ಕಾಶ್ಮೀರದ ಯುವತಿ ಬಗ್ಗೆ ಮಾತನಾಡಲು ಹೋಗಿ ನಗೆಪಾಟಲಿಗೀಡಾದ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲ!
ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲ ಯೂಸುಫ್ ಝಾಯಿ ಕಾಶ್ಮೀರದ ಮಕ್ಕಳ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದರು. ಈಗ ಇದೆ ವಿಷಯವಾಗಿ ಟ್ವಿಟರ್ ನ ತಪರಾಕಿಗೆ ಮಲಾಲ ಗುರಿಯಾಗಿದ್ದಾರೆ.

ಇಸ್ಲಾಮಾಬಾದ್: ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲ ಯೂಸುಫ್ ಝಾಯಿ ಕಾಶ್ಮೀರದ ಮಕ್ಕಳ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದರು. ಈಗ ಇದೆ ವಿಷಯವಾಗಿ ಟ್ವಿಟರ್ ನ ತಪರಾಕಿಗೆ ಮಲಾಲ ಗುರಿಯಾಗಿದ್ದಾರೆ.
ಆ.12 ರಂದು ಪರೀಕ್ಷೆಗೆ ತೆರಳಲು ಸಾಧ್ಯವಾಗಲಿಲ್ಲ. ನನ್ನ ಭವಿಷ್ಯದ ಬಗ್ಗೆ ಅಭದ್ರತೆ ಕಾಡುತ್ತಿದೆ. ನಾನು ಬರಹಗಾರ್ತಿಯಾಗಿ, ಸ್ವಾವಲಂಬಿ ಕಾಶ್ಮೀರಿ ಮಹಿಳೆಯಾಗಬೇಕೆಂದು ಬಯಸಿದ್ದೆ, ಈಗ ಉದ್ದೇಶರಹಿತ ಮತ್ತು ಖಿನ್ನತೆಯ ಭಾವನೆ ಕಾಡುತ್ತಿದೆ. ಪರಿಸ್ಥಿತಿ ಇದೇ ರೀತಿ ಇದ್ದರೆ ಸ್ವಾವಲಂಬಿ ಮಹಿಳೇಯಾಗುವುದು ಕಷ್ಟ ಎಂದು ಕಾಶ್ಮೀರದ ಯುವತಿಯೊಬ್ಬಳು ಹೇಳಿಕೊಂಡಿದ್ದಾಳೆಂದು ಹೇಳಿದ್ದನ್ನು ಮಲಾಲ ಉಲ್ಲೇಖಿಸಿ ಟ್ವೀಟ್ ಮಾಡಿದ್ದರು.
ತಕ್ಷಣವೇ ಜಾಗೃತಗೊಂಡ ಟ್ವಿಟರ್ ಬಳಕೆದಾರರು, ಆ.12 ರಂದು ಈದ್ ಹಬ್ಬ ಇತ್ತು. ಈ ದಿನದಂದು ಭಾರತದಾದ್ಯಂತ ಶಾಲೆಗಳಿಗೆ ರಜೆ ಇತ್ತು. ಆ ದಿನ ರಜೆ ಇರುವ ಸಾಧ್ಯತೆ ಇಮ್ರಾನ್ ಖಾನ್ ವಿವೇಚನೆಯಿಂದ ಮಾತನಾಡುವ ಸಾಧ್ಯತೆ ಇರುವಷ್ಟೇಯೇ ಎಂದು ಟ್ವೀಟಿಗರು ಮಲಾಲ ಹೇಳಿಕೆಯನ್ನು ಲೇವಡಿ ಮಾಡಿದ್ದಾರೆ. ಆರ್ಟಿಕಲ್ 370 ರದ್ದುಗೊಳಿಸಿದ್ದ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಎಲ್ಲಾ ಶಾಲೆಗಳಿಗೂ ಕಾಶ್ಮೀರದಲ್ಲಿ ರಜೆ ಘೋಷಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


