ಕರ್ನಾಟಕ ಅರಣ್ಯ ಇಲಾಖೆ

ಯಲ್ಲಾಪುರದಲ್ಲಿ ಅರಣ್ಯ ಇಲಾಖೆ ಭರ್ಜರಿ ಕಾರ್ಯಾಚರಣೆ: ಭಾರೀ ಪ್ರಮಾಣದ ವನ್ಯಜೀವಿ ವಸ್ತುಗಳ ವಶ; ಇಬ್ಬರ ಬಂಧನ! Video
ಪ್ರಾಥಮಿಕ ತನಿಖೆಯಲ್ಲಿ ಬಂಧಿತರು ಗೋವಾ ಹಾಗೂ ಉತ್ತರ ಕನ್ನಡದ ಅರಣ್ಯ ಪ್ರದೇಶಗಳಲ್ಲಿ ವನ್ಯಜೀವಿಗಳನ್ನು ಬೇಟೆಯಾಡುತ್ತಿದ್ದ ತಂಡವೊಂದರ ಭಾಗವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬೋನ್ ಇಟ್ಟಿದ್ದು ಹೆಣ್ಣಿಗೆ, ಸೆರೆಯಾಗಿದ್ದು 'ಗಂಡು': ಅರಣ್ಯ ಇಲಾಖೆಗೇ ಶಾಕ್; ಚಿರತೆ ಸೆರೆ ಕಾರ್ಯಾಚರಣೆಗೆ ಭಾರಿ ಟ್ವಿಸ್ಟ್!
ಚಿತ್ರದುರ್ಗದ ಬೀರೇನಹಳ್ಳಿ ಕಾಟನಹಟ್ಟಿ ಗ್ರಾಮದ ಹೊರವಲಯದಲ್ಲಿ ತಾಯಿ ಚಿರತೆ ಹಾಗೂ ಅದರ ಮರಿಗಳು ಪದೇಪದೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ರೈತರಲ್ಲಿ ಆತಂಕ ಹೆಚ್ಚಾಗಿತ್ತು.

ರೈಲ್ವೆ ಬ್ಯಾರಿಕೇಡ್ ಗೆ ಸಿಲುಕಿ ಒದ್ದಾಡಿದ ಆನೆ; ಅರಣ್ಯ ಇಲಾಖೆ ಹರಸಾಹಸ, ಕೊನೆಗೂ ಉಳಿಯಿತು ಜೀವ! Video
ಕಾವೇರಿ ವನ್ಯಜೀವಿ ವಲಯದ ಮುಗ್ಗೂರು ಅರಣ್ಯದ ಕಾಡಂಚಿನಲ್ಲಿ ಅರೆಕೊಪ್ಪ ಗ್ರಾಮದ ಬಳಿ ಕಾಡಾನೆಯೊಂದು ನಾಡಿನೊಳಗೆ ಬರಲು ಯತ್ನಿಸಿ ಕಬ್ಬಿಣದ ಕಂಬಿಗಳ ನಡುವೆ ಸಿಲುಕಿ ಒದ್ದಾಡಿದ ಘಟನೆ ವರದಿಯಾಗಿದೆ.

ಮೈಸೂರು: ಹೆಣ್ಣು ಹುಲಿ ಕೊನೆಗೂ ಸೆರೆ; ನಿಟ್ಟುಸಿರು ಬಿಟ್ಟ ಗ್ರಾಮಸ್ಥರು! Video
ಹುಣಸೂರು ತಾಲೂಕಿನ ಹನಗೋಡು ಹೋಬಳಿ ಕೂಡ್ಲೂರು ಗ್ರಾಮದ ಬಳಿಯ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಎಂಬುವವರಿಗೆ ಸೇರಿದ ತೋಟದಲ್ಲಿ ಇರಿಸಿದ್ದ ಬೋನಿಗೆ ಹೆಣ್ಣು ಹುಲಿ ಬಿದ್ದಿದೆ.

ಮಡಿಕೇರಿ ಹೊರವಲಯದಲ್ಲಿ ದೈತ್ಯ ಹುಲಿ ಪ್ರತ್ಯಕ್ಷ: ಗ್ರಾಮಸ್ಥರು ಭಯಭೀತ
ಮಡಿಕೇರಿ ನಗರದಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿರುವ ಖಾಸಗಿ ಎಸ್ಟೇಟ್‌ನಲ್ಲಿ ಹುಲಿಯೊಂದು ಓಡಾಡುತ್ತಿರುವುದು ಕಂಡುಬಂದಿದೆ.

ಫೆಬ್ರವರಿ 21 ರಿಂದ ಸಫಾರಿ ಪುನಾರಂಭ: ಷರತ್ತು ಕಟ್ಟುನಿಟ್ಟಿನ ಪಾಲನೆಗೆ Eshwar Khandre ಸೂಚನೆ
ಮಾನವ-ಹುಲಿ ಸಂಘರ್ಷದ ನಂತರ ಸ್ಥಗಿತಗೊಂಡಿದ್ದ ಸಫಾರಿ ಕಾರ್ಯಾಚರಣೆಗಳು ಫೆಬ್ರವರಿ 21 ರಿಂದ ಷರತ್ತುಗಳೊಂದಿಗೆ ಪುನರಾರಂಭಗೊಳ್ಳಲಿವೆ.

ಬಂಡೆ ಬ್ಲಾಸ್ಟ್ ಗೆ ಗರ್ಭಿಣಿ ಚಿರತೆ, 3 ಮರಿಗಳ ಸಾವು: ತನಿಖೆಗೆ ಆದೇಶ; 'ತಪ್ಪು ಮಾಡಿದವರ ಬಿಡೋ ಮಾತೇ ಇಲ್ಲ'!
ದಿನನಿತ್ಯದ ಗಸ್ತು ತಿರುಗುತ್ತಿದ್ದಾಗ, ಕಗ್ಗಲೀಪುರ ಶ್ರೇಣಿಯ ಅರಣ್ಯ ಅಧಿಕಾರಿಗಳು ಸರ್ವೆ ಸಂಖ್ಯೆ 51 ರಲ್ಲಿ 3-4 ವರ್ಷ ವಯಸ್ಸಿನ ಹೆಣ್ಣು ಚಿರತೆಯ ಮೃತದೇಹವನ್ನು ಪತ್ತೆ ಮಾಡಿದರು.

Video: ಮೊರಾರ್ಜಿ ಶಾಲಾ ಆವರಣಕ್ಕೆ ನುಗ್ಗಿದ ಒಂಟಿ ಸಲಗ, ಬೆಚ್ಚಿ ಬಿದ್ದ ವಿದ್ಯಾರ್ಥಿಗಳು!
ಆನೆಯನ್ನು ಕಂಡ ಶಾಲೆ ಸಿಬ್ಬಂದಿ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಬೋಧಕೇತರ ಸಿಬ್ಬಂದಿ ಕಟ್ಟಡದಿಂದ ಹೊರಕ್ಕೆ ಬಾರದಂತೆ ನೋಡಿಕೊಂಡಿದ್ದಾರೆ.

'ಮುಖ್ಯಮಂತ್ರಿಗಳೇ.. ಇತ್ತ ಗಮನ ಕೊಡಿ': ಬಸ್ ಇಲ್ಲ.. ನಿತ್ಯ ಶಾಲೆಗೆ ಕಾಡಿನಲ್ಲಿ 14 ಕಿ.ಮೀ ನಡೆದೇ ಸಾಗುವ ವಿದ್ಯಾರ್ಥಿಗಳು!
ಊರಿಗೆ ಬಸ್ ಸಂಪರ್ಕ ಮತ್ತು ಹತ್ತಿರದ ಪಟ್ಟಣಗಳಿಗೆ ತಮ್ಮ ಗ್ರಾಮವನ್ನು ಸಂಪರ್ಕಿಸುವ ಸರಿಯಾದ ರಸ್ತೆ ಇಲ್ಲದ ಕಾರಣ, ವಿದ್ಯಾರ್ಥಿಗಳು ಪ್ರತಿದಿನ ಬರೊಬ್ಬರಿ 14 ಕಿ.ಮೀ. ಕಾಲ್ನಡಿಗೆಯಲ್ಲಿ ಹೋಗುತ್ತಾರೆ.

