Kodagu

ಕೊಡಗಿನ ಹೋಂಸ್ಟೇನಲ್ಲಿ ಮಗಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಕೇರಳ ದಂಪತಿ
ಕೇರಳದಿಂದ ಪ್ರವಾಸಕ್ಕೆ ಬಂದಿದ್ದ ದಂಪತಿ, ತಮ್ಮ ಮಗಳನ್ನು ಕೊಂದು ಬಳಿಕ ತಾವೂ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಶನಿವಾರ ಮಡಿಕೇರಿ ತಾಲೂಕಿನ ಕಡಗದಾಳು ಹೋಮ್‌ಸ್ಟೇನಲ್ಲಿ ನಡೆದಿದೆ.

ಕೊಡಗಿನ ಅಂಗನವಾಡಿಗಳಿಗೆ ಹಲವು ತಿಂಗಳಿಂದ ಪೂರೈಕೆಯಾಗುತ್ತಿಲ್ಲ ಮೊಟ್ಟೆ
ಕೊಡಗು ಜಿಲ್ಲೆಯ ಅಂಗನವಾಡಿಗಳಿಗೆ ಕಳೆದ ಮೂರು ತಿಂಗಳಿನಿಂದ ಮೊಟ್ಟೆ ಪೂರೈಕೆಯಾಗುತ್ತಿಲ್ಲ. ಆದರೆ ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಸಂಬಂಧಪಟ್ಟವರು ಭರವಸೆ ನೀಡಿದರೂ ತಾಂತ್ರಿಕ ಸಮಸ್ಯೆ ಇದೆ ಎಂದು ಇಲಾಖೆ...

ಕೊಡಗಿನ ಸರ್ಕಾರಿ ಶಾಲೆಗೆ ಹೊಸ ಹೊಳಪು ತಂದ 'ಕನ್ನಡ ಮನಸುಗಳು' ಸ್ವಯಂಸೇವಕರು!
ಕೊಡಗಿನ ಸರ್ಕಾರಿ ಶಾಲೆಯ ಖಾಲಿ ಗೋಡೆಗಳು 'ಕನ್ನಡ ಮನಸುಗಳು' ಕರ್ನಾಟಕ ಎಂಬ ಸರ್ಕಾರೇತರ ಸಂಸ್ಥೆಯ ಪ್ರಯತ್ನದಿಂದ ಸ್ಪೂರ್ತಿದಾಯಕ ಕಥೆಗಳಾಗಿ ಮಾರ್ಪಟ್ಟಿವೆ.

ಕೊಡಗಿನಲ್ಲಿ ಚಿರತೆ ಹಾವಳಿ: ಮನೆ ಮುಂದೆ ಮಲಗಿದ್ದ 3 ನಾಯಿ ಮರಿಗಳ ಸಾವು, ಸಿಸಿಟಿವಿಯಲ್ಲಿ ದೃಶ್ಯ ಸೆರೆ!
ಕರ್ನಾಟಕದ ಪ್ರವಾಸಿಗರ ಸ್ವರ್ಗ ಮಡಿಕೇರಿಯಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಕೊಡಗಿನಲ್ಲಿ ಚಿರತೆ ದಾಳಿಯಲ್ಲಿ ಮನೆ ಮುಂದೆ ಮಲಗಿದ್ದ ಮೂರು ನಾಯಿಮರಿಗಳು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಕೊಡಗು: ಕೇರಳ ಗಡಿಯಲ್ಲಿ ಪೊಲೀಸ್, ನಕ್ಸಲರ ನಡುವೆ ಗುಂಡಿನ ಚಕಮಕಿ
ಕೊಡಗು ಜಿಲ್ಲೆಯ ಕರ್ನಾಟಕ-ಕೇರಳ ಗಡಿಭಾಗದಲ್ಲಿ ನಕ್ಸಲ್ ಶಿಬಿರದ ಬಳಿ ನಕ್ಸಲೀಯರು ಮತ್ತು ಕೇರಳದ ನಕ್ಸಲ್ ನಿಗ್ರಹ ಪಡೆ ನಡುವೆ ಭಾರೀ ಗುಂಡಿನ ಚಕಮಕಿ ನಡೆದು ಗುಂಡಿನ ಕಾಳಗದಲ್ಲಿ ಓರ್ವ ನಕ್ಸಲ್ ಗಾಯಗೊಂಡಿದ್ದಾನೆ.

ಆನೆ ಹಿಂಡಿನಿಂದ ಬೇರ್ಪಟ್ಟ ನವಜಾತ ಆನೆ ಮರಿ ಮರಳಿ ತಾಯಿ ಮಡಿಲಿಗೆ..
ಮನುಷ್ಯರ ವಾಸಪ್ರದೇಶದ ಬಳಿ ಜನಿಸಿ, ಹಿಂಡಿನಿಂದ ಬೇರ್ಪಟ್ಟ ಆನೆ ಮರಿಯನ್ನು ಅರಣ್ಯ ಇಲಾಖೆ ಮರಳಿ ತಾಯಿ ಬಳಿ ಸೇರಿಸಿದೆ.

ಕೊಡಗು: ಜಿಂಕೆ ಬೇಟೆಯಾಡಿದ ಇಬ್ಬರ ಬಂಧನ, ಮೂವರು ಆರೋಪಿಗಳು ನಾಪತ್ತೆ
ಜಿಂಕೆಯನ್ನು ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಮೂವರು ತಲೆಮರೆಸಿಕೊಂಡಿದ್ದಾರೆ. ಪೊನ್ನಂಪೇಟೆ ಅರಣ್ಯ ವಲಯದ ಅಧಿಕಾರಿಗಳು ಹಾಗೂ ನಾಗರಹೊಳೆಯ ಕಲ್ಲಲ್ಲ ವನ್ಯಜೀವಿ ವಲಯದ ಅಧಿಕಾರಿಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಕೊಡಗು: ಸೇನೆಯಿಂದ ಸಿಗಬೇಕಿದ್ದ 50 ಲಕ್ಷ ರೂ.ಗೆ ಬೇಡಿಕೆ, ಹನಿಟ್ರ್ಯಾಪ್‌ಗೆ ಸಿಲುಕಿ ನಿವೃತ್ತ ಯೋಧ ಆತ್ಮಹತ್ಯೆ
ಹನಿ ಟ್ರ್ಯಾಪಿಂಗ್‌ಗೆ ಸಿಲುಕಿದ್ದ ನಿವೃತ್ತ ಯೋಧರೊಬ್ಬರ ಮೃತದೇಹವನ್ನು ಕೊಡಗು ಜಿಲ್ಲೆಯ ಕೆರೆಯೊಂದರಿಂದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಮೃತರನ್ನು ಮಡಿಕೇರಿ ಸಮೀಪದ ಉಕ್ಕುಡ ನಿವಾಸಿ ಸಂದೇಶ್ ಎಂದು ಗುರುತಿಸಲಾಗಿದೆ.

ಕೊಡಗು: ಬುಡಕಟ್ಟು ಆಶ್ರಮ ಶಾಲೆಯ ಆಹಾರ ಧಾನ್ಯಗಳಲ್ಲಿ ಹುಳುಗಳು ಪತ್ತೆ, ಅಧಿಕಾರಿಗಳ ವಿರುದ್ಧ ಪೋಷಕರ ಕಿಡಿ
ಕೊಡಗು ಬುಡಕಟ್ಟು ಆಶ್ರಮ ಶಾಲೆಯ ಆಹಾರ ಧಾನ್ಯಗಳಲ್ಲಿ ರಾಶಿ ರಾಶಿ ಹುಳುಗಳು ಪತ್ತೆಯಾಗಿದ್ದು, ಇದನ್ನು ಕಂಡ ಮಕ್ಕಳ ಪೋಷಕರು ಅಧಿಕಾರಿಗಳ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.

