Kartarpur

ಕರ್ತಾರ್‌ಪುರಕ್ಕೆ ಪ್ರಯಾಣಿಸಲು ಕೊನೆಗೂ ಸಿಧುಗೆ ಭಾರತದಿಂದ ಷರತ್ತುಬದ್ಧ ಅನುಮತಿ!
ಕ್ರಿಕೆಟಿಗ ಹಾಗೂ ರಾಜಕಾರಣಿ ನವಜೋತ್ ಸಿಂಗ್ ಸಿಧು ಅವರಿಗೆ ಕೊನೆಗೂ ಕರ್ತಾರ್‌ಪುರ ಸಾಹೀಬ್ ಗುರುದ್ವಾರ ಪ್ರವಾಸಕ್ಕಾಗಿ ಗುರುವಾರ ಅನುಮತಿ ದೊರೆತಿದೆ.

ನ.9 ಕರ್ತಾರ್ ಪುರ್ ಕಾರಿಡಾರ್ ಉದ್ಘಾಟನಾ ಸಮಾರಂಭ: ಸಿಧುಗೆ ವೀಸಾ ನೀಡಿದ ಪಾಕಿಸ್ತಾನ
ನವೆಂಬರ್ 9 ರಂದು ನಡೆಯಲಿರುವ ಸಿಖ್ಖರ ಧಾರ್ಮಿಕ ಕ್ಷೇತ್ರ ಕರ್ತಾರ್ ಪುರ್ ಕಾರಿಡಾರ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಪಂಜಾಬ್ ಮಾಜಿ ಸಚಿವ ನವಜೋತ್ ಸಿಂಗ್ ಸಿಧು ಅವರಿಗೆ ವೀಸಾ ನೀಡಿರುವುದಾಗಿ ಪಾಕಿಸ್ತಾನ ಇಂದು ತಿಳಿಸಿದೆ.

ಕರ್ತಾರ್ ಪುರ್ ಯಾತ್ರಾರ್ಥಿಗಳಿಗೆ ಪಾಸ್ ಪೋರ್ಟ್ ಅಗತ್ಯವಿದೆ-ರವೀಶ್ ಕುಮಾರ್
ದಾರ್ಬರ್ ಸಾಹೀಬ್ ಗುರುದ್ವಾರಕ್ಕೆ ಭೇಟಿ ನೀಡಲಿರುವ ಭಾರತದ ಯಾತ್ರಾರ್ಥಿಗಳಿಗೆ ಪಾಸ್ ಪೋರ್ಟ್ ಅಗತ್ಯವಿದೆ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.

ಇಮ್ರಾನ್ ಖಾನ್ ಗೆ ಸೆಡ್ಡು ಹೊಡೆದ ಪಾಕ್ ಸೇನೆ! ಕರ್ತಾರ್‌ಪುರ ಪ್ರವೇಶಿಸುವ ಭಾರತೀಯ ಯಾತ್ರಾರ್ಥಿಗಳಿಗೆ ಪಾಸ್‌ಪೋರ್ಟ್ ಕಡ್ಡಾಯ
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಸೆಡ್ಡು ಹೊಡೆದಿರುವ ಪಾಕ್ ಸೇನೆ ಕರ್ತಾರ್‌ಪುರಕ್ಕೆ ಭೇಟಿ ನೀಡುವ ಬಾರತೀಯ ಯಾತ್ರಾರ್ಥಿಗಳಿಗೆ ಪಾಸ್‌ಪೋರ್ಟ್ ಕಡ್ದಾಯದಿಂದ ವಿನಾಯಿತಿ ನೀಡುವ ಆದೇಶವನ್ನು ವಜಾಗೊಳಿಸಿದೆ.

ನಿಜವಾಗುತ್ತಾ ಕ್ಯಾ.ಅಮರಿಂದರ್ ಸಿಂಗ್, ಗುಪ್ತಚರ ಇಲಾಖೆಯ ಆತಂಕ? ಕರ್ತಾರ್ ಪುರದ ಹೆಸರಿನಲ್ಲಿ ಪಾಕ್ ಕುತಂತ್ರ!
ಪಾಕಿಸ್ತಾನ ಕರ್ತಾರ್ ಪುರ ಕಾರಿಡಾರ್ ನ್ನು ಭಾರತೀಯ ಸಿಖ್ ಯಾತ್ರಾರ್ಥಿಗಳಿಗೆ ಮುಕ್ತವಾಗಿಸಿದೆ. ಈ ನಡುವೆ ಕರ್ತಾರ್ ಪುರ ಕಾರಿಡಾರ್ ನ್ನು ಮುಂದಿಟ್ಟುಕೊಂಡು ಪಾಕಿಸ್ತಾನ ದುರುದ್ದೇಶಪೂರ್ವಕವಾಗಿ ಸಂಚು ರೂಪಿಸುತ್ತಿದೆಯೇ ಎಂಬ ಅನುಮಾನ ಕಾಡತೊಡಗಿದೆ.

ಕರ್ತಾರ್ಪುರ ಗಡಿಯಲ್ಲಿ ಉಗ್ರರ ತರಬೇತಿ ಶಿಬಿರ: ಬಿಎಸ್ಎಫ್ ಮೂಲಗಳು
ಕರ್ತಾರ್ಪುರ ಸಾಹಿಬ್ ಗುರದ್ವಾರದ ಗಡಿ ಜಿಲ್ಲೆ ಬಳಿ ಉಗ್ರರ ತರಬೇತಿ ಶಿಬಿರಗಳಿರುವುದಾಗಿ ಬಿಎಸ್ಎಫ್ ಮೂಲಗಳಿಂದ ತಿಳಿದುಬಂದಿದೆ.

ಕರ್ತಾರ್ ಪುರಕ್ಕೆ ಹೋಗುವ ಭಾರತೀಯ ಯಾತ್ರಿಕರಿಗೆ ಪಾಸ್ ಪೋರ್ಟ್, ಶುಲ್ಕದಿಂದ ವಿನಾಯ್ತಿ: ಇಮ್ರಾನ್ ಖಾನ್
ಗುರು ನಾನಕ್ ರ 550ನೇ ಜಯಂತಿ ಅಂಗವಾಗಿ ಕರ್ತಾರ್ ಪುರ್ ಗುರುದ್ವಾರಕ್ಕೆ ಹೋಗುವ ಭಾರತೀಯ ಯಾತ್ರಿಕರಿಗೆ ಮೊದಲ ಎರಡು ದಿನ ಪ್ರವೇಶ ಶುಲ್ಕ ವಿನಾಯ್ತಿ ನೀಡಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ.

ಕರ್ತಾರ್ ಪುರ್ ಯಾತ್ರಿಕರಿಗೆ ನಿರ್ಬಂಧ, 7 ಕೆಜಿ ಲಗೇಜ್, 11 ಸಾವಿರ ರೂ. ನಗದು ಕೊಂಡೊಯ್ಯಲು ಅನುಮತಿ
ಪಾಕಿಸ್ತಾನದ ಕರ್ತಾರ್ ಪುರ್ ನಲ್ಲಿರುವ ಸಿಖ್ಖರ ಪವಿತ್ರ ಧಾರ್ಮಿಕ ಕೇಂದ್ರ ಗುರುದ್ವಾರಕ್ಕೆ ಭೇಟಿ ನೀಡುವ ಭಾರತೀಯ ಪ್ರವಾಸಿಗರಿಗಾಗಿ ಕೇಂದ್ರ ಗೃಹ ಸಚಿವಾಲಯ ಕೆಲವು ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕೆಂದು ಸುತ್ತೋಲೆ ಹೊರಡಿಸಿದೆ.

ಕರ್ತಾರ್‌ಪುರ್ ಗುರುದ್ವಾರ ಪ್ರವೇಶಕ್ಕೆ ಶುಲ್ಕ: ಧಾರ್ಮಿಕ ನಂಬಿಕೆಗಳ ಮೇಲೆ ಪಾಕ್ ವ್ಯಾಪಾರ- ಹರ್‌ಸಿಮ್ರತ್
ಧಾರ್ಮಿಕ ನಂಬಿಕೆಗಳ ಮೇಲೆ ಪಾಕಿಸ್ತಾನ ವ್ಯಾಪಾರ ನಡೆಸಲು ಮುಂದಾಗಿರುವುದು ನಾಚಿಕೆ ಗೇಡು ಎಂದು ಶಿರೋಮಣಿ ಅಕಾಲಿದಳದ ಹಿರಿಯ ನಾಯಕಿ ಹಾಗೂ ಕೇಂದ್ರ ಆಹಾರ ಸಂಸ್ಕರಣೆ ಖಾತೆ ಸಚಿವೆ ಹರ್‌ಸಿಮ್ರತ್ ಕೌರ್ ಬಾದಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

