Karnataka Forest Department
ದಾಳಿ ಮಾಡಿದ ಚಿರತೆಯನ್ನೇ ಹಗ್ಗ ಕಟ್ಟಿ ಬೈಕ್ ಮೇಲೆ ತಂದ ಭೂಪ!
ತನ್ನ ಮೇಲೆ ದಾಳಿ ಮಾಡಿದ ಚಿರತೆಯನ್ನೇ ಹೋರಾಡಿ ಮಣಿಸಿದ ವ್ಯಕ್ತಿಯೋರ್ವ ಅದರ ಕಾಲುಗಳನ್ನು ಕಟ್ಟಿ ಬೈಕ್ ಮೇಲೆ ಹೊತ್ತ ತಂದ ಅಚ್ಚರಿ ಘಟನೆ ಹಾಸನದಲ್ಲಿ ನಡೆದಿದೆ.

ಮಾನವ-ಪ್ರಾಣಿ ಸಂಘರ್ಷ ನಿಯಂತ್ರಣಕ್ಕೆ ಮಾರ್ಗಸೂಚಿ ಹೊರಡಿಸಿದ ಕರ್ನಾಟಕ ಹೈಕೋರ್ಟ್
ಮಾನವ-ಪ್ರಾಣಿ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ಹೈಕೋರ್ಟ್ ಮಾರ್ಗಸೂಚಿ ಹೊರಡಿಸಿದ್ದು, ಪ್ರತಿ ತಾಲ್ಲೂಕಿನಲ್ಲಿ ದೂರುಗಳನ್ನು ಸ್ವೀಕರಿಸಲು ದೂರುಗಳ ಸೆಲ್ ಸ್ಥಾಪಿಸಲು ನಿರ್ದೇಶಿಸಿದೆ.

ಚಾಮರಾಜನಗರ: ಕಾಡಾನೆ ದಾಳಿಗೆ ವ್ಯಕ್ತಿ ಸಾವು
ಚಾಮರಾಜನಗರ ಜಿಲ್ಲೆಯ ಪೊರಕೆ ಕಡ್ಡಿ ಸಂಗ್ರಹಕ್ಕೆ ಹೋಗಿದ್ದ ತಂದೆ-ಮಗನ ಮೇಲೆ ಆನೆ ದಾಳಿ ಮಾಡಿದ್ದು, ಈ ವೇಳೆ ತಂದೆ ಸಾವನ್ನಪ್ಪಿದ್ದರೆ ಮಗ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿಶ್ವದಲ್ಲಿಯೇ ಅತಿ ಹೆಚ್ಚು ಸಿಂಹ ಬಾಲದ ಸಿಂಗಳಿಕಗಳು ಕರ್ನಾಟಕದಲ್ಲಿ ವಾಸ!
ಕರ್ನಾಟಕ ಅರಣ್ಯ ಇಲಾಖೆ ಮತ್ತು ಕೊಯಮತ್ತೂರಿನ ಸಲೀಂ ಅಲಿ ಪಕ್ಷಿ ವಿಜ್ಞಾನ ಮತ್ತು ನೈಸರ್ಗಿಕ ಇತಿಹಾಸ ಕೇಂದ್ರ ಅಧ್ಯಯನದ ಪ್ರಕಾರ ವಿಶ್ವದಲ್ಲಿಯೇ ಅತಿ ಹೆಚ್ಚು ಸಿಂಹ-ಬಾಲದ ಸಿಂಗಳಿಕಗಳು ಕರ್ನಾಟಕದಲ್ಲಿವೆ. ಇಲ್ಲಿ 730 ಸಿಂಗಳಿಕಗಳು 32 ಗುಂಪುಗಳಲ್ಲಿ ವಾಸಿಸುತ್ತಿವೆ .

ಮಡಿಕೇರಿ: 10 ತಿಂಗಳ ಗರ್ಭಿಣಿ ಆನೆಗೆ ಎಸ್ಟೇಟ್ ಮಾಲೀಕರ ಗುಂಡೇಟು, ಭ್ರೂಣದೊಂದಿಗೇ ಪ್ರಾಣಬಿಟ್ಟ ಹೆಣ್ಣಾನೆ
ಕೊಡಗಿನ ಕುಶಾಲನಗರ ವ್ಯಾಪ್ತಿಯಲ್ಲಿ ಇಬ್ಬರು ಎಸ್ಟೇಟ್ ಮಾಲೀಕರು ಕಾಡಾನೆಯನ್ನು ಗುಂಡಿಕ್ಕಿ ಕೊಂದಿದ್ದು, ಸಾಯುವ ವೇಳೆ ಆನೆ ಗರ್ಭಿಣಿಯಾದ ಪರಿಣಾಮ ತಾಯಿ ಆನೆಯೊಂದಿಗೆ ಭ್ರೂಣದಲ್ಲಿದ್ದ ಆನೆ ಕೂಡ ಸಾವನ್ನಪ್ಪಿದೆ.

ಕೊಡಗಿನಲ್ಲಿ ಕಾಡಾನೆ ದಾಳಿ; ಬೆಳೆ ಉಳಿಸಿಕೊಳ್ಳಲು ಹೋದ ರೈತನಿಗೆ ಗಂಭೀರ ಗಾಯ
ಜಮೀನಿಗೆ ನುಗ್ಗಿದ ಕಾಡಾನೆಯಿಂದ ಬೆಳೆ ಉಳಿಸಿಕೊಳ್ಳುವ ಹೋರಾಟದಲ್ಲಿ ಆನೆ ದಾಳಿಯಿಂದ ರೈತ ಗಾಯಗೊಂಡಿರುವ ಘಟನೆ ಕೊಡಗಿನಲ್ಲಿ ನಡೆದಿದೆ.

ಕಾಡ್ಗಿಚ್ಚು ನಿಯಂತ್ರಣ: ವಾಯುಪಡೆ ಜೊತೆ ಕರ್ನಾಟಕ ಅರಣ್ಯಾಧಿಕಾರಿಗಳ ಮಹತ್ವದ ಚರ್ಚೆ
ಕರ್ನಾಟಕದ ಅರಣ್ಯ ಪ್ರದೇಶಗಳಲ್ಲಿ ವ್ಯಾಪಕವಾಗಿರುವ ಕಾಡ್ಗಿಚ್ಚು ನಿಯಂತ್ರಣಕ್ಕೆ ಗಂಭೀರ ಕ್ರಮಕ್ಕೆ ಮುಂದಾಗಿರುವ ಕರ್ನಾಟಕ ಅರಣ್ಯ ಇಲಾಖೆ ಈ ಸಂಬಂಧ ಭಾರತೀಯ ವಾಯುಸೇನೆ ಅಧಿಕಾರಿಗಳೊಂದಿಗೆ ಮಹತ್ವದ ಚರ್ಚೆಗೆ ಮುಂದಾಗಿದೆ.

ತುಮಕೂರು: ಅದೃಷ್ಟ ಬರುತ್ತದೆ ಎಂದು ನರಿ ಸಾಕಿದ್ದ ವ್ಯಕ್ತಿ ಅರೆಸ್ಟ್
ಅದೃಷ್ಟ ಬರುತ್ತದೆ ಎಂದು ಕೋಳಿ ಫಾರಂನಲ್ಲಿ ನರಿ ಸಾಕಿದ್ದ ವ್ಯಕ್ತಿಯೋರ್ವನನ್ನು ತುಮಕೂರು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

TNIE-ಕನ್ನಡಪ್ರಭ ಆನ್ಲೈನ್ ವರದಿ ಫಲಶೃತಿ: ಹುಲಿ ದಾಳಿ-ಸಾವು ಕುರಿತು ಉಪ ಲೋಕಾಯುಕ್ತ ಸ್ವಯಂ ಪ್ರೇರಿತ ದೂರು!
ರಾಜ್ಯದಲ್ಲಿ ಹುಲಿ ದಾಳಿ ಮತ್ತು ಸಾವಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ (The New Indian Expres) ಮತ್ತು ಕನ್ನಡಪ್ರಭ (KannadaPrabha.Com) ಮಾಡಿದ್ದ ವರದಿಯ ಪರಿಣಾಮ ಉಪ ಲೋಕಾಯುಕ್ತರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

