Kodagu

ಕೊಡವರ ವಂಶವೃಕ್ಷ ಜಾಲಾಡುವ ವೆಬ್ ಪೋರ್ಟಲ್ ಗೆ ಬುಕ್ ಆಫ್ ಇಂಡಿಯಾ ದಾಖಲೆಯ ಗರಿ
ಈ ಪೋರ್ಟಲ್ ಮುಖಾಂತರ ಕೊಡವರು ತಾವು ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅಥವ ಯಾವುದೇ ಕೊಡಗಿನ ಮಹನೀಯರಿಗೆ, ಸೆಲಬ್ರಿಟಿಗಳಿಗೆ ಹೇಗೆ ಸಂಬಂಧಿಗಳು ಎಂದು ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡಬಹುದು.

ಕೊಡಗು: ತಾಯಿಯ ನೆನಪುಗಳಿದ್ದ ಮೊಬೈಲ್ ಕಳೆದುಕೊಂಡಿದ್ದ ಮಡಿಕೇರಿ ಬಾಲಕಿಗೆ ಕೊನೆಗೂ ಸಿಕ್ತು ಮೊಬೈಲ್
ಕೊವಿಡ್ ಸೋಂಕಿನಿಂದಾಗಿ ಅಮ್ಮ ತೀರಿಹೋದಳು, ಅವಳ ಜತೆಗಿನ ನೆನಪುಗಳ ಚಿತ್ರಗಳಿದ್ದ ಮೊಬೈಲ್ ಸಹ ಅವಳ ಜತೆಗೇ ಕಾಣೆಯಾಗಿದೆ. ಹುಡುಕಿಕೊಡಿ ಎಂದು ಅಂಗಲಾಚಿದ್ದ ಬಾಲಕಿಗೆ ಇದೀಗ ಆಕೆಯ ಮೊಬೈಲ್ ದೊರೆತಿದೆ.

ರಾಜೀವ್ ಗಾಂಧಿ ನ್ಯಾಷನಲ್ ಪಾರ್ಕ್ ಬದಲು ನಾಗರಹೊಳೆ ನ್ಯಾಷನಲ್ ಪಾರ್ಕ್ ಎಂದಿರಲಿ, ಇಲ್ಲವೇ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹೆಸರನ್ನಿಡಿ: ಕೊಡಗು ಜನತೆಯ ಆಗ್ರಹ
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಮರುನಾಮಕರಣ ಮಾಡುತ್ತಿದ್ದಂತೆ ಕೊಡಗು ಜಿಲ್ಲೆಯ ಸ್ಥಳೀಯರು ನಾಗರಹೊಳೆ ಉನ್ಯಾನವನದ ಹೆಸರು ಕೂಡ ಬದಲಾಯಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಇದಕ್ಕಾಗಿ ಅಭಿಯಾನವೇ ಆರಂಭವಾಗಿದೆ.

ಅಂತರ ಜಿಲ್ಲಾ ಪ್ರವಾಸಿಗರಿಗೆ ಆರ್ ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ: ಆದೇಶ ಹಿಂಪಡೆದ ಕೊಡಗು ಜಿಲ್ಲಾಧಿಕಾರಿ
ಮಡಿಕೇರಿ ಸೇರಿದಂತೆ ಜಿಲ್ಲೆಯಲ್ಲಿ ಬರುವ ಪ್ರವಾಸಿಗರಿಗೆ ಆರ್ ಟಿ ಪಿಸಿಆರ್ ವರದಿ ಕಡ್ಡಾಯ ಎಂಬ ಆದೇಶವನ್ನು ಕೊಡಗು ಜಿಲ್ಲಾಧಿಕಾರಿ ವಾಪಸ್ ಪಡೆದಿದ್ದಾರೆ.

ಕೊಡಗಿನಲ್ಲಿ ವಿದ್ಯುತ್ ತಗುಲಿ ಕಾಡಾನೆ ಸಾವು, ಜಿಲ್ಲೆಯಲ್ಲಿ ಈ ತಿಂಗಳಲ್ಲೇ ಜಂಬೋನ ನಾಲ್ಕನೇ ಅಸಹಜ ಸಾವು
ಕೊಡಗು ಗ್ರಾಮದ ಕೃಷಿಭೂಮಿಯಲ್ಲಿ ಅಕ್ರಮವಾಗಿ ವಿದ್ಯುತ್ ಮಾರ್ಗವನ್ನು ಅಳವಡಿಸಿದ ನಂತರ ಸುಮಾರು 38 ವರ್ಷದ ಗಂಡು ಆನೆಯೊಂದು ವಿದ್ಯುತ್ ತಗುಲಿ ಮೃತಪಟ್ಟಿದೆ. ಇದರೊಂದಿಗೆ ಈ ತಿಂಗಳು ಜಿಲ್ಲೆಯಲ್ಲಿ ವರದಿಯಾದ....

ಕೊಡಗು ಜಿಲ್ಲೆಯಲ್ಲಿ ಶೂನ್ಯ ಲಸಿಕೆ ವ್ಯರ್ಥ: ಒಂದು ಡ್ರಾಪ್ ಕೂಡ ವೇಸ್ಟ್ ಮಾಡದೆ ಬಳಕೆ!
ಕೊಡಗು ಜಿಲ್ಲೆಯಲ್ಲಿ ಒಂದು ಡ್ರಾಪ್ ಲಸಿಕೆ ಕೂಡ ವ್ಯರ್ಥ ಮಾಡಿಲ್ಲ. ಲಸಿಕೆ ಸರಬರಾಜು ಆಗದ ಕಾರಣ, ಜಿಲ್ಲೆಯು ಗುರುವಾರ ಯಾವುದೇ ಆರೋಗ್ಯ ಕೇಂದ್ರದಲ್ಲಿ ನಾಗರಿಕರಿಗೆ ಚುಚ್ಚುಮದ್ದು ನೀಡಿಲ್ಲ.

ಕೊಡಗಿನಾದ್ಯಂತ ಭಾರಿ ಮಳೆ-ಭೂಕುಸಿತ: ಧರೆಗುರುಳಿದ ಬೃಹತ್ ಮರಗಳು, ವಿದ್ಯುತ್ ಸಂಪರ್ಕ ಕಡಿತ!
ಕೊಡಗಿನಾದ್ಯಂತ ಬುಧವಾರ ಬೆಳಿಗ್ಗೆಯಿಂದ ನಿರಂತರವಾಗಿ ಮಳೆಯಾಗಿಗುತ್ತಿದ್ದು ಭೂಕುಸಿತ ಸಂಭವಿಸಿದೆ. ಇನ್ನು ಮಳೆಯಿಂದಾಗಿ ಅಪಾರ ಆಸ್ತಿ ಮತ್ತು ವಿದ್ಯುತ್ ಸಂಪರ್ಕಕ್ಕೆ ಹಾನಿಯಾಗಿದೆ.

ಕೊಡಗಿನಲ್ಲಿ ಮಳೆ ಆರ್ಭಟ; ಹೊಳೆ ದಾಟುವಾಗ 70 ವರ್ಷದ ವ್ಯಕ್ತಿ ನೀರು ಪಾಲು
ಕಾಫಿನಾಡು ಕೊಡಗಿನಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಹೊಳೆದಾಟುವಾಗ 70 ವರ್ಷದ ವ್ಯಕ್ತಿ ನೀರು ಪಾಲಾಗಿರುವ ಘಟನೆ ಬುಧವಾರ ನಡೆದಿದೆ.

ಅನ್'ಲಾಕ್ ಘೋಷಣೆಯಾದರೂ ಕೊಡಗು ಪ್ರವಾಸಿ ತಾಣಗಳು ಇನ್ನೂ ಕ್ಲೋಸ್: ಪ್ರವಾಸಿಗರಿಗೆ ನಿರಾಸೆ
ಕೊಡಗು ಜಿಲ್ಲೆಯಲ್ಲಿ ಅನ್'ಲಾಕ್ ಘೋಷಣೆಯಾಗಿ ಹಲವು ದಿನಗಳು ಕಳೆದರೂ ಪ್ರವಾಸಿ ತಾಣಗಳು ಮಾತ್ರ ಬಂದ್ ಆಗಿರುವುದು ಪ್ರವಾಸಿಗರಲ್ಲಿ ನಿರಾಸೆಯನ್ನುಂಟು ಮಾಡಿದೆ.

