Kashmir

ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿವಾದ ಪ್ರಸ್ತಾಪಿಸಿದರೆ ಪಾಕಿಸ್ತಾನದ ಘನತೆಗೆ ಧಕ್ಕೆ, ಭಾರತಕ್ಕಲ್ಲ: ಸೈಯದ್ ಅಕ್ಬರುದ್ದೀನ್
ಮುಂದಿನ ವಾರ ವಿಶ್ವಸಂಸ್ಥೆಯ ಉನ್ನತ ಮಟ್ಟದ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ವಿವಾದವನ್ನು ಪ್ರಸ್ತಾಪಿಸಿದರೆ ಪಾಕಿಸ್ತಾನದ ಮಾನ ಹರಾಜಾಗುತ್ತದೆ. ಭಯೋತ್ಪಾದನೆಗೆ ಪ್ರೋತ್ಸಾಹ ನೀಡಿದ ಪಾಕಿಸ್ತಾನಕ್ಕೆ ದ್ವೇಷದ ಮಾತುಗಳನ್ನಾಡುವುದೇ ಮುಖ್ಯವಾಗಿಬಿಟ್ಟಿದೆ ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಹೇಳಿದ್ದಾರೆ.

ಕಾಶ್ಮೀರಕ್ಕೆ ಮತ್ತೆ ವಿಶೇಷ ಸ್ಥಾನಮಾನ ನೀಡದ ಹೊರತು ಭಾರತದೊಂದಿಗೆ ಮಾತುಕತೆ ಇಲ್ಲ: ಇಮ್ರಾನ್ ಖಾನ್
ಕಾಶ್ಮೀರ ವಿಷಯದಲ್ಲಿ ಭಾರತದೊಂದಿಗೆ ಉದ್ವಿಗ್ನತೆ ಹೆಚ್ಚಾಗಿರುವ ಸಂದರ್ಭದಲ್ಲೇ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಕಣಿವೆಯಲ್ಲಿ ಹೇರಿರುವ ಕರ್ಫ್ಯೂವನ್ನು ಹಿಂಪಡೆಯದೆ ಮತ್ತು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು....

ಕಾಶ್ಮೀರ ವಿವಾದ: ಭಾರತದ ಬೆಂಬಲಕ್ಕೆ ನಿಂತ ಯುರೋಪಿಯನ್ ಸಂಸದರು, ಉಗ್ರರಿಗೆ ಆಶ್ರಯ ನೀಡುತ್ತಿರುವ ಪಾಕ್ ಗೆ ತರಾಟೆ
ಜಮ್ಮು ಮತ್ತು ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಭಾರತವನ್ನು ಬೆಂಬಲಿಸಿರುವ ಯುರೋಪಿಯನ್ ಸಂಸದರು, ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಪಿಒಕೆ ನಮ್ಮದು: ಭಾರತದ ಹೇಳಿಕೆ ವಿರುದ್ಧ ಪಾಕಿಸ್ತಾನ ಕೆಂಡಾಮಂಡಲ
ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ ಭಾಗ. ಮುಂದೊಂದು ದಿನ ಪಿಒಕೆ ಮೇಲೆ ಭಾರತ ಕಾನೂನು ಬದ್ಧವಾಗಿಯೇ ಹಕ್ಕು ಹೊಂದಲಿದೆ ಎಂಬ ಭಾರತದ ಹೇಳಿಕೆಗೆ ಪಾಕಿಸ್ತಾನ ತೀವ್ರವಾಗಿ ಕೆಂಡಾಮಂಡಲಗೊಂಡಿದ್ದು, ಭಾರತದ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಜಾಗತಿಕ ಸಮುದಾಯಕ್ಕೆ ಶುಕ್ರವಾರ ಆಗ್ರಹಿಸಿದೆ.

ಯುದ್ಧೋನ್ಮಾದ ಬಿಟ್ಟು, ತಾಳ್ಮೆಯಿಂದ ಭಾರತದೊಂದಿಗೆ ಮಾತುಕತೆ ನಡೆಸಿ: ಮುಸ್ಲಿಂ ರಾಷ್ಟ್ರಗಳಿಂದ ಪಾಕ್'ಗೆ ತಪರಾಕಿ!
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿ ರದ್ದು ಮಾಡಿದ ಭಾರತದ ನಿರ್ಧಾರವನ್ನು ಜಾಗತಿಕ ವಿಷಯವನ್ನಾಗಿ ಮಾಡಲು ವಿವಿಧ ವೇದಿಕೆಗಳಲ್ಲಿ ಅವಮಾನ ಅನುಭವಿಸಿದ್ದ ಪಾಕಿಸ್ತಾನಕ್ಕೆ ಇದೀಗ ಮುಸ್ಲಿಂ ರಾಷ್ಟ್ರಗಳೂ ಕೂಡ ಪರೋಕ್ಷವಾಗಿ ತಪರಾಕಿ ಹಾಕಿವೆ.

ಕಾಶ್ಮೀರ ಭೇಟಿಗೆ ಅನುಮತಿ ನೀಡಿದ ಸುಪ್ರೀಂಕೋರ್ಟ್'ಗೆ ಧನ್ಯವಾದ: ಗುಲಾಂ ನಬಿ ಆಜಾದ್
ಜಮ್ಮು ಮತ್ತು ಕಾಶ್ಮೀರ ಭೇಟಿಗೆ ಅವಕಾಶ ಮಾಡಿಕೊಟ್ಟ ಸುಪ್ರೀಂಕೋರ್ಟ್'ಗೆ ಧನ್ಯವಾದಗಳು ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು ಸೋಮವಾರ ಹೇಳಿದ್ದಾರೆ.

ಕಾಶ್ಮೀರದ ಯುವತಿ ಬಗ್ಗೆ ಮಾತನಾಡಲು ಹೋಗಿ ನಗೆಪಾಟಲಿಗೀಡಾದ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲ!
ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲ ಯೂಸುಫ್ ಝಾಯಿ ಕಾಶ್ಮೀರದ ಮಕ್ಕಳ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದರು. ಈಗ ಇದೆ ವಿಷಯವಾಗಿ ಟ್ವಿಟರ್ ನ ತಪರಾಕಿಗೆ ಮಲಾಲ ಗುರಿಯಾಗಿದ್ದಾರೆ.

ಇಬ್ಬರು ಮಾಜಿ ಸಿಎಂ ಸೇರಿ ಕಾಶ್ಮೀರದಲ್ಲಿ ಆಗಸ್ಟ್ 5ರಿಂದ ಇದುವರೆಗೆ 4 ಸಾವಿರ ಜನರ ಬಂಧನ: ವರದಿ
ಆಗಸ್ಟ್ 5ರಂದು ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಕಣಿವೆ ರಾಜ್ಯದಲ್ಲಿ ಸುಮಾರು 4 ಸಾವಿರ ಜನರನ್ನು ಬಂಧಿಸಲಾಗಿದೆ.

ಕಾಶ್ಮೀರಿಗಳು ಭಾರತದ ವಿರುದ್ಧ ತಿರುಗಿಬಿದ್ದರೆ ಉಗ್ರವಾದ ಮತ್ತಷ್ಟು ಹೆಚ್ಚಳ: ಇಮ್ರಾನ್ ಖಾನ್
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರಿಗಳಿಗೆ ನಿರಾಶೆ ಮಾಡುವುದಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಶುಕ್ರವಾರ ಹೇಳಿದ್ದಾರೆ.

