ ಎಐಸಿಸಿ ಕಸರತ್ತು; ಸರತಿ ಸಾಲಿನಲ್ಲಿ 'ಕೈ' ನಾಯಕರು
ವಿಧಾನ ಸಭೆ ವಿರೋಧ ಪಕ್ಷದ ನಾಯಕಸ್ಥಾನಕ್ಕೆ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಮತ್ತು ಕೆಪಿಸಿಸಿಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜಿನಾಮೆ ನೀಡಿದ್ದು, ತೆರೆವಾಗಿರುವಸ್ಥಾನಗಳನ್ನು ತುಂಬಲು ದೆಹಲಿ ಕಾಂಗ್ರೆಸ್ ನಾಯಕರು ಪ್ರಯತ್ನಿಸುತ್ತಿದ್ದಾರೆ.

ಉಪಚುನಾವಣೆ ವೈಫಲ್ಯ ವಿಶ್ಲೇಷಣೆ: ನಾಯಕತ್ವ ಬದಲಾವಣೆಗೆ ಕಾಂಗ್ರೆಸ್ ಚಿಂತನೆ
ರಾಜ್ಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿರುವ ಹಿನ್ನೆಲೆಯಲ್ಲಿ ದಿನೇಶ್ ಗುಂಡೂರಾವ್ ಕೆಪಿಸಿಸಿ ಅದ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಈಶ್ವರ್ ಖಂಡ್ರೆಗೆ ಒಲಿಯುವುದೇ ಕೆಪಿಸಿಸಿ ಅಧ್ಯಕ್ಷಗಿರಿ? ಲಿಂಗಾಯತ ಸಮುದಾಯದ ನಾಯಕನತ್ತ ಹೈಕಮಾಂಡ್ ಒಲವು
ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದಲ್ಲಿನ ಪ್ರಸ್ತುತ ಬೆಳವಣಿಗೆಯನ್ನು ಚರ್ಚಿಸಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಅಧ್ಯಕ್ಷ ಈಶ್ವರ್ ಖಂಡ್ರೆ ಅವರನ್ನು ಹೈಕಮಾಂಡ್ ದೆಹಲಿಗೆ ಕರೆದಿದೆ. ಈ ಮುಖೇನ ಖಂಡ್ರೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆದ್ಯತೆಯ ಆಯ್ಕೆಯಾಗಿರಬಹುದು ಎಂಬಂತೆ ಕಾಣಿಸುತ್ತಿದೆ. ಇನ್ನು ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕ

'ಎಸ್ .ಎಂ ಕೃಷ್ಣ ಅವಧಿ ಮುಗಿದ ಮೇಲೆ ಗುಂಪುಗಾರಿಕೆ ಮಾಡಬಹುದಿತ್ತು, ನನಗೆ ಅವಶ್ಯಕತೆಯಿಲ್ಲ'
ಪಕ್ಷದಲ್ಲಿ ತಾವು ಇದುವರೆಗೆ ಯಾವುದೇ ಗುಂಪುಗಾರಿಕೆ ಮಾಡಿಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಲಾಬಿ ನಡೆಸಿಲ್ಲ. ಲಾಬಿ ಮಾಡುವ ಅವಶ್ಯಕತೆಯೂ ತಮಗಿಲ್ಲ ಇಲ್ಲ ಎಂದು ಮಾಜಿ ಸಚಿವ, ಕಾಂಗ್ರೆಸ್‌ನ ಹಿರಿಯ ನಾಯಕ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಹೊಸ ವರ್ಷಕ್ಕೆ ಎಐಸಿಸಿ ಪುನಾರಚನೆ : ರಾಜ್ಯದಿಂದ ಯಾರು ದಿಲ್ಲಿಗೆ ? ಉಳಿದವರು ಎಲ್ಲಿಗೆ ?
ರಾಷ್ಟ್ರ ರಾಜಕಾರಣದಲ್ಲಿ ಅತ್ಯಂತ ಹಳೆಯ ಪಕ್ಷವಾಗಿದ್ದರೂ, ಕೇಂದ್ರದಲ್ಲಿ ಅಧಿಕೃತ ಪ್ರತಿಪಕ್ಷವಾಗಲೂ ಹೆಣಗಾಡುತ್ತಿರುವ ಕಾಂಗ್ರೆಸ್ ಎಐಸಿಸಿ ಮಟ್ಟದಲ್ಲಿ ಪಕ್ಷವನ್ನು ಪುನಾರಚನೆ ಮಾಡಲು ಸಿದ್ಧತೆ ನಡೆಸಿದೆ.

ರಾಜ್ಯ ಕಾಂಗ್ರೆಸ್ ನ ಸಿಂಹಾಸನ ಖಾಲಿ: ಯಾರಾಗುತ್ತಾರೆ ಮುಂದಿನ ಸಾರಥಿ?
ಉಪ ಚುನಾವಣೆಯಲ್ಲಿ ಪಕ್ಷದ ಸೋಲಿನ ನೈತಿಕ ಹೊಣೆ ಹೊತ್ತು ಶಾಸಕಾಂಗ ನಾಯಕ ಸ್ಥಾನಕ್ಕೆ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ ಬಳಿಕ ರಾಜ್ಯದ ಕಾಂಗ್ರೆಸ್ ನ ಚುಕ್ಕಾಣಿ ಯಾರು ಹಿಡಿಯುತ್ತಾರೆ ಎಂಬ ಪ್ರಶ್ನೆ ಸಹಜವಾಗಿ ಎಲ್ಲರಲ್ಲಿಯೂ ಬಂದಿದೆ.

