KannadaprabhaNewsBulletin

ಭಾರತ-ಪಾಕ್ ಟಿ20 ಪಂದ್ಯ ವೀಕ್ಷಣೆ ವೇಳೆ ಹೃದಯಾಘಾತವಾಗಿ ವ್ಯಕ್ತಿ ಸಾವು, ಮಡಿಕೇರಿಯಲ್ಲಿ ಅನಿಲ ಸೋರಿಕೆಗೆ ಯುವತಿ ಬಲಿ!
ಭಾರತ-ಪಾಕಿಸ್ತಾನ ನಡುವಿನ ಟಿ20 ಕ್ರಿಕೆಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಪ್ರದರ್ಶನದ ಬಗ್ಗೆ ಬೇಸರಗೊಂಡಿದ್ದ ದೊಡ್ಡಮಲ್ತೆ ಗ್ರಾಮದ ನಿವಾಸಿ ಉದಯ್ ಎಂಬುವರಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ವಿರುದ್ಧ ಹಿಂಪಡೆದಿದ್ದ ಕೋಕಾ ಆರೋಪಗಳನ್ನು ಮರುಸ್ಥಾಪಿಸಿದ 'ಸುಪ್ರೀಂ'!
ಭಾರತ ಮಹತ್ವದ ಸಾಧನೆ ಮಾಡಿದ್ದು, ಈವರೆಗೂ ದೇಶದಲ್ಲಿ ವಿತರಣೆಯಾದ ಕೋವಿಡ್ ಲಸಿಕೆಗಳ ಪ್ರಮಾಣ 100 ಕೋಟಿ ದಾಟಿದೆ. ಭಾರತದ 100 ಕೋಟಿ ಡೋಸ್ ಲಸಿಕೆ ನೀಡಿಕೆ ಸಾಧನೆಯನ್ನು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕಿ ಪೂನಂ ಕೇತ್ರಪಾಲ್ ಶ್ಲಾಘಿಸಿದ್ದಾರೆ.

ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚುವುದು ಕಷ್ಟ. ಜಾಗ್ರತೆಯಿಂದ ವಾಹನ ಚಲಾಯಿಸಲು ಸವಾರರಿಗೆ #ಬಿಬಿಎಂಪಿ ಮನವಿ!
ಉತ್ತರಾಖಂಡದಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಿದ್ದು ಭೂಕುಸಿತಗಳು ಸಂಭವಿಸುತ್ತಿವೆ. ಹೀಗಾಗಿ ಪ್ರವಾಹದಲ್ಲಿ ಸಿಲುಕಿರುವ ಕರ್ನಾಟಕದ ಜನರ ಸಹಾಯಕ್ಕೆ ರಾಜ್ಯ ಸರ್ಕಾರ ಸಹಾಯವಾಣಿ ಸ್ಥಾಪಿಸಿದೆ.

ಲೋಕಾಯುಕ್ತ ಹಾಗೂ ಎಸಿಬಿ ಸ್ಪೆಷಲ್ ಪಿಪಿ ಕೆಎಸ್ಎನ್ ರಾಜೇಶ್ ವಿರುದ್ಧ ಅತ್ಯಾಚಾರ ಯತ್ನ ದೂರು: ಕನ್ನಡಪ್ರಭ.ಕಾಮ್
ಕನ್ನಡ ರಾಜ್ಯೋತ್ಸವವನ್ನು ಈ ಬಾರಿ ಅಭಿಯಾನ ರೂಪದಲ್ಲಿ ಆಚರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಧರಿಸಿದೆ. ಕನ್ನಡಕ್ಕಾಗಿ ನಾವು ಶೀರ್ಷಿಕೆಯಡಿಯಲ್ಲಿ, 'ಮಾತಾಡ್ ಮಾತಾಡ್ ಕನ್ನಡ ಅಭಿಯಾನ' ಒಂದು ವಾರಗಳ ಕಾಲ ನಡೆಯಲಿದೆ.

ಪೆಟ್ರೋಲ್-ಡೀಸೆಲ್ ಬೆಲೆ ಇಳಿಸುವ ಚಿಂತನೆಯಿದೆ ಎಂದು ಸಿಎಂ ಬೊಮ್ಮಾಯಿ; ದಾಖಲೆಯ ಗರಿಷ್ಠ ಮಟ್ಟಕ್ಕೆ ತಲುಪಿದ ತೈಲ ಬೆಲೆ!
ಪೆಟ್ರೋಲ್-ಡೀಸೆಲ್ ಬೆಲೆ ಇಳಿಸುವ ಚಿಂತನೆಯಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಇನ್ನು ಬೆಂಗಳೂರಿನಲ್ಲಿ ದಾಖಲೆಯ ಗರಿಷ್ಠ ಮಟ್ಟಕ್ಕೆ ತೈಲ ಬೆಲೆ ತಲುಪಿದೆ.

ಮಕ್ಕಳಿಗೆ ಕೋವಾಕ್ಸಿನ್ ಲಸಿಕೆ ತುರ್ತುಬಳಕೆ ಅನುಮತಿಗೆ ಡಿಜಿಸಿಐಗೆ ಸಮಿತಿ ಶಿಫಾರಸು, ಶಾಕ್ ಹೊಡೆದು ವ್ಯಕ್ತಿ ಸಾವು!
ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಕಳೆದ ರಾತ್ರಿ ಕರೆಂಟ್ ಶಾಕ್ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಬಾಲಕರ ಕ್ಷುಲ್ಲಕ ಜಗಳ ಕೋಮುಸಂಘರ್ಷಕ್ಕೆ ತಿರುಗಿದೆ.

ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ; ಕೆಪಿಟಿಸಿಎಲ್ ಪವರ್ ಮ್ಯಾನ್ ನೇಮಕಾತಿ ಆರಂಭ: ಕನ್ನಡಪ್ರಭ.ಕಾಮ್
ದಸರಾ ರಜೆ ಬಳಿಕ ರಾಜ್ಯದಲ್ಲಿ 1ರಿಂದ 5ನೇ ತರಗತಿ ಶಾಲೆಗಳ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ತಿಳಿಸಿದ್ದಾರೆ.

ಬಂಟ್ವಾಳದಲ್ಲಿ ಶಾಲೆಗೆ ತೆರಳುತ್ತಿದ್ದ ಬಾಲಕಿ ಅಪಹರಿಸಿ, ಗ್ಯಾಂಗ್ ರೇಪ್; ನಾಲ್ವರ ಬಂಧನ: ಕನ್ನಡಪ್ರಭ.ಕಾಮ್ 09-10-21
ಶಾಲೆಗೆ ಹೋಗುತ್ತಿದ್ದ ಬಾಲಕಿಯನ್ನು ಪರಿಚಿತ ವ್ಯಕ್ತಿ ಸೇರಿ ನಾಲ್ವರು ಕಾರಿನಲ್ಲಿ ಬಂದು ಅಪಹರಿಸಿದ್ದಾರೆ. ನಂತರ ಏಕಾಂತ ಸ್ಥಳದಲ್ಲಿ ಬಾಲಕಿ ಮೇಲೆ ಗ್ಯಾಂಗ್ ರೇಪ್ ಮಾಡಿ ನಂತರ ಆಕೆಯನ್ನು ತಂದು ಬ್ರಹ್ಮರಕುಟ್ಲುವಿನಲ್ಲಿ ಬಿಟ್ಟು ಹೋಗಿದ್ದಾರೆ.

ಬೆಂಗಳೂರಿನ ರಸ್ತೆಗುಂಡಿಗೆ ಯುವತಿ ಬಲಿ, ನಗರದಲ್ಲಿ ಮುಂದುವರೆದ ಕಟ್ಟಡ ಕುಸಿತ ದುರಂತ: ಕನ್ನಡಪ್ರಭ.ಕಾಮ್ 8-10-21
ಬೆಂಗಳೂರಿನಲ್ಲಿ ರಸ್ತೆಗುಂಡಿ ತಪ್ಪಿಸಲು ಹೋಗಿ ಸ್ಕೂಟರ್ ನಿಂದ ಬಿದ್ದು ಯುವತಿ ಮೃತಪಟ್ಟಿದ್ದಾಳೆ. ನಗರದಲ್ಲಿ ಮುಂದುವರೆದ ಕಟ್ಟಡ ಕುಸಿತ ದುರಂತ. ನಿನ್ನೆ ನಾಲ್ಕು ಅಂತಸ್ತಿನ ಕಟ್ಟಡ ಕುಸಿದಿದೆ.

