Karnataka assembly election 2023

ಕಳೆದ ಮೂರು ವಿಧಾನಸಭೆ ಚುನಾವಣೆಯಲ್ಲಿ ಆದ ಶೇಕಡಾವಾರು ಮತದಾನವೆಷ್ಟು? ಅಂಕಿಅಂಶ ಹಂಚಿಕೊಂಡ ಚುನಾವಣಾ ಆಯೋಗ
ರಾಜ್ಯ

ಕಳೆದ ಮೂರು ವಿಧಾನಸಭೆ ಚುನಾವಣೆಯಲ್ಲಿ ಆದ ಶೇಕಡಾವಾರು ಮತದಾನವೆಷ್ಟು? ಅಂಕಿಅಂಶ ಹಂಚಿಕೊಂಡ ಚುನಾವಣಾ ಆಯೋಗ

ಕರ್ನಾಟಕ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಮುಗಿದು ಇನ್ನೇನು ಕನ್ನಡಿಗರೆಲ್ಲರೂ ಫಲಿತಾಂಶಕ್ಕೆ ಕಾಯುತ್ತಿದ್ದಾರೆ. ಮಾಧ್ಯಮಗಳಲ್ಲಿ ಫಲಿತಾಂಶ ಪೂರ್ವ ಸಮೀಕ್ಷೆಗಳು ಹೊರಬಿದ್ದಿವೆ. ಸಾರ್ವಜನಿಕರು ಕೂಡ ತಮ್ಮದೇ ರೀತಿಯಲ್ಲಿ ಚರ್ಚೆ, ವಿಮರ್ಶೆಗಳು ನಡೆಸುತ್ತಿದ್ದಾರೆ. ನಾಡಿದ್ದು ಶನಿವಾರ ಮಧ್ಯಾಹ್ನ ಹೊತ್ತಿಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ.

ಕರ್ನಾಟಕ ಚುನಾವಣೆ ಮತದಾನ: ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಂಡ ಸ್ಯಾಂಡಲ್ ವುಡ್ ತಾರೆಯರು, ಪೋಟೋಗಳು
ಸಿನಿಮಾ

ಕರ್ನಾಟಕ ಚುನಾವಣೆ ಮತದಾನ: ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಂಡ ಸ್ಯಾಂಡಲ್ ವುಡ್ ತಾರೆಯರು, ಪೋಟೋಗಳು

ಇಂದು ಕರ್ನಾಟಕ ಜನತೆಗೆ ಪ್ರಜಾಪ್ರಭುತ್ವದ ಹಬ್ಬ. ಸ್ಯಾಂಡಲ್ ವುಡ್ ತಾರೆಯರು ಸಹ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.

ಬಿಜೆಪಿಯಲ್ಲಿ ಗುಲಾಮಿ ಸಂಸ್ಕೃತಿ, ಜೀ ಹುಜೂರ್ ಅನ್ನೋರನ್ನ ಅಕ್ಕಪಕ್ಕ ಇಟ್ಕೊಳ್ತಾರೆ: ಸಂತೋಷ್ ವಿರುದ್ಧ ಶೆಟ್ಟರ್ ವಾಗ್ದಾಳಿ
ರಾಜಕೀಯ

ಬಿಜೆಪಿಯಲ್ಲಿ ಗುಲಾಮಿ ಸಂಸ್ಕೃತಿ, ಜೀ ಹುಜೂರ್ ಅನ್ನೋರನ್ನ ಅಕ್ಕಪಕ್ಕ ಇಟ್ಕೊಳ್ತಾರೆ: ಸಂತೋಷ್ ವಿರುದ್ಧ ಶೆಟ್ಟರ್ ವಾಗ್ದಾಳಿ

ಬಿಜೆಪಿಯಲ್ಲಿ ಬಲಾಢ್ಯ ಹಿರಿಯ ನಾಯಕರನ್ನು ಮುಗಿಸುವ ಷಡ್ಯಂತ್ರ ನಡೆಯುತ್ತಿದೆ.ಎರಡು ವರ್ಷ ಮುಖ್ಯಮಂತ್ರಿಯಾದ ನಂತರ ಯಡಿಯೂರಪ್ಪನವರನ್ನು ಅಧಿಕಾರದಿಂದ ಇಳಿಸಲಾಯಿತು. ಅವರೇ ಸ್ವಪ್ರೇರಣೆಯಿಂದ, ಸ್ವಇಚ್ಛೆಯಿಂದ ರಾಜೀನಾಮೆ ನೀಡಿದರು ಎಂದು ಸುದ್ದಿ ಹರಡಿಸಲಾಯಿತು.

'ನೂರು ವೀರಶೈವ ಸ್ವಾಮಿಗಳು ನನಗೆ ಕರೆಮಾಡಿ ಈ ಸರ್ತಿ ಕಾಂಗ್ರೆಸ್ ಗೆ ಸಹಾಯ ಮಾಡ್ತೀವಿ ಅಂತಿದ್ದಾರೆ': ಸಿದ್ದು-ಡಿಕೆಶಿ ಆತ್ಮೀಯ ಸಂಭಾಷಣೆ
ರಾಜಕೀಯ

'ನೂರು ವೀರಶೈವ ಸ್ವಾಮಿಗಳು ನನಗೆ ಕರೆಮಾಡಿ ಈ ಸರ್ತಿ ಕಾಂಗ್ರೆಸ್ ಗೆ ಸಹಾಯ ಮಾಡ್ತೀವಿ ಅಂತಿದ್ದಾರೆ': ಸಿದ್ದು-ಡಿಕೆಶಿ ಆತ್ಮೀಯ ಸಂಭಾಷಣೆ

ಕರ್ನಾಟಕ ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ಕಾಂಗ್ರೆಸ್ ರಾಜ್ಯದ ಇಬ್ಬರು ಅಗ್ರ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನಡುವಿನ ಸಂಭಾಷಣೆಯ ವಿಡಿಯೊವನ್ನು ಪ್ರಸಾರ ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ಮತ್ತು ಇತರ ಕಡೆಗಳಲ್ಲಿ ಇಬ್ಬರ ನಡುವಿನ ಮಾತುಕತೆಯ ಭಾಗ -1 ವೈರಲ್ ಆಗಿತ್ತು.

ವಿಧಾನಸಭೆ ಚುನಾವಣೆ: ಮೇ 9 ಮತ್ತು 10ರಂದು ಕೆಎಸ್ ಆರ್ ಟಿಸಿ ಬಸ್ಸುಗಳ ಸೇವೆಯಲ್ಲಿ ವ್ಯತ್ಯಯ
ರಾಜ್ಯ

ವಿಧಾನಸಭೆ ಚುನಾವಣೆ: ಮೇ 9 ಮತ್ತು 10ರಂದು ಕೆಎಸ್ ಆರ್ ಟಿಸಿ ಬಸ್ಸುಗಳ ಸೇವೆಯಲ್ಲಿ ವ್ಯತ್ಯಯ

ಮೇ 10ರಂದು ನಡೆಯುವ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಸಲುವಾಗಿ ಹೆಚ್ಚಿನ ಬಸ್ಸುಗಳನ್ನು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸೇವೆಗೆ ನಿಯೋಜಿಲಾಗಿರುವುದರಿಂದ ಸಾರ್ವಜನಿಕ ಸಂಚಾರಕ್ಕೆ ಬಸ್ಸುಗಳ ಸೇವೆಯಲ್ಲಿ ಮೇ 9 ಮತ್ತು 10ರಂದು ವ್ಯತ್ಯಯವಾಗಲಿದೆ ಎಂದು ಕೆಎಸ್ ಆರ್ ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

'ದಿ ಕೇರಳ ಸ್ಟೋರಿ' ಚಿತ್ರ ಭಯೋತ್ಪಾದನೆಯ ಸಂಚು ಆಧರಿಸಿದ್ದು, ವೋಟ್ ಬ್ಯಾಂಕ್‌ಗಾಗಿ ಕಾಂಗ್ರೆಸ್ ವಿರೋಧ: ಬಳ್ಳಾರಿಯಲ್ಲಿ ಪ್ರಧಾನಿ ಮೋದಿ
ರಾಜ್ಯ

'ದಿ ಕೇರಳ ಸ್ಟೋರಿ' ಚಿತ್ರ ಭಯೋತ್ಪಾದನೆಯ ಸಂಚು ಆಧರಿಸಿದ್ದು, ವೋಟ್ ಬ್ಯಾಂಕ್‌ಗಾಗಿ ಕಾಂಗ್ರೆಸ್ ವಿರೋಧ: ಬಳ್ಳಾರಿಯಲ್ಲಿ ಪ್ರಧಾನಿ ಮೋದಿ

'ದಿ ಕೇರಳ ಸ್ಟೋರಿ' ಚಿತ್ರವು ಭಯೋತ್ಪಾದನೆಯ ಪಿತೂರಿಯನ್ನು ಆಧರಿಸಿದ್ದಾಗಿದ್ದು, ಇದು ಭಯೋತ್ಪಾದನೆಯ ಕೊಳಕು ಸತ್ಯವನ್ನು ತೋರಿಸುತ್ತದೆ ಮತ್ತು ಭಯೋತ್ಪಾದಕರ ವಿನ್ಯಾಸವನ್ನು ಬಹಿರಂಗಪಡಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪಕ್ಷಗಳ ಪ್ರಣಾಳಿಕೆಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ಭರಪೂರ ಭರವಸೆ, ಆದರೆ ವಿಶೇಷತೆಯಿಲ್ಲ: ತಜ್ಞರ ಅಭಿಮತ
ರಾಜಕೀಯ

ಪಕ್ಷಗಳ ಪ್ರಣಾಳಿಕೆಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ಭರಪೂರ ಭರವಸೆ, ಆದರೆ ವಿಶೇಷತೆಯಿಲ್ಲ: ತಜ್ಞರ ಅಭಿಮತ

ಕರ್ನಾಟಕ ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿ ನೀಡಿರುವ ಆರೋಗ್ಯ ಭರವಸೆಗಳು ಸಾಮಾನ್ಯವಾಗಿದ್ದು, ಕರ್ನಾಟಕದ ಆರೋಗ್ಯ ಸೂಚ್ಯಂಕವನ್ನು ಸುಧಾರಿಸುವಲ್ಲಿ ಕೊಡುಗೆ ನೀಡುವ ಸಾಧ್ಯತೆಗಳು ಕಡಿಮೆ, ಪ್ರಣಾಳಿಕೆಯಲ್ಲಿ ವಿಶೇಷತೆ ಕಂಡುಬರುತ್ತಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ ನಿಂದ ಭಜರಂಗದಳ ನಿಷೇಧ ಪ್ರಸ್ತಾಪ, ರಾಜ್ಯಾದ್ಯಂತ ಹೊತ್ತಿಕೊಂಡ 'ವಿವಾದದ ಬೆಂಕಿ', ಚುನಾವಣೆ ಹೊತ್ತಿನಲ್ಲಿ ಬಿಜೆಪಿಗೆ ಅಸ್ತ್ರ
ರಾಜಕೀಯ

ಕಾಂಗ್ರೆಸ್ ನಿಂದ ಭಜರಂಗದಳ ನಿಷೇಧ ಪ್ರಸ್ತಾಪ, ರಾಜ್ಯಾದ್ಯಂತ ಹೊತ್ತಿಕೊಂಡ 'ವಿವಾದದ ಬೆಂಕಿ', ಚುನಾವಣೆ ಹೊತ್ತಿನಲ್ಲಿ ಬಿಜೆಪಿಗೆ ಅಸ್ತ್ರ

ಮೊನ್ನೆ ಬಿಡುಗಡೆಯಾದ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೆ ಭಜರಂಗದಳ ಸಂಘಟನೆಯನ್ನು ನಿಷೇಧಿಸುವುದಾಗಿ ಕೈ ಪಕ್ಷ ಘೋಷಿಸಿಕೊಂಡಿದೆ. ಚುನಾವಣೆ ಹೊತ್ತಿನಲ್ಲಿ ಇದನ್ನೇ ಕೇಸರಿ ಪಡೆ ಅಸ್ತ್ರವಾಗಿ ಬಳಸಿಕೊಂಡಿದ್ದು ರಾಜ್ಯಾದ್ಯಂತ ಭಜರಂಗ ಬಲಿ ಮಂತ್ರವನ್ನು ಜಪಿಸುತ್ತಿದೆ. 

ಬಿಜೆಪಿಗೆ ಮತ ಹಾಕಿ ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯ ದೇಶವನ್ನಾಗಿ ಪರಿವರ್ತಿಸಿ: ಪ್ರಧಾನಿ ಮೋದಿ
ರಾಜಕೀಯ

ಬಿಜೆಪಿಗೆ ಮತ ಹಾಕಿ ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯ ದೇಶವನ್ನಾಗಿ ಪರಿವರ್ತಿಸಿ: ಪ್ರಧಾನಿ ಮೋದಿ

ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ದೇಶವನ್ನಾಗಿ ಮಾಡುವುದು ನನ್ನ ಕನಸು ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಈ ಕನಸನ್ನು ನನಸಾಗಿಸಲು ಮೇ 10 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ಜನತೆಗೆ ಮನವಿ ಮಾಡಿದ್ದಾರೆ.