ತುಮಕೂರು: ಅದೃಷ್ಟ ಬರುತ್ತದೆ ಎಂದು ನರಿ ಸಾಕಿದ್ದ ವ್ಯಕ್ತಿ ಅರೆಸ್ಟ್
ಅದೃಷ್ಟ ಬರುತ್ತದೆ ಎಂದು ಕೋಳಿ ಫಾರಂನಲ್ಲಿ ನರಿ ಸಾಕಿದ್ದ ವ್ಯಕ್ತಿಯೋರ್ವನನ್ನು ತುಮಕೂರು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ತುಮಕೂರು: ಅದೃಷ್ಟ ಬರುತ್ತದೆ ಎಂದು ಕೋಳಿ ಫಾರಂನಲ್ಲಿ ನರಿ ಸಾಕಿದ್ದ ವ್ಯಕ್ತಿಯೋರ್ವನನ್ನು ತುಮಕೂರು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬೆಳಗ್ಗೆ ಎದ್ದು ನರಿ ಮುಖ ನೋಡಿದರೆ ಅದೃಷ್ಟ ಒಲಿಯುತ್ತದೆ ಎಂದು ಕೆಲವರು ಜೋಡಿ ನರಿಗಳಫೋಟೋಗಳನ್ನು ಮನೆಯಲ್ಲಿಟ್ಟುಕೊಳ್ಳುತ್ತಿದ್ದನ್ನು ನೋಡಿದ್ದೇವೆ. ಆದರೆ, ಇನ್ನೊಬ್ಬ ಮೂಢನಂಬಿಕೆಗೆ ಜೋತುಬಿದ್ದು ಜೀವಂತ ನರಿಯನ್ನು ಕೋಳಿಫಾರಂನಲ್ಲಿ ಸಾಕಿ ಬಂಧನಕ್ಕೊಳಗಾಗಿದ್ದಾನೆ. ತುಮಕೂರು ಗ್ರಾಮಾಂತರ ಕ್ಷೇತ್ರದ ಹೆಬ್ಬೂರು ಹೋಬಳಿಯ ನಾಗವಲ್ಲಿ ಗ್ರಾಮದ ನಿವಾಸಿ ಲಕ್ಷ್ಮಿಕಾಂತ್ ಎಂಬುವವರು ತನ್ನ ಕೋಳಿಫಾರಂನಲ್ಲಿ ನರಿ ಸಾಕಿರುವುದರ ಬಗ್ಗೆ ಬಂದ ಮಾಹಿತಿ ಮೇರೆಗೆ ಸಿಐಡಿ ಸಂಚಾರ ಅರಣ್ಯ ಘಟಕದ ಪೊಲೀಸರು ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ.
ಕಳೆದ ಏಳು ತಿಂಗಳಿನಿಂದ ಗ್ರಾಮದ ಕೆರೆ ಸಮೀಪ ಲಕ್ಷ್ಮಿಕಾಂತ್‍ಗೆ ನರಿಮರಿಗಳು ಸಿಕ್ಕಿವೆ. ಇವುಗಳಲ್ಲಿ ಒಂದು ಮರಿಯನ್ನು ತಂದು ತನ್ನ ಕೋಳಿಫಾರಂನಲ್ಲಿ ಬೋನ್‍ನಲ್ಲಿಟ್ಟು ಸಾಕುತ್ತಿದ್ದ. ಅಲ್ಲದೆ, ಪ್ರತಿನಿತ್ಯ ಮುಂಜಾನೆ ನರಿಮುಖ ನೋಡಿ ಅಂದಿನ ಕೆಲಸ- ಕಾರ್ಯಗಳನ್ನು ಮಾಡುತ್ತಿದ್ದ. ಆದರೆ, ಅದೃಷ್ಟ ಎಂದು ಯಾವ ನರಿಯ ಮುಖ ನೋಡುತ್ತಿದ್ದನೋ ಆ ನರಿಯೇ ಅವನನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ವನ್ಯಮೃಗವನ್ನು ಅಕ್ರಮವಾಗಿ ವಶದಲ್ಲಿಟ್ಟುಕೊಂಡು ಆರೋಪದ ಮೇರೆಗೆ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ.
ಅಧಿಕಾರಿಗಳ ಬಳಿ ಆರೋಪಿ ಲಕ್ಷ್ಮೀಕಾಂತ್, ಮೂಢನಂಬಿಕೆಯಿಂದ ಈ ರೀತಿ ಮಾಡಿದೆನೇ ವಿನಃ ಇದರ ಹಿಂದೆ ಯಾವುದೇ ದುರುದ್ದೇಶವಿಲ್ಲ ಎಂದು ತಿಳಿಸಿದ್ದಾನೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 15 ದಿನಗಳ ಕಾಲ ನ್ಯಾಯಂಗ ಬಂಧನಕ್ಕೆ ಒಳಪಡಿಸಲಾಗಿದೆ. ಸ್ಥಳೀಯ ವಲಯ ಅರಣ್ಯಾಧಿಕಾರಿಗಳು, ತುಮಕೂರು ವಲಯ, ತುಮಕೂರು ಜಿಲ್ಲಾಯವರಿಗೆ ವನ್ಯಜೀವಿಯಾದ ನರಿಯ ಸುರಕ್ಷತೆ ಮತ್ತು ಸಂರಕ್ಷಣೆಯ ಸಲುವಾಗಿ ನ್ಯಾಯಾಲಯದ ಅನುಮತಿ ಪಡೆದು ನರಿಯನ್ನು ಕಾಡಿಗೆ ಬಿಡಲು ಅವರ ಸುಪರ್ದಿಗೆ ನೀಡಲಾಗಿರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


