Karnataka assembly election 2023

ಆಂಜನೇಯನಿಗೂ ಭಜರಂಗ ದಳಕ್ಕೂ ಸಂಬಂಧವೇ ಇಲ್ಲ... ಸಂಘಟನೆ ನಿಷೇಧದಿಂದ ಹಿಂದೆ ಸರಿಯುವ ಮಾತೇ ಇಲ್ಲ..: ಡಿಕೆ ಶಿವಕುಮಾರ್
ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಅಧಿಕಾರಕ್ಕೆ ಬರುತ್ತಿದ್ದಂತೆ ಭಜರಂಗದಳ (Bajarangadala) ನಿಷೇಧ ಮಾಡೇ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್; ಕಚೇರಿಯಿಂದ ಮೋದಿ, ಅಮಿತ್ ಶಾ ಫೋಟೋ ತೆಗೆದಿಲ್ಲ: ಕಾರಣ ಏನು ಗೊತ್ತಾ?
ಬಿಜೆಪಿಯಿಂದ ಟಿಕೆಟ್ ವಂಚಿತರಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ತಮ್ಮ ಕಚೇರಿಯಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಫೋಟೋಗಳನ್ನು ಇನ್ನೂ ತೆರವು ಮಾಡದೇ ಇರುವುದು ಹಲವರ ಹುಬ್ಬೇರಿಸಿದೆ.

ಕಾಂಗ್ರೆಸ್ ನೀತಿ 'ಭ್ರಷ್ಟಾಚಾರ ಮೊದಲು', ನಮ್ಮ ನೀತಿ 'ನಾಗರಿಕರು ಮೊದಲು'; 'ಜೈ ಭಜರಂಗ ಬಲಿ' ಎಂದು ಬಿಜೆಪಿಗೆ ಮತ ಹಾಕಿ: ಪ್ರಧಾನಿ ಮೋದಿ
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ಕರ್ನಾಟಕ ರಾಜ್ಯದಲ್ಲಿ ವಿದೇಶದಿಂದ 30 ಸಾವಿರ ಕೋಟಿ ಹೂಡಿಕೆ ಆಗಿತ್ತು. ಬಿಜೆಪಿ ಸರ್ಕಾರ ಬಂದ ಮೇಲೆ ಅದು ಮೂರು ಪಟ್ಟು ಅಂದರೆ 90 ಸಾವಿರ ಕೊಟಿ ರೂಪಾಯಿಗೆ ವಾರ್ಷಿಕವಾಗಿ ಹೆಚ್ಚಾಯಿತು. ಡಬಲ್ ಎಂಜಿನ್ ಸರ್ಕಾರದ ಪ್ರಯತ್ನದಿಂದ ಇದು ಸಾಧ್ಯವಾಗಿದೆ

ವಿಧಾನಸಭಾ ಚುನಾವಣೆ: ರಾಜ್ಯದಲ್ಲಿ ಒಟ್ಟು 305 ಕೋಟಿ ರೂ. ಮೌಲ್ಯದ ನಗದು, ವಸ್ತು ವಶ
ರಾಜ್ಯ ವಿಧಾನಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಇಲ್ಲಿಯವರೆಗೂ ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್ ಮತ್ತು ಆದಾಯ ತೆರಿಗೆ ಅಧಿಕಾರಿಗಳು ಸೇರಿದಂತೆ ಎಲ್ಲ ತಂಡಗಳು ಒಟ್ಟು ರೂ. 305 ಕೋಟಿ ಮೌಲ್ಯದ ನಗದು ಸೇರಿದಂತೆ ಮದ್ಯ, ಮಾದಕ ದ್ರವ್ಯ ಇತ್ಯಾದಿ ವಸ್ತುಗಳನ್ನು ವಶಪಡಿಸಿಕೊಂಡಿವೆ ಎಂದು ಚುನಾವಣಾ ಆಯೋಗ ಭಾನುವಾರ ತಿಳಿಸಿದೆ.

ಕಾಂಗ್ರೆಸ್ 6ನೇ ಗ್ಯಾರಂಟಿ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ 15 ಸಾವಿರ ರೂ.ಗೆ ಹೆಚ್ಚಳ; ಪ್ರಿಯಾಂಕಾ ಗಾಂಧಿ ಭರವಸೆ
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು 15 ಸಾವಿರ ರೂಗೆ ಹೆಚ್ಚಳ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಗಂಗಾವತಿಯ ಅಂಜನಾದ್ರಿ, ಅಯೋಧ್ಯೆ ರಾಮಮಂದಿರಗಳು ಉತ್ತರ ಹಾಗೂ ದಕ್ಷಿಣ ಭಾರತವನ್ನು ಬೆಸೆಯುತ್ತವೆ: ಯೋಗಿ ಆದಿತ್ಯನಾಥ್
ಗಂಗಾವತಿಯ ಅಂಜನಾದ್ರಿ, ಅಯೋಧ್ಯೆ ರಾಮಮಂದಿರಗಳು ಉತ್ತರ ಹಾಗೂ ದಕ್ಷಿಣ ಭಾರತದ ನಡುವೆ ಬಾಂಧವ್ಯವನ್ನು ಬೆಸೆಯುತ್ತವೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯಾನಾಥ್ ಹೇಳಿದ್ದಾರೆ.

ಮೇಕ್ ಇನ್ ಇಂಡಿಯಾ: ಈಗ ಶೇ.97ರಷ್ಟು ಮೊಬೈಲ್ ಗಳು ದೇಶದಲ್ಲೇ ತಯಾರಾಗುತ್ತಿವೆ- ಜೆಪಿ ನಡ್ಡಾ
9 ವರ್ಷದ ಹಿಂದೆ ದೇಶದಲ್ಲಿ ಬಳೆಕೆಯಾಗುತ್ತಿದ್ದ ಒಟ್ಟಾರೆ ಮೊಬೈಲ್ ಗಳ ಪೈಕಿ ಶೇ.92ರಷ್ಟು ಮೊಬೈಲ್ ಗಳು ವಿದೇಶದಲ್ಲಿ ತಯಾರಾಗಿ ಇಲ್ಲಿಗೆ ಬರುತ್ತಿದ್ದವು.. ಆದರೆ ಈಗ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದ ದೇಶದಲ್ಲಿ ಶೇ.97ರಷ್ಟು ಮೊಬೈಲ್ ಗಳು ಭಾರತದಲ್ಲೇ ತಯಾರಾಗುತ್ತಿವೆ ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಭಾನುವಾರ ಹೇಳಿದ್ದಾರೆ.

ಕರ್ನಾಟಕ ಚುನಾವಣೆ 2023: 'ಸಾ.ರಾ. ಬಾಸ್ ಗೆ ನನ್ನ ಮತ'; ವೋಟ್ ಹಾಕಿ ಬ್ಯಾಲೆಟ್ ಪೇಪರ್ ಪ್ರದರ್ಶಿಸಿದ ಯೋಧನ ಫೋಟೋ ವೈರಲ್
ಮತ ಹಾಕಿ ಬ್ಯಾಲೆಟ್ ಪೇಪರ್ ಜೊತೆಗೆ ಯೋಧನೊಬ್ಬ ಫೋಟೋ ತೆಗೆಸಿಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದೆ.

'ಜನತಾ' ಪ್ರಣಾಳಿಕೆ ಬಿಡುಗಡೆ ಮಾಡಿದ ಜೆಡಿಎಸ್: ಮುಸ್ಲಿಂರಿಗೆ ಶೇ.4ರಷ್ಟು ಮೀಸಲಾತಿ ಮರು ಜಾರಿ, ಕನ್ನಡ ಅಸ್ಮಿತೆ ಉಳಿಸುವ ಭರವಸೆ
ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಪ್ರಾದೇಶಿಕ ಪಕ್ಷ ಜೆಡಿಎಸ್ ತನ್ನ ‘ಜನತಾ’ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.

