ರಾಜಕೀಯ

ಕರ್ನಾಟಕ ವಿಧಾನಸಭೆ ಚುನಾವಣೆ: ಹಲವು ಗೊಂದಲಗಳ ನಡುವೆ ಇನ್ನೂ ಬಹುಮತದ ನಿರೀಕ್ಷೆಯಲ್ಲಿ ಬಿಜೆಪಿ

ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿಯವರ ಅಲೆಯನ್ನು ತನ್ನ ಪರವಾಗಿ ತಿರುಗಿಸಿಕೊಳ್ಳಲು ಮುಂದಾಗಿದೆ. ಪ್ರಧಾನಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಸುಮಾರು 100 ರಾಷ್ಟ್ರೀಯ ನಾಯಕರು ಪಕ್ಷದ ಭವಿಷ್ಯವನ್ನು ಹೆಚ್ಚಿಸಲು ರಾಜ್ಯದಾದ್ಯಂತ ಪ್ರಚಾರ ಮಾಡುತ್ತಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆ: ಹಲವು ಗೊಂದಲಗಳ ನಡುವೆ ಇನ್ನೂ ಬಹುಮತದ ನಿರೀಕ್ಷೆಯಲ್ಲಿ ಬಿಜೆಪಿ
ಬಿಜೆಪಿ ಸಾಂದರ್ಭಿಕ ಚಿತ್ರ
Published On :

ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿಯವರ ಅಲೆಯನ್ನು ತನ್ನ ಪರವಾಗಿ ತಿರುಗಿಸಿಕೊಳ್ಳಲು ಮುಂದಾಗಿದೆ. ಪ್ರಧಾನಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಸುಮಾರು 100 ರಾಷ್ಟ್ರೀಯ ನಾಯಕರು ಪಕ್ಷದ ಭವಿಷ್ಯವನ್ನು ಹೆಚ್ಚಿಸಲು ರಾಜ್ಯದಾದ್ಯಂತ ಪ್ರಚಾರ ಮಾಡುತ್ತಿದ್ದಾರೆ.

ಬಿಜೆಪಿಯು ಈ ಮಾರ್ಗವನ್ನು ಅನುಸರಿಸಿ ಗೆಲುವು ಸಾಧಿಸಲು ಆಶಿಸುತ್ತಿರುವಾಗ, ಹೆಚ್ಚಿನ ಸಮೀಕ್ಷೆ ವರದಿಗಳು ಮತ್ತು ಇಲ್ಲಿನ ಪರಿಸ್ಥಿತಿಯು ಇದು ಸುಲಭದ ಕೆಲಸವಲ್ಲ ಎಂದು ಸೂಚಿಸುತ್ತಿವೆ. ಪಕ್ಷವು 140 ಸ್ಥಾನಗಳನ್ನು ಗೆಲ್ಲುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ. ಪ್ರಧಾನ ಮಂತ್ರಿಯವರ ಜನಪ್ರಿಯತೆಯ ಹೊರತಾಗಿ, ಎಸ್‌ಸಿ/ಎಸ್‌ಟಿಗಳು ಮತ್ತು ಒಬಿಸಿಗಳಿಗೆ ಮೀಸಲಾತಿ ಕೋಟಾವನ್ನು ಹೆಚ್ಚಿಸುವ ಮತ್ತು ಅನೇಕ ಹೊಸ ಮುಖಗಳನ್ನು ಕಣಕ್ಕಿಳಿಸುವುದು ಪಕ್ಷಕ್ಕೆ ಸಹಾಯ ಮಾಡಲಿದೆ ಎಂದೇ ಪಕ್ಷವು ಭಾವಿಸುತ್ತಿದೆ.

ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಲಿಂಗಾಯತ ಸಮುದಾಯದ ಮತಬ್ಯಾಂಕ್‌ ಅನ್ನು ತನ್ನತ್ತ ತಿರುಗಿಸಿಕೊಳ್ಳಲು ಕಾಂಗ್ರೆಸ್ ಶತಪ್ರಯತ್ನ ಮಾಡುತ್ತಿರುವಾಗಲೇ, ಲಿಂಗಾಯತ ಸಮುದಾಯದ ಬೆಂಬಲವನ್ನು ಉಳಿಸಿಕೊಳ್ಳುವುದೇ ಬಿಜೆಪಿಗೆ ದೊಡ್ಡ ಸವಾಲಾಗಿದೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರ ನಿರ್ಗಮನವು ಆ ಮುಂಭಾಗದಲ್ಲಿ ಪಕ್ಷದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಸರ್ಕಾರದ ವಿರುದ್ಧ ಶೇ 40ರಷ್ಟು ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಕಾಂಗ್ರೆಸ್‌ನ ಆಕ್ರಮಣಕಾರಿ ಪ್ರಚಾರದಿಂದ ಬಿಜೆಪಿಯು ತನ್ನನ್ನು ತಾನು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ.

ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಬಳಿಕ ಪಕ್ಷವು ಸಮೀಕ್ಷೆ ನಡೆಸಿದ್ದು, ಅಲ್ಪಸ್ವಲ್ಪ ಬೆಂಬಲ ಇರುವ ಹಲವು ಕಡೆಗಳಲ್ಲಿ ಜನರು ಬಿಜೆಪಿ ಪರ ಒಲವು ತೋರಿದ್ದಾರೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಎನ್ ರವಿಕುಮಾರ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

'ಉದಾಹರಣೆಗೆ, ಬೀದರ್‌ನಲ್ಲಿ ಒಬ್ಬ ಬಿಜೆಪಿ ಶಾಸಕರಿದ್ದರು. ಈ ಬಾರಿ ಅವರು ಮೂವರು ಆಗುತ್ತಾರೆ ಎಂದು ನಾವು ಭಾವಿಸುತ್ತೇವೆ. ರಾಯಚೂರಿನಲ್ಲಿ ಇಬ್ಬರು ಹಾಲಿ ಶಾಸಕರಿದ್ದು, ಈ ಬಾರಿ ಐದು ಸ್ಥಾನಗಳನ್ನು ಎದುರು ನೋಡುತ್ತಿದ್ದೇವೆ'. ಒಟ್ಟಿನಲ್ಲಿ ಎಲ್ಲ ಕಡೆಯೂ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದ್ದು, ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದರು.
ನಟ ಸುದೀಪ್, ಮಂಡ್ಯ ಸಂಸದೆ ಸುಮಲತಾ ಸೇರಿದಂತೆ ಹಲವರು ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ. 'ಕಾಂಗ್ರೆಸ್‌ಗೆ ಹೊಸ ಪ್ರಚಾರಕರು ಇಲ್ಲ, ಅಥವಾ ನಮಗಿರುವಂತೆ ಹೊಸ ಮತದಾರರೂ ಇಲ್ಲ' ಎಂದು ಅವರು ಹೇಳಿದರು.

ಬಿಜೆಪಿ ಬಲಗಳು

ಮೋದಿ, ರಾಷ್ಟ್ರೀಯ ನಾಯಕರಿಂದ ಪ್ರಚಾರ

ಪ್ರಬಲವಾದ ತಳಹದಿಯನ್ನು ಹೊಂದಿರುವ ಕೇಡರ್ ಆಧಾರಿತ ಪಕ್ಷ

ಲಿಂಗಾಯತ ಸಮುದಾಯ ಈಗಲೂ ಪಕ್ಷವನ್ನು ಬೆಂಬಲಿಸುತ್ತಿದೆ

ದೌರ್ಬಲ್ಯಗಳು

ಅನೇಕ ಬಂಡಾಯ ಅಭ್ಯರ್ಥಿಗಳು

ಆಡಳಿತ ವಿರೋಧಿ ಅಲೆ

ಭ್ರಷ್ಟಾಚಾರದ ಆರೋಪಗಳು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.