Kannada film industry

ಎಲ್ಲರನ್ನೂ ಗೌರವಿಸೋಣ, ಬಾಲಿವುಡ್ ಅನ್ನು ಕೀಳಾಗಿ ಕಾಣಬೇಡಿ: ನೆಪೊಟಿಸಂ ಅಂದ್ರೆ ತನ್ನ ಹಿನ್ನೆಲೆಯ ಬಲದಿಂದ ತುಳಿಯೋದು; ಯಶ್
ದಕ್ಷಿಣದ ಸಿನಿಮಾಗಳು ಹಿಂದಿ ಚಿತ್ರಗಳಿಗೆ ಸವಾಲಾಗಿ ನಿಂತಿರುವ ಈ ಹೊತ್ತಿನಲ್ಲಿ ಬಾಲಿವುಡ್ ಅನ್ನು ದ್ವೇಷಿಸುವಂತಹ ಕೆಲಸವೂ ನಡೆದಿದೆ. ಹೀಗಾಗಿ ರಾಕಿಂಗ್ ಸ್ಟಾರ್ ಯಶ್, ಯಾವ ಸಿನಿಮಾ ರಂಗವನ್ನೂ ಕೀಳಾಗಿ ಕಾಣಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಯಾವ ನಿರೀಕ್ಷೆಗಳೂ ಇಲ್ಲದೆ ನಾನು ಸಿನಿಮಾ ರಂಗ ಪ್ರವೇಶಿಸಿದ್ದೇನೆ: ನಟಿ ರಚನಾ ಇಂದರ್
ಶಶಾಂಕ್ ನಿರ್ದೇಶನದ ಲವ್ 360 ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ರಚನಾ ಇಂದರ್ ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದಲ್ಲಿ ನಟಿಯರಾದ ಅದಿತಿ ಪ್ರಭುದೇವ ಮತ್ತು ಮೇಘಾ ಶೆಟ್ಟಿ ಕೂಡ ಇದ್ದಾರೆ.

ಪುನೀತ್ ರಾಜ್‌ಕುಮಾರ್‌ರನ್ನು ಕಿರುತೆರೆಗೆ ಕರೆತಂದಿದ್ದ ಅನುಪ್ ಚಂದ್ರಶೇಖರನ್ ಈಗ ಸಿನಿಮಾ, ವೆಬ್ ಸೀರಿಸ್‌ನತ್ತ
ಟಿವಿ ಮನರಂಜನೆಯಲ್ಲಿ ಮೂರು ದಶಕಗಳ ಅನುಭವ ಹೊಂದಿರುವ ಹಾಗೂ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಕ್ಕಾಗಿ ಪುನೀತ್ ರಾಜ್‌ಕುಮಾರ್ ಅವರನ್ನು ಕಿರುತೆರೆಗೆ ಕರೆತಂದ ಅನುಪ್ ಚಂದ್ರಶೇಖರನ್ ಇದೀಗ ಸಿನಿಮಾ ರಂಗದತ್ತ ಮುಖಮಾಡಿದ್ದಾರೆ.

ಹೆಡ್ ಬುಷ್ ಸಿನಿಮಾದ ಯಶಸ್ಸು ಕನ್ನಡ ಚಿತ್ರರಂಗದಲ್ಲಿ ಮುಂದಿನ ಹೆಜ್ಜೆ ಇಡಲು ಸಹಾಯ ಮಾಡುತ್ತದೆ: ಪಾಯಲ್ ರಜಪೂತ್
ಪಾಯಲ್ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುವ ಬಗ್ಗೆ ಎದ್ದಿದ್ದ ಊಹಾಪೋಹಗಳಿಗೆ ಇದೀಗ ತೆರೆ ಬಿದ್ದಿದ್ದು, ಅಂತಿಮವಾಗಿ ಶೂನ್ಯಾ ನಿರ್ದೇಶನದ, ಧನಂಜಯ್ ಅಭಿನಯದ ಹೆಡ್ ಬುಷ್ ಚಿತ್ರದೊಂದಿಗೆ ಕೊನೆಗೊಂಡಿದೆ. ಹೆಡ್ ಬುಷ್ ಚಿತ್ರದ ನಾಯಕ ನಟ ಮತ್ತು ನಿರ್ಮಾಪಕ ಧನಂಜಯ್ ತನ್ನನ್ನು ಪಾತ್ರಕ್ಕಾಗಿ ಸಂಪರ್ಕಿಸಿದರು ಎನ್ನುತ್ತಾರೆ ನಟಿ.

ನನ್ನ ಜೀವನದ ಅನುಭವಗಳಿಂದಲೇ ನನ್ನ ಸಿನಿಮಾದ ಕಥೆಗಳನ್ನು ರಚಿಸಲಾಗಿದೆ: ವಿಜಯ್ ಪ್ರಸಾದ್
ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಿರ್ದೇಶಕ ವಿಜಯ ಪ್ರಸಾದ್, ಡಬಲ್ ಮೀನಿಂಗ್‌ನೊಂದಿಗೆ ಹಾಸ್ಯವನ್ನು ಬೆರೆಸುವಲ್ಲಿ ಹೆಸರುವಾಸಿ. ಆದರೆ, ಅವರ ಕಥೆಗಳು ಯಾವಾಗಲೂ ಪ್ರಮುಖ ಸಂದೇಶವನ್ನು ಕೂಡ ಹೊಂದಿರುತ್ತವೆ. ಅವರ ಮುಂದಿನ ತೋತಾಪುರಿ ಕೂಡ ಆಸಕ್ತಿದಾಯಕ ವಿಷಯವನ್ನು ಹೊಂದಿದೆ.

ಭಕ್ತಿ ಪ್ರಧಾನ ಚಿತ್ರ 'ವಿಶ್ವರೂಪಿಣಿ ಹುಲಿಗೆಮ್ಮ' ಅವತಾರದಲ್ಲಿ ಪ್ರಿಯಾಂಕಾ ಉಪೇಂದ್ರ
ಹಿರಿಯ ನಿರ್ದೇಶಕ ಸಾಯಿ ಪ್ರಕಾಶ್ ಅವರ ಮೊದಲ ಭಕ್ತಿ ಪ್ರಧಾನ ಸಿನಿಮಾ 'ವಿಶ್ವರೂಪಿಣಿ ಹುಲಿಗೆಮ್ಮ' ಚಿತ್ರದಲ್ಲಿ ಮೊದಲ ಬಾರಿಗೆ ದೇವಿ ಪಾತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಹೊಸಪೇಟೆಯಲ್ಲಿ ಶೂಟಿಂಗ್‌ನಲ್ಲಿರುವ ನಟಿ, ಚಿತ್ರದ ಬಗ್ಗೆ ಕೆಲವು ವಿವರಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ಭಾನುವಾರ ಬೆಳಗ್ಗೆ ಪುನೀತ್ ರಾಜ್ ಕುಮಾರ್ ಅಂತ್ಯಸಂಸ್ಕಾರ; ಮುಂಜಾನೆಯೇ ಅಂತಿಮಯಾತ್ರೆ, ಪಾರ್ಥೀವ ಶರೀರ ಸಾಗುವ ಮಾರ್ಗ ವಿವರ ಇಂತಿದೆ
ಹೃದಯಾಘಾತದಿಂದ ನಿಧನರಾದ ಪವರ್ ಸ್ಚಾರ್ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆ ಭಾನುವಾರ ಬೆಳಗ್ಗೆ ನೆರವೇರಲಿದ್ದು, ಪಾರ್ಥೀವ ಶರೀರದ ಅಂತಿಮಯಾತ್ರೆಯು ಭಾನುವಾರ (ಅಕ್ಟೋಬರ್ 31) ಮುಂಜಾನೆಯೇ ನಡೆಯಲಿದೆ.

ಪುನೀತ್ ರಾಜ್ ಕುಮಾರ್ ನಿಧನ ಸುದ್ದಿ ಪ್ರಸಾರ ಮಾಡಿದ ಬಿಬಿಸಿ ವರ್ಲ್ಡ್, ಶ್ರದ್ದಾಂಜಲಿ ಸಲ್ಲಿಕೆ
ನಿನ್ನೆ ಹೃದಯಾಘಾತದಿಂದ ನಿಧನರಾದ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನದ ಸುದ್ದಿ ದೇಶ ವಿದೇಶಗಳ ಸುದ್ದಿ ವಾಹಿನಿಗಳಲ್ಲೂ ಪ್ರಸಾರವಾಗಿದ್ದು, ಬಿಬಿಸಿ ವರ್ಲ್ಡ್ ನ್ಯೂಸ್ ಪುನೀತ್ ಸಾವು ಮತ್ತು ಅಭಿಮಾನಿಗಳ ಆಕ್ರಂದನದ ಬಗ್ಗೆ ವರದಿ ಮಾಡಿದೆ.

'ಅಪ್ಪು' ಇನ್ನಿಲ್ಲ: ನಾಳೆ ಬೆಳಗ್ಗೆ 6ಕ್ಕೆ ಪುನೀತ್ ಪಾರ್ಥೀವ ಶರೀರದ ಮೆರವಣಿಗೆ ಆರಂಭ, 10.30ರೊಳಗೆ ಅಂತ್ಯಕ್ರಿಯೆ
ನಿನ್ನೆ ಹೃದಯಾಘಾತದಿಂದ ನಿಧನರಾದ ಕನ್ನಡದ ಪವರ್ ಸ್ಚಾರ್ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆ ನಾಳೆ ಬೆಳಗ್ಗೆ 10.30ರೊಳಗೆ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿಸಲಾಗುತ್ತದೆ ಎಂದು ತಿಳಿದುಬಂದಿದೆ.

