Karnataka Assembly Elections

ಕರ್ನಾಟಕ ವಿಧಾನಸಭೆ ಚುನಾವಣೆ: ಸಂಘಟನೆಯನ್ನು ನಿಷೇಧಿಸುವ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಬಜರಂಗ ದಳ ಪ್ರತಿಭಟನೆ
ಬಜರಂಗ ದಳದ ಕಾರ್ಯಕರ್ತರು ಕಾಂಗ್ರೆಸ್ ಕಚೇರಿ ಬಳಿ ಪ್ರತಿಭಟನೆ ನಡೆಸಿ, ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಡುಗಡೆ ಮಾಡಿರುವ ಪಕ್ಷದ ಪ್ರಣಾಳಿಕೆಯನ್ನು ಸುಟ್ಟು ಹಾಕಿದರು.

ಖರ್ಗೆ, ಅವರ ಮಗ ಕುಟುಂಬವೊಂದನ್ನು ಸಂತೋಷಪಡಿಸಲು ಅವಹೇಳನಕಾರಿ ಪದಗಳನ್ನು ಬಳಸುತ್ತಾರೆ: ಪ್ರಧಾನಿ ಮೋದಿ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ 'ವಿಷಕಾರಿ ಹಾವು' ಹೇಳಿಕೆ ಮತ್ತು ಅವರ ಮಗ ಪ್ರಿಯಾಂಕ್ ಖರ್ಗೆ ಅವರ ‘ನಾಲಾಯಕ್’ ಹೇಳಿಕೆ ನೀಡಿದ ಒಂದು ದಿನದ ನಂತರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕರು ತಮ್ಮ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿ ರಾಜ್ಯದ ಪ್ರತಿಷ್ಠೆಗೆ ಧಕ್ಕೆ ತರುತ್ತಿದ್ದಾರೆ ಎಂದಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆ: ಉಚಿತ ಕೊಡುಗೆಗಳನ್ನು ವಿರೋಧಿಸುತ್ತಲೇ ಉಚಿತಗಳನ್ನು ಘೋಷಿಸಿದ ಬಿಜೆಪಿ, 'ರೇವ್ಡಿ' ಅಲ್ಲವೆಂದು ಸ್ಪಷ್ಟನೆ
ಕಳೆದ ವರ್ಷ ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, 'ರೇವ್ಡಿ ಸಂಸ್ಕೃತಿ'ಯ (‘ಉಚಿತ ಕೊಡುಗೆಗಳ ಸಂಸ್ಕೃತಿ’) ಜನರು ನಾಗರಿಕರಿಗೆ ಉಚಿತ ಕೊಡುಗೆಗಳನ್ನು ವಿತರಿಸುವ ಮೂಲಕ ಅವರನ್ನು ಖರೀದಿಸಬಹುದು ಎಂದು ಭಾವಿಸುತ್ತಾರೆ. ನಾವು ಒಟ್ಟಾಗಿ ಈ ಚಿಂತನೆಯನ್ನು ಸೋಲಿಸಬೇಕಾಗಿದೆ. ದೇಶದ ರಾಜಕೀಯದಿಂದ ರೇವ್ಡಿ ಸಂಸ್ಕೃತಿ ತೊಲಗಬೇಕು ಎಂದು ಹೇಳಿದರು.

ಕರ್ನಾಟಕದಲ್ಲಿ ಏಕರೂಪ ನಾಗರಿಕ ಸಂಹಿತೆ, ಎನ್‌ಆರ್‌ಸಿಗೆ ಅವಕಾಶ ನೀಡಬೇಡಿ: ಕಾಂಗ್ರೆಸ್ ನಾಯಕ ಪಿ ಚಿದಂಬರಂ
ಕರ್ನಾಟಕವನ್ನು ವಿಭಜಿಸಿ ಧ್ರುವೀಕರಣಗೊಳಿಸುವುದರಿಂದ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಯ ಪ್ರವೇಶವನ್ನು ಕರ್ನಾಟಕದ ಜನರು ತೀವ್ರವಾಗಿ ವಿರೋಧಿಸಬೇಕು ಮತ್ತು ನಿಲ್ಲಿಸಬೇಕು ಎಂದು ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಮನವಿ ಮಾಡಿದರು.

ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯದ 58,000 ಕ್ಷೇತ್ರಗಳಲ್ಲಿ 'ಪ್ರಜಾಪ್ರಭುತ್ವ ಹಬ್ಬ' ಆಚರಣೆ
ಮತದಾರರು ತಮ್ಮ ಹಕ್ಕು ಚಲಾಯಿಸುವಂತೆ ಉತ್ತೇಜಿಸಲು ಚುನಾವಣಾ ಆಯೋಗದ ಉಪಕ್ರಮದ ಭಾಗವಾಗಿ ಭಾನುವಾರ ಕರ್ನಾಟಕದಾದ್ಯಂತ 58,000ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ 'ಪ್ರಜಾಪ್ರಭುತ್ವ ಹಬ್ಬ'ವನ್ನು ಆಚರಿಸಲಾಯಿತು.

ಕಾಂಗ್ರೆಸ್ ಅಧಿಕಾರಕ್ಕೆ ಬಂಧರೆ ಗಲಭೆಗಳು ಹೆಚ್ಚಾಗುತ್ತವೆ: ಅಮಿತ್ ಶಾ ಆಯ್ತು, ಈಗ ಜೆಪಿ ನಡ್ಡಾ ಹೇಳಿಕೆ!
ಕಾಂಗ್ರೆಸ್ ಗೆದ್ದರೆ ಗಲಭೆ ನಡೆಯುತ್ತದೆ ಎಂಬ ಹೇಳಿಕೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರು ಪ್ರಕರಣ ದಾಖಲಿಸಿದ್ದಾರೆ. ಇದೀಗ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕೂಡ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗಲಭೆ ಸಂಭವಿಸುತ್ತದೆ ಎಂದು ಹೇಳಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆ: ಹಲವು ಗೊಂದಲಗಳ ನಡುವೆ ಇನ್ನೂ ಬಹುಮತದ ನಿರೀಕ್ಷೆಯಲ್ಲಿ ಬಿಜೆಪಿ
ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿಯವರ ಅಲೆಯನ್ನು ತನ್ನ ಪರವಾಗಿ ತಿರುಗಿಸಿಕೊಳ್ಳಲು ಮುಂದಾಗಿದೆ. ಪ್ರಧಾನಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಸುಮಾರು 100 ರಾಷ್ಟ್ರೀಯ ನಾಯಕರು ಪಕ್ಷದ ಭವಿಷ್ಯವನ್ನು ಹೆಚ್ಚಿಸಲು ರಾಜ್ಯದಾದ್ಯಂತ ಪ್ರಚಾರ ಮಾಡುತ್ತಿದ್ದಾರೆ.

ಕರ್ನಾಟಕ ಚುನಾವಣೆ: ಸಮೀಕ್ಷೆಗಳಲ್ಲಿ ಅತಂತ್ರ ವಿಧಾನಸಭೆ ಸುಳಿವು, ಎಲ್ಲಾ ದೌರ್ಬಲ್ಯಗಳನ್ನು ದಾಟಿ ಕಾಂಗ್ರೆಸ್ ಗೆಲುವು ಸಾಧ್ಯವೇ?
ದೇಶದಾದ್ಯಂತ ಕಾಂಗ್ರೆಸ್‌ಗೆ ಕಾಯಕಲ್ಪ ಸಿಗುವ ಭರವಸೆ ಇದ್ದರೆ ಅದು ಕರ್ನಾಟಕ ರಾಜ್ಯದಿಂದಲೇ ಶುರುವಾಗಬೇಕು. 2013ರಿಂದ 2018ರ ಅವಧಿಯಲ್ಲಿ ಅಧಿಕಾರದಲ್ಲಿದ್ದ ಪಕ್ಷ ಈ ಬಾರಿಯೂ ಅಧಿಕಾರಕ್ಕೇರುವ ನಿರೀಕ್ಷೆಯಲ್ಲಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ: ಮೂರು ಪಕ್ಷಗಳ ಅಬ್ಬರದ ನಡುವೆ ರಾಜ್ಯದಲ್ಲಿ ಅಸ್ತಿತ್ವದ ಹುಡುಕಾಟದಲ್ಲಿ ಎಎಪಿ
ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೂರು ದೊಡ್ಡ ಪಕ್ಷಗಳ ಪ್ರಾಬಲ್ಯ ಹೊಂದಿರುವ ಕರ್ನಾಟಕ ರಾಜಕೀಯ ರಂಗದಲ್ಲಿ, ಎಎಪಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳಲು ಮತ್ತು ರಾಜ್ಯ ರಾಜಕೀಯದಲ್ಲಿ ಪ್ರಮುಖ ಹಂತಕ್ಕೆ ತಲುಪಲು ಶ್ರಮಿಸುತ್ತಿದೆ.

