Killed

ಹಾಸನ: ಮೀನು ಹಿಡಿಯಲು ತೆರಳುತ್ತಿದ್ದವರ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ; ಸಂಘ ಪರಿವಾರದ ಕಾರ್ಯಕರ್ತ ಬಲಿ
ತಡರಾತ್ರಿ ಹೇಮಾವತಿ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದಾಗ ಅಪರಿಚಿತರು ಗುಂಡಿನ ದಾಳಿ ಮಾಡಿದ್ದರಿಂದ ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದು ಇಬ್ಬರಿಗೆ ಗಂಭೀರವಾದ ಗಾಯಗಳಾಗಿವೆ.

ಮಾಸ್ಕೋ: ಪೂರ್ವ ಉಕ್ರೇನ್ನಲ್ಲಿ ಕ್ಷಿಪಣಿ ದಾಳಿಗೆ 60 ರಷ್ಯಾ ಸೈನಿಕರು ಸಾವು
ರಷ್ಯಾ- ಉಕ್ರೇನ್ ನಡುವಣ ಯುದ್ಧ ಮುಂದುವರೆದಿದ್ದು, ಅಮೆರಿಕ ಒದಗಿಸಿದ ಹಿಮಾರ್ಸ್ ಸಿಸ್ಟಮ್ ಬಳಸಿಕೊಂಡು ಕೈವ್ ಪಡೆ ಪೂರ್ವ ಉಕ್ರೇನ್ನಲ್ಲಿ ನಡೆಸಿದ ಕ್ಷಿಪಣಿ ದಾಳಿಗೆ ಕನಿಷ್ಠ 60 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಸೋಮವಾರ ತಿಳಿಸಿದೆ.

ಪ್ರೀತಿಗೆ ವಿರೋಧ, ಬಾಯ್ ಫ್ರೆಂಡ್ ಜೊತೆ ಸೇರಿ ಹೆತ್ತ ತಾಯಿಗೆ ಚಾಕು ಇರಿದು ಕೊಂದ ಮಗಳು!
ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ ತಾಯಿಯನ್ನು 17 ವರ್ಷದ ಹದಿಹರೆಯದ ಯುವತಿ ಹಾಗೂ ಆಕೆಯ ಪ್ರಿಯಕರ ಸೇರಿಕೊಂಡು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಮಧ್ಯ ಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಬೆಂಗಳೂರು: ಕಾಂಪೌಂಡ್ ಕುಸಿದು ಇಬ್ಬರು ಕಾರ್ಮಿಕರ ಸಾವು
ಕಾಂಪೌಂಡ್ ಕುಸಿದ ನಂತರ ಮಹಿಳೆ ಸೇರಿದಂತೆ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಭಾರತೀ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಎಂಇಜಿ ಆಫೀಸರ್ಸ್ ಕಾಲೋನಿಯಲ್ಲಿ ಗುರುವಾರ ಸಂಜೆ ನಡೆದಿದೆ.

ಡಚ್ ವಿದ್ಯಾರ್ಥಿನಿ ರೇಪ್, ಕೊಲೆಗೈದು ಆಕೆಯ ಮಾಂಸ ತಿಂದರೂ ಶಿಕ್ಷೆಗೊಳಗಾಗದ ಜಪಾನಿನ 'ನರಭಕ್ಷಕ' ಸಾವು
ಡಚ್ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ, ಕೊಲೆಗೈದು ಬಳಿಕ ಆಕೆಯ ಮಾಂಸವನ್ನೇ ತಿಂದು 'ಕೋಬ್ ನರಭಕ್ಷಕ' ಎಂದು ಕುಖ್ಯಾತಿ ಪಡೆದಿದ್ದ ಜಪಾನಿನ ಹಂತಕ ಇಸ್ಸಿ ಸಾಗಾವಾ ಮೃತಪಟ್ಟಿದ್ದಾನೆ. ಆತನಿಗೆ 73 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ.

ಆಂಧ್ರ ಪ್ರದೇಶ: ಟ್ರ್ಯಾಕ್ಟರ್ ಪಲ್ಟಿ, ಮದುವೆಗೆ ತೆರಳುತ್ತಿದ್ದ 6 ಮಂದಿ ದುರ್ಮರಣ, ಹಲವರಿಗೆ ಗಾಯ
ಟ್ರಾಕ್ಟರ್ ಪಲ್ಟಿಯಾಗಿ ಕಾಲುವೆಗೆ ಉರುಳಿಬಿದ್ದ ಪರಿಣಾಮ ಮದುವೆಗೆ ತೆರಳುತ್ತಿದ್ದ ಆರು ಮಂದಿ ಸಾವನ್ನಪ್ಪಿದ್ದು, ಇತರ 22 ಮಂದಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಸಂಭವಿಸಿದೆ.

ಪಶ್ಚಿಮ ಬಂಗಾಳ: ಅಭಿಷೇಕ್ ಬ್ಯಾನರ್ಜಿ ಸಾರ್ವಜನಿಕ ಸಭೆಯ ವೇದಿಕೆ ಬಳಿ ಸ್ಫೋಟ; ಮೂವರು ದುರ್ಮರಣ
ಟಿಎಂಸಿ ಹಿರಿಯ ಮುಖಂಡ ಅಭಿಷೇಕ್ ಬ್ಯಾನರ್ಜಿ ರ್ಯಾಲಿಯ ವೇದಿಕೆ ಬಳಿ ಸಂಭವಿಸಿದ ಸ್ಫೋಟದಲ್ಲಿ ಮೂವರು ಸಾವನ್ನಪ್ಪಿದ್ದು, ಅನೇಕ ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರ: ಆರ್ ಎಸ್ ಪುರ ವಲಯದಲ್ಲಿ ಒಳನುಸುಳುಕೋರನ ಗುಂಡಿಕ್ಕಿ ಹತ್ಯೆ
ಪಾಕಿಸ್ತಾನದ ನುಸುಳುಕೋರನನ್ನು ಭದ್ರತಾ ಪಡೆ ಪೊಲೀಸರು ಮಂಗಳವಾರ ನಸುಕಿನ ಜಾವ ಕೊಂದು ಹಾಕಿದ್ದಾರೆ.

ಒಡಿಶಾ: ಭದ್ರತಾ ಪಡೆಗಳೊಂದಿಗೆ ಗುಂಡಿನ ಕಾಳಗ, ಇಬ್ಬರು ನಕ್ಸಲೀಯರ ಹತ್ಯೆ
ಒಡಿಶಾದ ಕೊರಾಪುತ್ ಜಿಲ್ಲೆಯಲ್ಲಿ ಶುಕ್ರವಾರ ವಿಶೇಷ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ನಕ್ಸಲೀಯರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

