ಕರ್ತಾರ್ಪುರ ಗಡಿಯಲ್ಲಿ ಉಗ್ರರ ತರಬೇತಿ ಶಿಬಿರ: ಬಿಎಸ್ಎಫ್ ಮೂಲಗಳು
ಕರ್ತಾರ್ಪುರ ಸಾಹಿಬ್ ಗುರದ್ವಾರದ ಗಡಿ ಜಿಲ್ಲೆ ಬಳಿ ಉಗ್ರರ ತರಬೇತಿ ಶಿಬಿರಗಳಿರುವುದಾಗಿ ಬಿಎಸ್ಎಫ್ ಮೂಲಗಳಿಂದ ತಿಳಿದುಬಂದಿದೆ.

ನರೋವಾಲ್: ಕರ್ತಾರ್ಪುರ ಸಾಹಿಬ್ ಗುರದ್ವಾರದ ಗಡಿ ಜಿಲ್ಲೆ ಬಳಿ ಉಗ್ರರ ತರಬೇತಿ ಶಿಬಿರಗಳಿರುವುದಾಗಿ ಬಿಎಸ್ಎಫ್ ಮೂಲಗಳಿಂದ ತಿಳಿದುಬಂದಿದೆ.
ಪಾಕಿಸ್ತಾನ-ಪಂಜಾಬ್ ಗಡಿಯಲ್ಲಿರುವ ಮುರಿಡ್ಕೆ, ಶಾಕರ್ಗರ್ಹ್ ಮತ್ತು ನರೋವಾಲ್ ಬಳಿ ಉಗ್ರರ ತರಬೇತಿ ಕೇಂದ್ರಗಳಿದ್ದು, ಶಿಬಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪುರುಷರು ಹಾಗೂ ಮಹಿಳೆಯರು ಇರುವುದಾಗಿ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ನಾರೋವಾಲ್ ಜಿಲ್ಲೆ ಭಾರತದ ಪಂಜಾಬ್ ಹಾಗೂ ಪಾಕಿಸ್ತಾನ ಗಡಿಯಲ್ಲಿದೆ. ಈ ಪ್ರದೇಶದಲ್ಲಿ ಉಗ್ರರ ಶಿಬಿರಗಳಿರುವುದಾಗಿ ತಿಳಿದುಬಂದಿದೆ.
ಕೆಲ ದಿನಗಳ ಹಿಂದಷ್ಟೇ ಭಾರತ-ಪಾಕಿಸ್ತಾನ ಕರ್ತಾರ್ಪುರ ಕಾರಿಡಾರ್ ಯೋಜನೆಗೆ ಚಾಲನೆ ನೀಡಿತ್ತು. ನವೆಂಬರ್ 9 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಇದೇ ದಿನ ಪಾಕಿಸ್ತಾನ ಪ್ರಧಾನಿ ಕೂಡ ಯೋಜನೆಗೆ ಚಾಲನೆ ನೀಡಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


